ರಜನಿಕಾಂತ್ ಮನೆ ಮುಂದೆ ಧರಣಿ: ತಲೈವಾ ಮನೆಗೆ ಬಿಗಿ ಭದ್ರತೆ
ರಾಜಕೀಯ ಪ್ರವೇಶದ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದ ರಜನಿಕಾಂತ್ ನಿರ್ಧಾರದ ವಿರುದ್ಧ ಸಿಡಿದೆದ್ದ ಅಭಿಮಾನಿಗಳು, ನಾನಾ ತಮಿಳು ಸಂಘಟನೆಗಳಿಂದ ಪ್ರತಿಭಟನೆ
ಚೆನ್ನೈ, ಮೇ 22: ರಾಜಕೀಯ ಪ್ರವೇಶದ ಬಗ್ಗೆ ಪರೋಕ್ಷವಾಗಿ ಸೂಚನೆ ನೀಡಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮನೆ ಮುಂದೆ ತಮಿಳು ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ರಜನಿಕಾಂತ್ ರಾಜಕೀಯ ಪ್ರವೇಶ ಮಾಡಕೂಡದೆಂದು ಆಗ್ರಹಿಸಿ ಈ ಪ್ರತಿಭಟನೆ ನಡೆಯುತ್ತಿದೆ.
ಸೋಮವಾರ ಬೆಳಗ್ಗೆಯೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಪೋಯಸ್ ಗಾರ್ಡನ್ ನಲ್ಲಿರುವ ರಜನಿ ಮನೆಯ ಮುಂದೆ ಘೋಷಣೆ ಕೂಗಿದರು.[ತಮ್ಮನ್ನು ಹೊಗಳಿದ ರಜನಿಗೆ ಧನ್ಯವಾದ ಹೇಳಿದ ಸ್ಟಾಲಿನ್]

ರಜನಿಕಾಂತ್ ಕನ್ನಡಿಗ. ಅವರಿಗೆ ತಮಿಳುನಾಡಿನ ರಾಜಕೀಯ ಪ್ರವೇಶ ಮಾಡುವ ಹಕ್ಕಿಲ್ಲ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ವೀರ ಲಕ್ಷ್ಮಿ ಎಂಬುವರು ಮಾಧ್ಯಮವರ ಮುಂದೆ ಹೇಳಿಕೆ ನೀಡಿದರು.
ಹೊತ್ತು ಸರಿದಂತೆ ಪ್ರತಿಭಟನೆ ನಡೆಸುತ್ತಿರುವವರ ಸಂಖ್ಯೆ ಹೆಚ್ಚಾಯಿತು. ಪ್ರತಿಭಟನಾಕಾರರು ಪೊಲೀಸರನ್ನು ತಳ್ಳಿ ನಿವಾಸದೊಳಕ್ಕೆ ನುಗ್ಗಲು ಯತ್ನಿಸಿರುವ ಒಂದೆರಡು ಘಟನೆಗಳೂ ನಡೆದವು. ಆಗ ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತೆಗೆದುಕೊಂಡರು. ಆನಂತರ, ಪ್ರತಿಭಟನಾಕಾರರು ರಜನಿ ಮನೆಗೆ ಒಂದು ಕಿ.ಮೀ. ದೂರದಲ್ಲಿರುವ ಕ್ಯಾಥೆಡ್ರಲ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಸದ್ಯಕ್ಕೆ ಅವರಿಗೆ ಅಲ್ಲೇ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದೆ.[ರಾಜಕೀಯಕ್ಕೆ ಎಂಟ್ರಿ: ಮತ್ತೊಮ್ಮೆ ಸುಳಿವು ಕೊಟ್ಟ ರಜನೀಕಾಂತ್]
{promotion-urls}












Click it and Unblock the Notifications