ಆನ್ಲೈನ್ ಜೂಜು ನಿಷೇಧಕ್ಕೆ ಮುಂದಾದ ತಮಿಳುನಾಡು

ಚೆನ್ನೈ, ನ.6: ದುಡ್ಡು ನೀಡಿ ಆನ್ ಲೈನ್ ಗೇಮ್, ಫ್ಯಾಂಟಸಿ ಲೀಗ್, ಆಪ್ ಆಧಾರಿತ ಗೇಮಿಂಗ್ ನಿಷೇಧಕ್ಕೆ ತಮಿಳುನಾಡು ಸರ್ಕಾರ ಮುಂದಾಗಿದೆ.

ಆನ್ಲೈನ್ ಜೂಜು ಪ್ರಚಾರ ಮಾಡುತ್ತಿರುವ ಈ ಸೆಲೆಬ್ರಿಟಿಗಳಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿವೆ ಸಾವು ನೋವು ಸಂಭವಿಸಿದೆ ಎಂದು ಸೆಲೆಬ್ರಿಟಿಗಳಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿರುವ ಸುದ್ದಿ ಗೊತ್ತಿರಬಹುದು.

ದುಡ್ಡು ಕೊಟ್ಟು ಆಡುವಂಥ ಎಲ್ಲಾ ಬಗೆಯ ಆನ್ ಲೈನ್ ಗೇಮಿಂಗ್ ಮೇಲೆ ನಿಷೇಧ ಹೇರಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಕೊಯಮತ್ತೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದರು.

Tamil Nadu to ban online games involving money

ಆನ್ ಲೈನ್ ರಮ್ಮಿ ಮುಂತಾದ ಆಟದ ಚಟಕ್ಕೆ ಬಿದ್ದು ಅನೇಕ ಮಂದಿ ಹಣ ಕಳೆದುಕೊಂಡಿದ್ದಲ್ಲದೆ, ಕೆಲ ಆತ್ಮಹತ್ಯೆ ಪ್ರಕರಣಗಳು ನಡೆದಿವೆ ಈ ಬಗ್ಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಎಂ ಪಳನಿಸ್ವಾಮಿ ಈ ರೀತಿ ಉತ್ತರಿಸಿದರು.

ಶೀಘ್ರದಲ್ಲೇ ಈ ಕುರಿತಂತೆ ಕಾನೂನು ರೂಪಿಸಿ, ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಇಂಥ ಗೇಮಿಂಗ್, ಬೆಟ್ಟಿಂಗ್ ನಲ್ಲಿ ತೊಡಗಿದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ, ಜೈಲಿಗೆ ಹಾಕಲಾಗುವುದು ಎಂದು ಹೇಳಿದರು.

ಇಂಟರ್ನೆಟ್ ಬಳಕೆ ಹೆಚ್ಚಳವಾಗುತ್ತಿದ್ದಂತೆ ಅನೇಕ ಮಂದಿ ಆನ್ ಲೈನ್ ಆಟಗಳಿಗೆ ದಾಸರಾಗುತ್ತಿದ್ದಾರೆ.ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುವುದು ಹೆಚ್ಚಾಗುತ್ತಿದೆ ಎಂಬ ವರದಿ ಬಂದಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಹೇಳಿದರು.

ಆಂಧ್ರಪ್ರದೇಶದಲ್ಲಿಆನ್ ಲೈನ್ ಗೇಮಿಂಗ್, ಆನ್ ಲೈನ್ ಬೆಟ್ಟಿಂಗ್ ನಿಷೇಧಿಸಲಾಗಿದೆ. ಈ ಕುರಿತಂತೆ ಕೂಡಲೇ ಕ್ರಮ ಜರುಗಿಸಿದ್ದು, ಕೇಂದ್ರ ಮಾಹಿತಿ ಮತ್ತು ಟೆಲಿಕಾಂ ಸಚಿವ ರವಿ ಶಂಕರ್ ಪ್ರಸಾದ್ ಅವರಿಗೆ ಅಕ್ಟೋಬರ್ 27ರಂದೇ ಪತ್ರ ಬರೆದಿದ್ದು, ಆನ್ ಲೈನ್ ಗೇಮಿಂಗ್ ಹಾವಳಿಯಿಂದ ಅನೇಕ ಸಾಮಾಜಿಕ ಪಿಡುಗು ಆರಂಭವಾಗಿದ್ದು, ಹಣ, ಪ್ರಾಣ ಎಲ್ಲವೂ ಹೋಗಿದೆ. ಬೆಟ್ಟಿಂಗ್ ಯಾವುದೇ ಮಾದರಿಯಾದರೂ ಅದರಿಂದ ನಷ್ಟ ಹೊಂದುವವರೇ ಅಧಿಕ ಎಂದು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+