ಟೈಮ್ಸ್ ನೌ ಸಮೀಕ್ಷೆ: ಡಿಎಂಕೆ- ಕಾಂಗ್ರೆಸ್ ಮೈತ್ರಿಗೆ ಭರ್ಜರಿ ಜಯ

ಚುನಾವಣೆ ಘೋಷಣೆಯಾದ ಬಳಿಕ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಅನೇಕ ಸಂಸ್ಥೆಗಳು ಪ್ರಕಟಿಸುತ್ತಿವೆ. ತಮಿಳುನಾಡಿನಲ್ಲಿ ಈ ಬಾರಿ ಆಡಳಿತಾರೂಢ ಎಐಎಡಿಎಂಕೆಗೆ ಭಾರಿ ಮುಖಭಂಗವಾಗಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಇಂದು ಹೇಳಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎಐಎಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಆದರೆ, ಅಧಿಕಾರ ಪಡೆಯಲು ಸಾಧ್ಯವಿಲ್ಲ ಎಂದು ಎಬಿಪಿ ಟೈಮ್ಸ್ ನೌ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

ತಮಿಳುನಾಡು ರಾಜ್ಯದ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಿದೆ. 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ. ಇದಕ್ಕೂ ಮುನ್ನ ಚುನಾವಣಾ ಪೂರ್ವ ಸಮೀಕ್ಷೆ ಫಲಿತಾಂಶ ಹೇಗಿದೆ? ಮುಂದೆ ಓದಿ...

ಯುಪಿಎ ಮೈತ್ರಿ ಕೂಟಕ್ಕೆ ಭರ್ಜರಿ ಜಯ

ಯುಪಿಎ ಮೈತ್ರಿ ಕೂಟಕ್ಕೆ ಭರ್ಜರಿ ಜಯ

ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿಕೂಟಕ್ಕೆ ಈ ಬಾರಿ ಭರ್ಜರಿ 158ಕ್ಕೂ ಅಧಿಕ ಸ್ಥಾನಗಳು ಲಭಿಸಲಿದ್ದು, ಅಧಿಕಾರಕ್ಕೆ ಸುಲಭವಾಗಿ ಏರಲಿದೆ. 2016ರಲ್ಲಿ 60 ಸ್ಥಾನಗಳಿಸಿದ್ದವು ಎಂದು ಟೈಮ್ಸ್ ನೌ ಸಿ-ವೋಟರ್ ಸಮೀಕ್ಷೆ ಅಂದಾಜಿಸಿದೆ.

ಎನ್ಡಿಎಗೆ ಆಘಾತ ಕಾದಿದೆ

ಎನ್ಡಿಎಗೆ ಆಘಾತ ಕಾದಿದೆ

ಎಐಎಡಿಎಂಕೆ ಹಾಗೂ ಬಿಜೆಪಿ ಮಿತ್ರಪಕ್ಷಗಳನ್ನು ಒಳಗೊಂಡ ಎನ್ಡಿಎ ಮೈತ್ರಿಕೂಟಕ್ಕೆ ಈ ಬಾರಿ 65 ಸ್ಥಾನ ಲಭಿಸಬಹುದು ಎಂದು ಅಂದಾಜಿಸಲಾಗಿದೆ. 2016ರಲ್ಲಿ 136 ಸ್ಥಾನ ಗಳಿಸಿದ್ದ ಮೈತ್ರಿಕೂಟಕ್ಕೆ ಈ ಬಾರಿ ಭಾರಿ ಆಘಾತ ಕಾದಿದೆ ಎಂದು ಟೈಮ್ಸ್ ನೌ ಸಿ-ವೋಟರ್ ಸಮೀಕ್ಷೆ ಹೇಳಿದೆ.

ಮತ ಗಳಿಕೆ ಸಾಧ್ಯತೆ

ಮತ ಗಳಿಕೆ ಸಾಧ್ಯತೆ

ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಯುಪಿಎಗೆ ಈ ಬಾರಿ ಶೇ 43.2 ಮತ ಗಳಿಕೆ ಸಾಧ್ಯತೆಯಿದೆ. 2016ಕ್ಕೆ ಹೋಲಿಸಿದರೆ ಶೇ 3.8 ರಷ್ಟು ಏರಿಕೆ ಕಂಡು ಬಂದಿದೆ. 2016ರಲ್ಲಿ ಶೇ 39.4ರಷ್ಟು ಮತ ಗಳಿಸಿತ್ತು. ಇದೇ ವೇಳೆ ಬಿಜೆಪಿ- ಎಐಎಡಿಎಂಕೆಯ ಎನ್ಡಿಎ ಮೈತ್ರಿಕೂಟಕ್ಕೆ ಶೇ 11.6 ರಷ್ಟು ಮತಗಳು ನಷ್ಟವಾಗಲಿದ್ದು, ಶೇ 32.1ಕ್ಕೆ ಕುಸಿಯಲಿದೆ. 2016ರಲ್ಲಿ 43.7 ರಷ್ಟು ಮತಗಳಿಸಿದ್ದವು

ತಮಿಳುನಾಡಿನ ಸಿಎಂ ಸ್ಥಾನಕ್ಕೆ ಯಾರು ಸೂಕ್ತ?

ತಮಿಳುನಾಡಿನ ಸಿಎಂ ಸ್ಥಾನಕ್ಕೆ ಯಾರು ಸೂಕ್ತ?

ತಮಿಳುನಾಡಿನಲ್ಲಿ ಹಾಲಿ ಸಿಎಂ ಪಳನಿಸ್ವಾಮಿಗೆ ಹೋಲಿಸಿದರೆ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಅವರು ಮುಂದಿನ ಸಿಎಂ ಆಗಲು ಸೂಕ್ತ ಎಂದು ಸಮೀಕ್ಷೆಯಲ್ಲಿ ಜನತೆ ಹೇಳಿದ್ದಾರೆ.

ಪಳನಿಸ್ವಾಮಿ ಅವರು ಶೇ 31ರಷ್ಟು ಮತ ಗಳಿಸಿದ್ದಾರೆ. ಎಂಕೆ ಸ್ಟಾಲಿನ್ ಶೇ 38.4ರಷ್ಟು ಮತಗಳಿಸಿದ್ದಾರೆ. ಜೈಲಿನಿಂದ ಬಂದ ಶಶಿಕಲಾ ಅವರಿಗೆ ಶೇ 3.9ರಷ್ಟು ಮತ ಸಿಕ್ಕಿವೆ. ಇನ್ನು ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ ರಜನಿಕಾಂತ್ ಅವರ ಪರ ಶೇ 4.3ರಷ್ಟು ಮಂದಿ ಮತ ಹಾಕಿದ್ದಾರೆ. ಎಂಎನ್ಎಂನ ಕಮಲ್ ಹಾಸನ್ ಅವರಿಗೆ ಶೇ 7.4ರಷ್ಟು ಹಾಗೂ ಡಾ ಎಸ್ ರಾಮದಾಸ್ ಶೇ 2.5, ಕೆಎಸ್ ಅಳಗಿರಿ ಶೇ 1.7, ಓ ಪನ್ನೀರ್ ಸೆಲ್ವಂ 2.6 ಹಾಗೂ ಇತರರಿಗೆ ಶೇ 8.2ರಷ್ಟು ಮತ ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+