ಮೋದಿ ಸ್ವಚ್ಛತಾ ಅಭಿಯಾನ ಬೆಂಬಲಿಸಿ ರಜನಿ ಟ್ವೀಟ್
ಚೆನ್ನೈ, ಸೆಪ್ಟೆಂಬರ್ 22: ಪ್ರಧಾನಿ ನರೇಂದ್ರ ಮೋದಿಯವರ 'ಸ್ವಚ್ಛತಾ ಹೇ ಸೇವಾ' ಅಭಿಯಾನವನ್ನು ಬೆಂಬಲಿಸಿ ಸೂಪರ್‌ಸ್ಟಾರ್ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
'ಸ್ವಚ್ಛತಾ ಹೇ ಸೇವಾ' ಕುರಿತು ಟ್ವೀಟ್ ಮಾಡಿರುವ ರಜನೀಕಾಂತ್, "ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 'ಸ್ವಚ್ಛತಾ ಹೇ ಸೇವಾ' ಅಭಿಯಾನವನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಸ್ವಚ್ಛತಾ ಕಾರ್ಯ ದೇವತಾ ಕಾರ್ಯ," ಎಂದು ಹೇಳಿದ್ದಾರೆ.

ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿಗಳು ಹಲವು ಸಮಯದಿಂದ ಓಡಾಡುತ್ತಿವೆ. ಇದರ ಮಧ್ಯೆ ರಜನಿಕಾಂತ್ ಮೋದಿಯವರನ್ನು ಬೆಂಬಲಿಸಿ ಟ್ವೀಟ್ ಮಾಡಿರುವುದು ಹಲವು ಊಹಾಪೋಹಗಳಿಕೆ ಕಾರಣವಾಗಿದೆ.
I extend my full support to our hon. Prime Minister @narendramodi ji’s #SwachhataHiSeva mission. Cleanliness is godliness.
— Rajinikanth (@superstarrajini) September 22, 2017












Click it and Unblock the Notifications