ರಜನಿಕಾಂತ್ ವೆಬ್ ಸೈಟ್, ಆಂಡ್ರಾಯ್ಡ್ ಆಪ್ ಲೋಕಾರ್ಪಣೆ

ಚೆನ್ನೈ, ಜನವರಿ 01: ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಈಗ ವೆಬ್ ಸೈಟ್ ಹಾಗೂ ಆಂಡ್ರಾಯ್ಡ್ ಆಪ್ ಗಳನ್ನು ಲೋಕರ್ಪಣೆ ಮಾಡಿದ್ದು, ಈ ಮೂಲಕ ಅಭಿಮಾನಿಗಳು ತಮ್ಮನ್ನು ಹಿಂಬಾಲಿಸಬಹುದು ಹಾಗೂ ಪಕ್ಷದ ಚಟುವಟಿಕೆಗಳ ಬಗ್ಗೆ ತಿಳಿಯಬಹುದು ಎಂದು ರಜನಿ ಹೇಳಿದ್ದಾರೆ.

ರಜನಿಮಂದ್ರಂ.ಆರ್ಗ್ ಹೆಸರಿನ ವೆಬ್ ಸೈಟ್ ಪೂರ್ಣವಾಗಿ ತಮಿಳು ಭಾಷೆಯಲ್ಲಿದೆ. ವೆಬ್ ಸೈಟ್ ನ ಬಲಭಾಗದಲ್ಲಿ ಸದಸ್ಯತ್ವ ನೋಂದಣಿ ಅರ್ಜಿಯಿದೆ.

Rajinikanth launches Website Android App and Urge Fans to Come Together

ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಅಸೋಸಿಯೇಷನ್ ವತಿಯಿಂದ ಈ ವೆಬ್ ಸೈಟ್ ನಿರ್ವಹಿಸಲಾಗುತ್ತದೆ. ಇದೇ ಹೆಸರಿನಲ್ಲಿ ಗೂಗಲ್ ಪ್ಲೇ ಸ್ಟೋರಿನಲ್ಲೂ ಅಪ್ಲಿಕೇಷನ್ ಲಭ್ಯವಿದೆ.

ಕಳೆದ ಮೇ ತಿಂಗಳಿನಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ರಜನಿಕಾಂತ್ ಅವರು ನಂತರ ಈ ಬಗ್ಗೆ ಮೌನ ವಹಿಸಿದ್ದರು.

ತಮ್ಮ ಡಿಸೆಂಬರ್ 07ರಂದು ಹುಟ್ಟುಹಬ್ಬದ ದಿನದಂದು ಏನಾದರೂ ಶುಭ ಸುದ್ದಿ ಘೋಷಿಸುವರೇ ಎಂದು ಅಭಿಮಾನಿಗಳು ಎಂದಿನಂತೆ ಕಾದಿದ್ದರು. ಆದರೆ, ಹುಟ್ಟುಹಬ್ಬ ಆಚರಣೆಯಿಂದ ರಜನಿ ದೂರ ಉಳಿದಿದ್ದರು.

ಆದರೆ, ಚೆನ್ನೈನ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳ ಜತೆಗಿನ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾನುವಾರ(ಡಿಸೆಂಬರ್ 31)ದಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+