ಚೆನ್ನೈ-ಮಂಗಳೂರು ಎಕ್ಸ್‌ಪ್ರೆಸ್ ರೈಲು : ಮಹಿಳೆಯರಿಂದಲೇ ನಿರ್ವಹಣೆ

Posted By: Nayana
Subscribe to Oneindia Kannada

ಚೆನ್ನೈ, ಮಾರ್ಚ್ 10: ದಕ್ಷಿಣ ರೈಲ್ವೆಯು ಪುರುಷ ಉದ್ಯೋಗಿಗಳ ಪ್ರಾಬಲ್ಯವಿರುವ ರೈಲ್ವೆ ಕೋಚ್ ನಿರ್ವಹಣಾ ಹೊಣೆಯನ್ನು ಮಹಿಳೆಯರಿಗೆ ನೀಡಿದೆ.

ಮಹಿಳೆಯರಿಗೆ ಭಾರತೀಯ ರೈಲ್ವೆಯಲ್ಲಿ ಪುರುಷರಿಗೆ ಸರಿಸಮನಾಗಿ ಸ್ಥಾನಗಳನ್ನು ನೀಡಲಾಗುತ್ತಿದ್ದು ದಕ್ಷಿಣ ರೈಲ್ವೆ ವಲಯದಲ್ಲಿ ಇದಾಗಲೇ ಗೂಡ್ಸ್ ಗಾರ್ಡ್, ಲೋಕೋ ಪೈಲಟ್ ಗಳಾಗಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ.

ನೈಋತ್ಯ ರೈಲ್ವೆ: ಅಪ್ರೆಂಟಿಸ್ ಅಭ್ಯರ್ಥಿಗಳ ಖಾಯಂ ನೇಮಕಕ್ಕೆ ಒತ್ತಾಯ

ಈಗ ಚೆನ್ನೈ ವಲಯವು ಇನ್ನೊಂದು ಹೆಜ್ಜೆ ಮುಂದುವರಿದು ಪುರುಷ ಉದ್ಯೋಗಿಗಳ ಪ್ರಾಬಲ್ಯವಿರುವ ರೈಲ್ವೆ ಕೋಚ್ ನಿರ್ವಹಣಾ ಹೊಣೆಯನ್ನೂ ಮಹಿಳೆಯರಿಗೆ ನೀಡಿದೆ.

Railway coach managing responsibility for ladies

ಚೆನ್ನೈ ವಿಭಾಗದಲ್ಲಿ ಹಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ವೈ.ಕೆ. ಗೀತಾ ರೈಲ್ವೆನಲ್ಲಿ ಉದ್ಯೋಗಿಗಳಾಗಿರುವ ಮಹಿಳೆಯರಿಗೆ ಸ್ಪೂರ್ತಿ ತುಂಬುತ್ತಿದ್ದಾರೆ. ತಂತ್ರಜ್ಞರು ಮತ್ತು ಸಹಾಯಕರು ಒಳಗೊಂಡ 24 ಮಹಿಳಾ ಸಿಬ್ಬಂದಿಗಳ ತಂಡವನ್ನು ಗೀತಾ ಮೇಲ್ವಿಚಾರಣೆ ನಡೆಸುತ್ತಿದ್ದು ಈ ತಂಡವು ಕಳೆದೊಂದು ವರ್ಷದಿಂದ ಬೇಸಿನ್ ಬ್ರಿಡ್ಜ್ ಯಾರ್ಡ್ ನಲ್ಲಿ ಚೆನ್ನೈ-ಮಂಗಳೂರು ರೈಲ್ವೆಯ 43 ಕೋಚ್ ಗಳನ್ನು ನಿರ್ವಹಿಸುತ್ತಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನಾವು ಲಿಂಗತಾರತಮ್ಯ ನಿವಾರಣೆಗೆ ಪ್ರಮುಖ ಹೆಜ್ಜೆಯನಿಟ್ಟಿದ್ದು ಮಹಿಳೆಯರು ಸಹ ಪುರುಷರಂತೆ ಭಾರೀ ಗಾತ್ರದ ಕಬ್ಬಿಣದ ಸಲಕರಣೆಗಳನ್ನು ನಾವು ಎತ್ತುವುದು, ಸಾಗಿಸುವುದು ಮಾಡಬೇಕಾಗಿದೆ. ಕರ್ತವ್ಯದ ಭಾಗವಾಗಿ ನಾವದನ್ನು ನಿಭಾಯಿಸುವುದು ಅನಿವಾರ್ಯವಾಗಿತ್ತು ಎಂದು ಗೀತಾ ಹೇಳಿದ್ದಾರೆ.

ರೈಲಿನ ಏರ್ ಬ್ರೇಕ್ ಗಳ ಪರಿಶೀಲನೆ ಅತ್ಯಂತ ನಿರ್ಣಾಯಕವಾಗಿದೆ. ರೈಲು ಚಾಲನೆಗೊಳ್ಳುವ ಮೊದಲು ನಾವು ಕೋಚ್ ಗಳ ಪ್ರತಿಯೊಂದು ಚಕ್ರಗಳನ್ನು ಪರಿಶೀಲಿಸುತ್ತೇವೆ. ರೈಲ್ವೆ ಪ್ರಯಾಣಿಕರ ಸುರಕ್ಷತೆಯು ಅತ್ಯಂತ ಮುಖ್ಯ ಆದ್ಯತೆಯಾಗಿದೆ.

ಮಹಿಳಾ ಸಿಬ್ಬಂದಿಗಳು ನಿರ್ವಹಿಸುವ ಕೋಚ್ ಗಳ ಬಗ್ಗೆ ಇದುವರೆಗೆ ಯಾವ ದೂರುಗಳೂ ಬಂದಿಲ್ಲ ಎನ್ನುವುದು ಮಹಿಳಾ ಸಿಬ್ಬಂದಿಗಳ ದಕ್ಷತೆ, ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಾಗಿದೆ. ಬೇಸಿನ್ ಬ್ರಿಡ್ಜ್ ಯಾರ್ಡ್ ನಲ್ಲಿ ಒಟ್ಟು 1,500 ಸಿಬ್ಬಂದಿಗಳಿದ್ದು ಇದರಲ್ಲಿ ಎಲ್ಲಾ ವಿಭಾಗಗಳಲ್ಲಿ ಒಟ್ಟು ಮಹಿಳಾ ಸಿಬ್ಬಂದಿಗಳ ಸಂಖ್ಯೆ ಸುಮಾರು 300ರಷ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As women's day gift for Chennai railway authorities decided to give responsibility of railway coach manager.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ