ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಆರೋಪ: ಅರೆಸ್ಟ್ ಆದ ತಮಿಳು ನಟನ ಮಗ!

|
Google Oneindia Kannada News

ತಮಿಳಿನ ಹಿರಿಯ ನಟ ಸೂರ್ಯಕಾಂತ್ ಪುತ್ರ ವಿಜಯ್ ಹರೀಶ್ ಅರೆಸ್ಟ್ ಆಗಿದ್ದಾನೆ. ಅತ್ಯಾಚಾರ ಆರೋಪ ಎದುರಿಸುತ್ತಿರುವ 25 ವರ್ಷದ ವಿಜಯ್ ಹರೀಶ್ ನ ತಿರುವೊಟ್ಟಿಯೂರ್ ಪೊಲೀಸರು ಬಂಧಿಸಿದ್ದಾರೆ.

ಅಣ್ಣಾ ನಗರ್ ನಿವಾಸಿ ಆಗಿರುವ ವಿಜಯ್ ಹರೀಶ್ ವಿರುದ್ಧ ಅತ್ಯಾಚಾರಕ್ಕೊಳಗಾದ ಚೆನ್ನೈನ 20 ವರ್ಷದ ಕಾಲೇಜು ವಿದ್ಯಾರ್ಥಿನಿ ದೂರು ನೀಡಿದ್ದಾಳೆ.

ಅತ್ಯಾಚಾರ ಕೇಸ್: ಚಿನ್ಮಯಾನಂದ ಜಾಮೀನು ರದ್ದುಗೊಳಿಸಲು ಸುಪ್ರೀಂ ನಕಾರಅತ್ಯಾಚಾರ ಕೇಸ್: ಚಿನ್ಮಯಾನಂದ ಜಾಮೀನು ರದ್ದುಗೊಳಿಸಲು ಸುಪ್ರೀಂ ನಕಾರ

ಪ್ರಕರಣದ ಹಿನ್ನಲೆ: ಕಳೆದ ಜನವರಿ 2 ರಂದು ಚೆನ್ನೈನ ವಿರುಗಮ್ ಬಾಕ್ಕಮ್ ನಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ತನ್ನ ಮೇಲೆ ವಿಜಯ್ ಹರೀಶ್ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರಿಗೆ ಸಂತ್ರಸ್ತೆ ದೂರು ಕೊಟ್ಟಿದ್ದಾಳೆ

Tamil Actor Suryakanths Son Vijay Harish Gets Arrested On Rape Charges

''ಜ್ಯೂಸ್ ನಲ್ಲಿ ಮತ್ತು ಬರುವ ಮಾತ್ರೆ ಸೇರಿಸಿ, ನನ್ನ ಪ್ರಜ್ಞೆ ತಪ್ಪಿಸಿ, ನನ್ನ ಅರಿವಿಗೆ ಬಾರದಂತೆ ಅತ್ಯಾಚಾರ ಮಾಡಿದ್ದಾನೆ'' ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾಳೆ.

ಸಾಲದಕ್ಕೆ, ವಿಡಿಯೋ ಕೂಡ ಸೆರೆ ಹಿಡಿದಿರುವ ವಿಜಯ್ ಹರೀಶ್, ಅದನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ಹೀಗಾಗಿ, ವಿಜಯ್ ಹರೀಶ್ ವಿರುದ್ಧ ಐಪಿಸಿ ಸೆಕ್ಷನ್ 328, 354 B, 354 C, 376 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದು ನಮ್ಮ ವ್ಯವಸ್ಥೆಯ ವೈಫಲ್ಯ, ಇಡೀ ವಿಶ್ವವೇ ನೋಡುತ್ತಿದೆ: ನಿರ್ಭಯಾ ತಾಯಿಇದು ನಮ್ಮ ವ್ಯವಸ್ಥೆಯ ವೈಫಲ್ಯ, ಇಡೀ ವಿಶ್ವವೇ ನೋಡುತ್ತಿದೆ: ನಿರ್ಭಯಾ ತಾಯಿ

ಅಂದ್ಹಾಗೆ, ಹಿರಿಯ ನಟ ಸೂರ್ಯಕಾಂತ್ ಪುತ್ರ ವಿಜಯ್ ಹರೀಶ್ ಕೂಡ ತಮಿಳಿನಲ್ಲಿ ಉದಯೋನ್ಮುಖ ನಟ. ತಮಿಳು ಸಿನಿಮಾವೊಂದರಲ್ಲಿ ವಿಜಯ್ ಹರೀಶ್ ನಟಿಸುತ್ತಿದ್ದಾನೆ.

English summary
Tamil Actor Suryakanth's son Vijay Harish gets Arrested on Rape charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X