ನಟ ರಜನಿಕಾಂತ್-ಫ್ಯಾನ್ಸ್ ಮೆಗಾ ಮೀಟಿಂಗ್ ರದ್ದು

Posted By:
Subscribe to Oneindia Kannada

ಚೆನ್ನೈ, ಏಪ್ರಿಲ್ 09: ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಭಿಮಾನಿಗಳನ್ನು ಏಪ್ರಿಲ್‌ 12 ರಿಂದ 16 ರವೆಗೆ ಭೇಟಿ ಮಾಡುವ ಕಾರ್ಯಕ್ರಮ ರದ್ದಾಗಿದೆ. ರಜನಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಅಭಿಮಾನಿಗಳ ಸಂಘಟನೆಗಳು ಚರ್ಚಿಸಿದ್ದು, ರಜನಿ ಮೇಲೆ ಒತ್ತಡ ಹೇರಲು ಮುಂದಾಗಿದ್ದರು. ಆದರೆ, ಈ ಮೆಗಾ ಮೀಟಿಂಗ್ ಸದ್ಯಕ್ಕೆ ನಡೆಯುತ್ತಿಲ್ಲ.

ಏಪ್ರಿಲ್ ಮೊದಲ ವಾರ ನಡೆದ ಸಭೆಯಲ್ಲಿ ರಜನಿಕಾಂತ್ ಅವರ ರಾಜಕೀಯ ಪ್ರವೇಶ ಕುರಿತಾಗಿ ಚರ್ಚಿಸಲಾಗಿತ್ತು. ಆದರೆ, ರಾಜಕೀಯ ಪ್ರವೇಶದ ಬಗ್ಗೆ ಮತ್ತೊಮ್ಮೆ ರಜನಿಕಾಂತ್ ಅವರು ನಕಾರಾತ್ಮಕ ಧೋರಣೆ ಮುಂದುವರೆಸಿದ್ದರು. ಈ ನಡುವೆ ಅಭಿಮಾನಿಗಳ ಜತೆ ಭೇಟಿ ರದ್ದಾಗಲು ಫ್ಯಾನ್ಸ್ ಸಂಖ್ಯೆ ಹೆಚ್ಚಳವಾಗಿದ್ದು ಕಾರಣ ಎನ್ನಲಾಗಿದೆ.

Rajinikanth cancels meeting with fans	Know Why

ರಜನಿ ಅವರು ಅಭಿಮಾನಿಗಳ ಜತೆ ಫೋಟೋ ತೆಗೆಸಿಕೊಳ್ಳುವ ಪ್ರಕ್ರಿಯೆ ಆಗಾಗ ನಡೆಯುತ್ತದೆ. ಆದರೆ, ಈ ಬಾರಿ ಅಭಿಮಾನಿಗಳ ಸಂಖ್ಯೆ ಅಧಿಕವಾಗಿದ್ದು, ಒಂದೇ ಕಾರ್ಯಕ್ರಮದಲ್ಲಿ ಎಲ್ಲರನ್ನು ಕಾಣಲು ಕಷ್ಟವಾಗಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಕಾರ್ಯಕ್ರಮ ಮಾಡಿ ಅಭಿಮಾನಿಗಳ ಬೇಡಿಕೆ ಈಡೇರಿಸುವುದಾಗಿ ರಜನಿಕಾಂತ್ ಭರವಸೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Superstar ajinikanth has cancelled his five-day meeting with fans, which was scheduled begin on April 12. Know Why
Please Wait while comments are loading...