ಮಗಳ ರಕ್ಷಣೆಗಾಗಿ ಗಂಡಾಗಿ ವೇಷ ಬದಲಿಸಿ ಮೂವತ್ತು ವರ್ಷದಿಂದ ಜೀವನ ಸಾಗಿಸುತ್ತಿರುವ ಅಮ್ಮ!

ಚೆನ್ನೈ, ಮೇ. 17: ಇದು ಮೂವತ್ತು ವರ್ಷಗಳ ಹಿಂದೆ ನಡೆದ ನೈಜ ಘಟನೆ. ಮದುವೆಯಾದ ಹದಿನೈದು ದಿನಗಳ ನಂತರ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಅಷ್ಟೊತ್ತಿಗೆ ಪತ್ನಿ ಗರ್ಭವತಿಯಾಗಿದ್ದಳು. ಜನಿಸಿದ ಮಗುವನ್ನು ರಕ್ಷಿಸಲು ಈ ಮಹಾ ತಾಯಿ ಪಂಚೆ ಅಂಗಿ ಧರಿಸಿ ಗಂಡು ವೇಷ ಧರಿಸಿ ಬದಕಿದಳು. ಕಳೆದ ಮೂವತ್ತು ವರ್ಷದಿಂದ ಗಂಡು ವೇಷ ಧರಿಸಿ 'ಮುತ್ತು ಮಾಸ್ಟರ್' ಅಂತಲೇ ಖ್ಯಾತಿ ಪಡದಿರುವ ಕರುಣಾಜನಕ ಕಥೆ ಇಲ್ಲಿದೆ.

ಇವತ್ತು ಮಹಿಳೆಗೆ ಇರುವ ಸ್ವಾತಂತ್ರ್ಯ ಮೂವತ್ತು ವರ್ಷಗಳ ಹಿಂದೆ ಇರಲಿಲ್ಲ. ಇವತ್ತು ಗಂಡು ಮಾಡುವ ಯವುದೇ ಕೆಲಸಗಳನ್ನು ಹೆಣ್ಣು ಮಾಡಿದರೂ ಸಮಾಜ ಅಂಗೀಕರಿಸುತ್ತದೆ. ಆದ್ರೆ ಮೂವತ್ತು ವರ್ಷಗಳ ಹಿಂದೆ ಒಬ್ಬ ಹೆಣ್ಣು ಗಂಡು ಮಾಡುವ ಕೆಲಸ ಮಾಡಿದರೆ ನೋಡುವ ದೃಷ್ಟಿಕೋನವೇ ಬದಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬಳ ಬದುಕಿನಲ್ಲಿ ನಡೆದ ನೈಜ ರೋಚಕ ಘಟನೆ ಇಲ್ಲಿದೆ.

ಇದು ಮೂವತ್ತು ವರ್ಷಗಳ ಹಿಂದೆ ನಡೆದ ಘಟನೆ. ಆಕೆ ಹೆಸರು ಪೇಚಿಯಮ್ಮಾಳ್. ತಮಿಳುನಾಡಿನ ಕಟ್ಟು ನಾಯಕನ ಪಟ್ಟಿ ಗ್ರಾಮದ ನಿವಾಸಿ. 20 ವರ್ಷ ವಯಸ್ಸಾಗಿದ್ದ ಪೇಚಿಯಮ್ಮಾಳ್ ಮದುವೆಯಾಗಿ ಹದಿನೈದು ದಿನವಾಗಿತ್ತು. ಗಂಡನಿಗೆ ಹೃದಯಾಘಾತದಿಂದ ಮೃತಪಟ್ಟಿದ್ದ. ಆದ್ರೆ ಪೇಚಿಯಮ್ಮಾಳ್ ಗರ್ಭವತಿಯಾಗಿದ್ದಳು. ಆ ನಂತರ ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು. ಗಂಡನಿಲ್ಲದ ಹೆಣ್ಣೆ ಕೆಲಸ ಕೇಳಿಕೊಂಡು ಹೋದಾಗ ಕಿರುಕುಳ ಎದುರಿಸುವಂತಾಗಿತ್ತು. ಇದರಿಂದ ಬೇಸತ್ತ ಪೇಚಿಯಮ್ಮಾಳ್ ಗಂಡು ವೇಷ ಧರಿಸುವ ನಿರ್ಧಾರ ಮಾಡಿದಳು.

Tamil Nadu: 57-year-old Woman Petchiammal who becomes a man for her daughter

ಲುಂಗಿ ಧರಿಸಿ ಅಂಗಿ ಹಾಕಿದಳು. ಗಂಡಿನಂತೆ ಕಟ್ಟಿಂಗ್ ಮಾಡಿಸಿದಳು. ಆ ನಂತರ ಪೇಂಟರ್ ಅಗಿ ಕೆಲಸಕ್ಕೆ ಸೇರಿಕೊಂಡಳು. ತನ್ನ ಹೆಸರು ಮುತ್ತು ಮಾಸ್ಟರ್ ಎಂದೇ ಹೇಳಿಕೊಂಡಳು. ಹೀಗೆ ನಾನಾ ಕೆಲಸ ಮಾಡಿಕೊಂಡು ತನ್ನ ಮಗಳಿಗಾಗಿ ಒಂದಷ್ಟು ಹಣ ಉಳಿತಾಯ ಮಾಡಿದಳು. ಹೀಗೆ ತನ್ನ ಮಗುವಿನ ರಕ್ಷಣೆ ಜತೆಗೆ ತನ್ನನ್ನು ರಕ್ಷಣೆ ಮಾಡಿಕೊಂಡ ಮುತ್ತು ಮಾಸ್ಟರ್ ಗಂಡು ವೇಷ ಧರಿಸಿದ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾಳೆ.

"ನನ್ನ ಮಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ನಾನು ಗಂಡು ವೇಷ ಧರಿಸಲು ನಿರ್ಧರಿಸಿದೆ. ಹೀಗಾಗಿ ಕೆಲಸ ಮಾಡುವ ಜಾಗದಲ್ಲಿ ನಿರ್ಭಯವಾಗಿ ಕೆಲಸ ಮಾಡುವ ವಾತಾವರಣ ಇರುತ್ತಿತ್ತು. ನಾನು ಕೆಲಸಕ್ಕಾಗಿ ಬೇರಡೆ ಹೋಗುವಾಗ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ" ಎಂಧು ಮುತ್ತು ಮಾಸ್ಟರ್ ಹೇಳಿಕೊಂಡಿದ್ದಾರೆ.

Tamil Nadu: 57-year-old Woman Petchiammal who becomes a man for her daughter

ಹಾಗಂತ ನನ್ನ ಮಗಳಿಗೆ ತಾಯಿತನ ಇಲ್ಲದಂತೆ ಮಾಡಿಲ್ಲ. ನಾನು ಮನೆಗೆ ಬಂದರೆ ಮುದ್ದು ಮಗಳಿಗೆ ಅಮ್ಮನಾಗಿಯೇ ಪ್ರೀತಿಸಿದ್ದೇನೆ. ಅಮ್ಮನ ಪ್ರೀತಿ ಧಾರೆ ಎರೆದಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ತನ್ನ ಮಗಳಿಗಾಗಿ ಮೂವತ್ತು ವರ್ಷದಿಂದ ಗಂಡು ವೇಷ ಧರಿಸಿರುವ ಮುತ್ತು ಮಾಸ್ಟರ್ ಸ್ಟೋರಿ ತಮಿಳುನಾಡಿನಲ್ಲಿ ವೈರಲ್ ಆಗಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+