ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಕನ್ಯಾಕುಮಾರಿಯಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ

|
Google Oneindia Kannada News

ಚೆನ್ನೈ, ಸೆಪ್ಟೆಂಬರ್ 7: ಇಂದು ಕನ್ಯಾಕುಮಾರಿಯಿಂದ 'ಭಾರತ್ ಜೋಡೋ ಯಾತ್ರೆ'ಗೆ ಚಾಲನೆ ನೀಡಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿರುವ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿದರು.

ಕನ್ಯಾಕುಮಾರಿಯ ಮಹಾತ್ಮಗಾಂಧಿ ಮಂಟಪದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಲು ಖಾದಿ ರಾಷ್ಟ್ರಧ್ವಜವನ್ನು ಹಸ್ತಾಂತರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

3,500 ಕಿಲೋಮೀಟರ್ ಉದ್ದದ ಯಾತ್ರೆಯನ್ನು ಕಾಂಗ್ರೆಸ್ ಕಳೆದ ಶತಮಾನದಲ್ಲೇ ದೇಶದಲ್ಲೇ ಅತಿ ಉದ್ದದ ಪಾದಯಾತ್ರೆ ಎಂದು ಕರೆದಿದೆ. ಇದನ್ನು ಸಂಜೆ 5 ಗಂಟೆಗೆ ರ್‍ಯಾಲಿಯೊಂದಿಗೆ ಪ್ರಾರಂಭಿಸಲಾಗುವುದು ಮತ್ತು ಗುರುವಾರ ಬೆಳಿಗ್ಗೆ 'ಪಾದಯಾತ್ರೆ' ಅಥವಾ ಮೆರವಣಿಗೆ ಪ್ರಾರಂಭವಾಗಲಿದೆ.

Rahul Gandhi To Launch Bharat Jodo Yatra of Congress in Kanyakumari today

12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಕವರ್ ಮಾಡಲು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪ್ರತಿದಿನ ಆರು-ಏಳು ಗಂಟೆಗಳ ಕಾಲ ನಡೆಯಲಿದ್ದಾರೆ. ಮೂಲಗಳ ಪ್ರಕಾರ ರಾಹುಲ್ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ನಡೆಯಲಿದ್ದಾರೆ. ಸುಮಾರು 150 ದಿನಗಳಲ್ಲಿ ಯಾತ್ರೆ ಪೂರ್ಣಗೊಳ್ಳಲಿದೆ. ಭಾರತದಲ್ಲಿ ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ಕೇಂದ್ರೀಕರಣದ ಹೆಚ್ಚಳವನ್ನು ಪ್ರತಿಪಾದಿಸಿದ ರಾಹುಲ್ ಗಾಂಧಿ, ಈ ಯಾತ್ರೆಯು ದೇಶವನ್ನು ಒಂದುಗೂಡಿಸುವ ಮಾರ್ಗವಾಗಿದೆ ಎಂದು ಹೇಳಿದರು.

Rahul Gandhi To Launch Bharat Jodo Yatra of Congress in Kanyakumari today

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು 119 ಭಾರತ್ ಯಾತ್ರಿಗಳನ್ನು ಹೊಂದಿರುತ್ತದೆ. ಪಾದಯಾತ್ರೆ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಸ್ತೆಯಲ್ಲೇ ಪ್ರಯಾಣಿಸುತ್ತಾರೆ. ಅಲ್ಲಲ್ಲಿ ಕ್ಯಾಂಪ್ ಸೈಟ್‌ಗಳಲ್ಲಿ ಉಳಿದುಕೊಂಡು ಅಡುಗೆ ಮಾಡುತ್ತಾರೆ. ಮುಂದಿನ 150 ದಿನಗಳವರೆಗೆ ಮೂರು ದಿನಗಳಿಗೊಮ್ಮೆ ತಮ್ಮ ದಿನಬಳಕೆಯ ಬಟ್ಟೆ ಒಗೆಯಲು ಮೀಸಲಿಡಲಿದ್ದಾರೆ. 12 ರಾಜ್ಯಗಳ ಈ ಪಾದಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿ ಕಾಶ್ಮೀರದವರೆಗೆ 3,570 ಕಿ.ಮೀ. ಕ್ರಮಿಸಲಿದೆ.

Rahul Gandhi To Launch Bharat Jodo Yatra of Congress in Kanyakumari today

ಟ್ರಕ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿರುವ 59 ಕಂಟೈನರ್‌ಗಳಲ್ಲಿ ಪಾದಯಾತ್ರಿಗಳು ವಿಶ್ರಾಂತಿ ಪಡೆಯುತ್ತಾರೆ. ಭದ್ರತಾ ಕಾರಣದಿಂದ ರಾಹುಲ್‌ ಗಾಂಧಿ ಅವರಿಗೆ ಪ್ರತ್ಯೇಕದಾದ ಒಂದು ಕಂಟೈನರ್ ಇರುತ್ತದೆ. ಒಂದು ಕಂಟೈನರ್‌ನಲ್ಲಿ 12 ಮಂದಿ ನಿದ್ರಿಸಬಹುದಾಗಿದೆ. ಈ ಪಾದಯಾತ್ರೆಯಲ್ಲಿ ಭಾಗವಹಿಸುವವರ ಸರಾಸರಿ ವಯಸ್ಸು 38 ಆಗಿರುತ್ತದೆ. ಹಿರಿಯ ಪಾದಯಾತ್ರಿ ಎಂದರೆ 58 ವರ್ಷ ವಯಸ್ಸಿನ ರಾಜಸ್ಥಾನದ ವಿಜೇಂದ್ರ ಸಿಂಗ್ ಮಹ್ಲಾವತ್ ಮತ್ತು ಕಿರಿಯ ಪಾದಯಾತ್ರಿ 25 ವರ್ಷ ವಯಸ್ಸಿನ ಅರುಣಾಚಲ ಪ್ರದೇಶದ ಅಜಂ ಜೊಂಬ್ಲಾ ಮತ್ತು ಬೆಮ್ ಬಾಯಿ. ಪಾದಯಾತ್ರೆಯಲ್ಲಿ 28 ಮಹಿಳೆಯರು ಇರುತ್ತಾರೆ.

English summary
Rahul Gandhi will launch Congress's Bharat Jodo Yatra in Kanyakumari today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X