ಭಾನುವಾರ ಶಿವಮೊಗ್ಗ-ತಿರುಪತಿ-ಚೆನ್ನೈ ರೈಲು ಸೇವೆಗೆ ಚಾಲನೆ; ವೇಳಾಪಟ್ಟಿ

ಚೆನ್ನೈ, ಏಪ್ರಿಲ್ 17; ನೈಋತ್ಯ ರೈಲ್ವೆ ಶಿವಮೊಗ್ಗ-ತಿರುಪತಿ-ಚೆನ್ನೈ ನಡುವೆ ಹೊಸ ರೈಲು ಸೇವೆ ಆರಂಭಿಸಲಿದೆ. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ 6.15ಕ್ಕೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ.

ವಾರಕ್ಕೆ ಎರಡು ದಿನ ಶಿವಮೊಗ್ಗ-ರೇಣಿಗುಂಟಾ (ತಿರುಪತಿ ಸಮೀಪ) ಮಾರ್ಗವಾಗಿ ಚೆನ್ನೈಗೆ ಹೋಗುವ ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗುತ್ತಿದೆ. ಈ ರೈಲು ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿ ಮತ್ತು ಮಟ್ರೋ ನಗರವಾದ ಚೆನ್ನೈಗೆ ಮಲೆನಾಡಿನಿಂದ ಸಂಪರ್ಕ ಕಲ್ಪಿಸಲಿದೆ.

ಭಾನುವಾರ ಸಂಜೆ 6.15ಕ್ಕೆ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದ ಬಿ. ವೈ. ರಾಘವೇಂದ್ರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ವಾರದಲ್ಲಿ ಎರಡು ದಿನ ಈ ರೈಲು ಸಂಚಾರ ನಡೆಸಲಿದೆ.

Shivamogga Tirupati Chennai Train From April 17th Schedule service

ಕೋವಿಡ್ ಕಾರಣದಿಂದ ಸ್ಥಗಿತ; ಶಿವಮೊಗ್ಗ-ತಿರುಪತಿಗೆ ನೇರ ರೈಲು ಸಂಪರ್ಕದ ಬೇಡಿಕೆಯನ್ನು ಪರಿಗಣಿಸಿ 2019ರ ನವೆಂಬರ್‌ನಲ್ಲಿ ರೈಲು ಸೇವೆ ಆರಂಭಿಸಲಾಗಿತ್ತು. ಬಳಿಕ ಕೋವಿಡ್ ಸಮಯದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಈ ರೈಲಿಗೆ ಹೆಚ್ಚಿನ ಬೇಡಿಕೆ ಇದ್ದ ಕಾರಣ ಚೆನ್ನೈ ಮತ್ತು ಪ್ರಸಿದ್ಧ ಯಾತ್ರಾತಾಣ ತಿರುಪತಿ (ರೇಣಿಗುಂಟ) ರೈಲನ್ನು ಮರು ಪ್ರಾರಂಭಿಸಲು ಬಿ. ವೈ. ರಾಘವೇಂದ್ರ ಮನವಿ ಮಾಡಿದ್ದರು. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ರೈಲನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯದ ಒಪ್ಪಿಗೆ ಪಡೆದಿತ್ತು.

Shivamogga Tirupati Chennai Train From April 17th Schedule service

ರೈಲು ಸಂಖ್ಯೆ 06223/06224 ಎರಡು ಎಸ್. ಎಲ್. ಆರ್. ಡಿ., 4 ಸಾಮಾನ್ಯ ಕೋಚ್‍ಗಳು, 6 ಸ್ಲೀಪರ್ ಕೋಚ್‍ಗಳು, ಒಂದು ಎರಡನೆಯ ದರ್ಜೆ ಹವಾ ನಿಯಂತ್ರಿತ ಮತ್ತು ಒಂದು ಮೂರನೆಯ ದರ್ಜೆ ಹವಾ ನಿಯಂತ್ರಿತ ಕೋಚ್‍ಗಳನ್ನು ಒಳಗೊಂಡಿದೆ.

ವೇಳಾಪಟ್ಟಿ; ರೈಲು ಸಂಖ್ಯೆ 06223 17/04/2022 ರಿಂದ 28/06/2022 ರವರೆಗೆ ವಾರದಲ್ಲಿ ಎರಡು ದಿನ (ಭಾನುವಾರ ಮತ್ತು ಮಂಗಳವಾರ) ಶಿವಮೊಗ್ಗದಿಂದ ಹೊರಟು ರೇಣಿಗುಂಟಾ (ತಿರುಪತಿ) ಮಾರ್ಗವಾಗಿ ಪುರಚಿ ತಲೈವರ್ ಎಂ. ಜಿ. ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣ ತಲುಪುತ್ತದೆ.

ರೈಲು ಸಂಖ್ಯೆ 06224 18/04/2022 ರಿಂದ 29/06/2022 ರವರೆಗೆ ಪ್ರತಿ ಸೋಮವಾರ ಮತ್ತು ಬುಧವಾರ ಪುರಚಿ ತಲೈವರ್ ಎಂ. ಜಿ. ಆರ್. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಟು ರೇಣಿಗುಂಟ (ತಿರುಪತಿ) ಮಾರ್ಗವಾಗಿ ಶಿವಮೊಗ್ಗಕ್ಕೆ ತಲುಪುತ್ತದೆ.

ಪ್ರಾಯೋಗಿಕ ಸಂಚಾರದ ನಂತರ ಪ್ರಯಾಣಿಕರ ಬೇಡಿಕೆ ನೋಡಿಕೊಂಡು ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗೆ ಸಂಪರ್ಕಿಸುವ ರೈಲು ಸೇವೆಗಳನ್ನು ಖಾಯಂಗೊಳಿಸುವ ಕುರಿತು ತೀರ್ಮಾನ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+