ವೈದ್ಯಕೀಯ ಪರೀಕ್ಷೆಗೆ ಅಮೆರಿಕಕ್ಕೆ ತೆರಳಿದ ನಟ ರಜನೀಕಾಂತ್

ಚೆನ್ನೈ, ಜೂನ್ 29: ಕಾಲ ಕರಿಕಾಳನ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ತಮಿಳು ನಟ ರಜನೀಕಾಂತ್ ಗುರುವಾರ ಆರೋಗ್ಯ ತಪಾಸಣೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಅವರಿಗೆ ಆಪ್ತವಾದ ಮೂಲಗಳು ತಿಳಿಸಿವೆ.

"ಅವರು (ಮುಂಬೈನಿಂದ ಅಮೆರಿಕಕ್ಕೆ) ತೆರಳಿರುವುದು ಮಾಮೂಲಿನ ಆರೋಗ್ಯ ತಪಾಸಣೆಗಾಗಿ" ಎಂದು ಮೂಲಗಳು ಮಾಹಿತಿ ನೀಡಿವೆ. ಪಾ ರಂಜಿತ್ ನಿರ್ದೇಶನದ ಕಾಲ ಕರಿಕಾಳನ್ ಸಿನಿಮಾದ ಚಿತ್ರೀಕರಣಕ್ಕಾಗಿ ರಜನೀಕಾಂತ್ ಕಳೆದ ವಾರ ಚೆನ್ನೈನಿಂದ ಮುಂಬೈಗೆ ತೆರಳಿದ್ದರು.

Rajinikanth

ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ ಎಂದು ಸುಳಿವು ಬಿಟ್ಟುಕೊಟ್ಟಿದ್ದಾರೆ ರಜನೀಕಾಂತ್. "ನಾನು ಸುದ್ದಿಯನ್ನು ನಿರಾಕರಿಸುವುದಿಲ್ಲ. ಸದ್ಯಕ್ಕೆ ಚರ್ಚೆ ನಡೆಸುತ್ತಿದ್ದೇನೆ. ಆ ಬಗ್ಗೆ ಇನ್ನೂ ನಿರ್ಧಾರವನ್ನು ಕೈಗೊಂಡಿಲ್ಲ. ಒಂದು ಸಲ ನಿರ್ಧಾರ ಕೈಗೊಂಡ ನಂತರ ನಿಮಗೆ (ಮಾಧ್ಯಮಗಳಿಗೆ) ತಿಳಿಸುತ್ತೇನೆ" ಎಂದು ಅವರು ಹೇಳಿದ್ದರು.

ಕಳೆದ ಕೆಲವು ದಿನಗಳಿಂದ ಮುಂಬೈನಲ್ಲಿ ಕಾಲ ಕರಿಕಾಳನ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕಳೆದ ಮೇನಲ್ಲಿ ರಜನೀಕಾಂತ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. 'ಯುದ್ಧಕ್ಕೆ ಸಿದ್ಧ ಮಾಡಿಕೊಳ್ಳಿ' ಎಬ ಮಾತನ್ನು ಹೇಳುವ ಮೂಲಕ ರಾಜಕೀಯ ಪ್ರವೇಶದ ಸೂಚನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+