• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧುರೈ:ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಮಾಲ್‌, ಹೋಟೆಲ್‌ಗೆ ಎಂಟ್ರಿ ಇಲ್ಲ

|
Google Oneindia Kannada News

ಮಧುರೈ, ಡಿಸೆಂಬರ್ 04: ಕೊರೊನಾ ಲಸಿಕೆ ಹಾಕಿಸಿಕೊಳ್ಳದವರಿಗೆ ಹೋಟೆಲ್‌, ಮಾಲ್‌ಗಳಿಗೆ ಪ್ರವೇಶಿಸಲು ಅವಕಾಶವಿಲ್ಲ ಎಂದು ಮಧುರೈ ಜಿಲ್ಲಾಡಳಿತ ತಿಳಿಸಿದೆ.

ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರು ಮುಂದಿನ ವಾರದಿಂದ ಮಾಲ್, ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸುವಂತಿಲ್ಲ.

ಜನರಿಗೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆಯಲು ಒಂದು ವಾರದ ಸಮಯವನ್ನು ನೀಡಲಾಗಿದೆ. ಲಸಿಕೆ ಪಡೆಯಲು ವಿಫಲರಾದ ಜನರಿಗೆ ಹೋಟೆಲ್, ಶಾಪಿಂಗ್ ಮಾಲ್‌ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ.

ಜನಸಂದಣಿ ತಾಣಗಳಿಗೆ ಹೋಗುವವರಿಗೆ ಲಸಿಕೆ ಕಡ್ಡಾಯ: ಸಿ.ಎನ್.ಅಶ್ವತ್ಥನಾರಾಯಣಜನಸಂದಣಿ ತಾಣಗಳಿಗೆ ಹೋಗುವವರಿಗೆ ಲಸಿಕೆ ಕಡ್ಡಾಯ: ಸಿ.ಎನ್.ಅಶ್ವತ್ಥನಾರಾಯಣ

ದೇಶಾದ್ಯಂದ ಶುಕ್ರವಾರದ ವೇಳೆ 126 ಕೋಟಿ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ನಿರ್ಬಂಧಗಳು ಜಾರಿಗೆ ಬರುವ ಮೊದಲು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆಯಲು ಜನರಿಗೆ ಒಂದು ವಾರದ ಗಡುವು ನೀಡಲಾಗಿದೆ.

ಇನ್ನು ಬೆಂಗಳೂರಲ್ಲಿ ಕೂಡ ಬಿಬಿಎಂಪಿ ಇಂಥದ್ದೇ ನಿರ್ಧಾರ ತೆಗೆದುಕೊಂಡಿದೆ. ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ನೀಡಿದ ಶಿಫಾರಸುಗಳನ್ನು ಆಧರಿಸಿ ಆರೋಗ್ಯ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. ತಿಂಗಳಿಗೆ ಒಮ್ಮೆ ಕನಿಷ್ಠ ಶೇ.10ರಷ್ಟು ಮಕ್ಕಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಹೋಟೆಲ್, ರಸ್ತೆ ಬದಿ ಮಾರಾಟಗಾರರು ಕುಟುಂಬಸ್ಥರ ಜೊತೆಯಾಗಿ ಲಸಿಕೆ ತೆಗೆದುಕೊಳ್ಳುವಂತೆ ಸಂಘ- ಸಂಸ್ಥೆಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.

ಮಾಲ್‌ಗಳು, ಥಿಯೇಟರ್‌ಗಳು ಮತ್ತು ಉದ್ಯಾನವನಗಳ ಒಳಗೆ ಎರಡೂ ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿದವರಿಗೆ ಮಾತ್ರ ಅನುಮತಿಸಲಾಗುವುದು. ಈ ಆದೇಶವೂ ಶೀಘ್ರದಲ್ಲಿಯೇ ಜಾರಿಗೆ ಬರುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬುಧವಾರ ಹೇಳಿದ್ದಾರೆ.

ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಮಾತನಾಡಿ, ಅಪಾರ್ಟ್‌ಮೆಂಟ್‌ ನಿವಾಸಿ, ಕಚೇರಿಗಳು ಮತ್ತು ಇತರ ಕಡೆ ಕೆಲಸ ಮಾಡುವ ಸಿಬ್ಬಂದಿ ಲಸಿಕೆ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಲು ಬಿಬಿಎಂಪಿ ಮಾರ್ಷಲ್‌ಗಳು, ಸೆಕ್ಯುರಿಟಿಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

"ಪ್ರತಿಯೊಬ್ಬರೂ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಹೊಂದಿದ್ದಾರೆ. ನಿಯಮಿತ ಕಡ್ಡಾಯ ಕೋವಿಡ್ ಸ್ಕ್ರೀನಿಂಗ್ ಜೊತೆಗೆ ಅವರು ಪ್ರವೇಶದ ಮೊದಲು ಲಸಿಕೆ ಪ್ರಮಾಣ ಪತ್ರ ತೋರಿಸಬೇಕು. ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರುಪೇರಾಗುತ್ತಿದ್ದು, ಹೊಸ ರೂಪುರೇಷೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ,'' ಎಂದರು.

ಬಿಬಿಎಂಪಿ ದಾಖಲೆಗಳ ಪ್ರಕಾರ ನವೆಂಬರ್ 30 ರವರೆಗೆ 1,40,20,978 ಡೋಸ್ ನೀಡಲಾಗಿದೆ. ಒಟ್ಟಾರೆಯಾಗಿ, 81,01,697 ಮೊದಲ ಡೋಸ್ ಮತ್ತು 59,19,281 ಎರಡನೇ ಡೋಸ್ ತೆಗೆದುಕೊಂಡಿದ್ದಾರೆ.

ಓಮಿಕ್ರಾನ್ ದೇಶವನ್ನು ಪ್ರವೇಶಿಸುವ ಆತಂಕವಿರುವುದರಿಂದ, ತೀವ್ರ ನಿಗಾ ಇರಿಸಲಾಗಿದೆ ಮತ್ತು ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. ಈಗ ಕಂಟೈನ್‌ಮೆಂಟ್ ಝೋನ್‌ಗಳು ಮತ್ತು ಕ್ಲಸ್ಟರ್‌ಗಳ ಮೇಲೆ ಕೇಂದ್ರೀಕರಿಸಲಾಗಿದೆ.

ಓಮಿಕ್ರಾನ್ ಅಪಾಯದಲ್ಲಿರುವ ದೇಶಗಳ ಪ್ರಯಾಣಿಕರನ್ನು ಮಾತ್ರ ಪರೀಕ್ಷಿಸಲಾಗುತ್ತದೆ. ಯುರೋಪ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್, ಕೋವಿಡ್ ವರದಿ ನೆಗೆಟಿವ್ ಆಗಿದ್ರೆ ಏಳು ದಿನಗಳವರೆಗೆ ಹೋಮ್ ಕ್ವಾರಂಟೈನ್ ಕಡ್ಡಾಯ. ಎಂಟನೇ ದಿನದಲ್ಲಿ ಮರು-ಪರೀಕ್ಷೆಗೆ ಒಳಗಾಗಬೇಕು.

ಕೋವಿಡ್ ವರದಿ ಪಾಸಿಟಿವ್ ಬಂದ್ರೆ ಜೀನೋಮಿಕ್ ಸೀಕ್ವೆನ್ಸಿಂಗ್ಗಾಗಿ ಮಾದರಿಗಳನ್ನು ಕಳುಹಿಸಲಾಗುತ್ತದೆ ಮತ್ತು ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ.

   ಓಮಿಕ್ರಾನ್ ರೂಪಾಂತರ, ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. | Oneindia Kannada | Oneindia Kannada
   English summary
   In the wake of two cases of Omicron detected in India, Tamil Nadu's Madurai today announced that unvaccinated people would not be allowed to enter malls, shopping complexes and other public places from next week.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X