• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದಿಯಲ್ಲಿ ನಿವಾರ್ ಚಂಡಮಾರುತದ ಮಾಹಿತಿ: ಹವಾಮಾನ ಇಲಾಖೆ ವಿರುದ್ಧ ಆಕ್ರೋಶ

|

ಚೆನ್ನೈ, ನವೆಂಬರ್ 25: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮವಾಗಿ ಚೆನ್ನೈಗೆ ಬುಧವಾರ ಸಂಜೆಯ ವೇಳೆಗೆ ಚಂಡಮಾರುತ ಬಂದು ಅಪ್ಪಳಿಸಿದೆ. ಈ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಅದು ಹಿಂದಿಯಲ್ಲಿರುವ ಕಾರಣ ತಮಿಳರು ಗರಂ ಆಗಿದ್ದಾರೆ.

ತಮಿಳುನಾಡಿಗೆ ಚಂಡಮಾರುತ ಮಂದು ಅಪ್ಪಳಿಸುವುದಾದರೆ ಅಲ್ಲಿಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಇಲ್ಲಿ ಹಿಂದಿ ಪ್ರೇಮವನ್ನು ತೋರಿಸಬೇಡಿ ಎಂದು ಜನರು ಹೇಳಿದ್ದಾರೆ.

ಮಧ್ಯರಾತ್ರಿ ಅಪ್ಪಳಿಸಲಿದೆ ನಿವಾರ್ ಚಂಡಮಾರುತ: ಸ್ಥಳಾಂತರ ಕಾರ್ಯ ಮುಂದುವರಿಕೆ

ದಕ್ಷಿಣ ಭಾರತದವರಿಗೆ ಅವರದೇ ಆದ ಭಾಷೆಗಳಿದ್ದು ಹಿಂದಿ ಕಲಿಯುವ ಅನಿವಾರ್ಯತೆ ಇಲ್ಲ ಎಂದಿದ್ದಾರೆ. ಹಿಂದಿ ಹೇರಿಕೆಯನ್ನು ವಿರೋಧಿಸಿ ಆರಂಭಿಸಿದ #StopHindiImposition ಹ್ಯಾಶ್‌ಟ್ಯಾಗ್ ಅಭಿಯಾನ ಸದ್ದು ಮಾಡುತ್ತಿದೆ.

ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಮಂಗಳವಾರ ಚಂಡಮಾರುತ ಸ್ವರೂಪ ಪಡೆದಿದೆ. 130-140 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.

ನಿವಾರ್ ಚಂಡಮಾರುತದ ಕಾರಣದಿಂದಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಭಾರತೀಯ ರೈಲ್ವೆ ಹಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿದೆ.

ನೈಋತ್ಯ ರೈಲ್ವೆ ಚೆನ್ನೈ ಮೂಲಕ ಬೆಂಗಳೂರಿಗೆ ಆಗಮಿಸುವ ಹಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಜಿಲ್ಲೆಗಳಿಗೆ ಆಗಮಿಸಬೇಕಿದ್ದ ರೈಲುಗಳ ಮಾರ್ಗ ಬದಲಾವಣೆಯಾಗಿದೆ.

English summary
In yet another incident causing outrage on social media, citizens, especially from those residing down south have shunned the Twitter posts on Cyclone Nivar by India Meteorological Department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X