ತಮ್ಮನ್ನು ಹೊಗಳಿದ ರಜನಿಗೆ ಧನ್ಯವಾದ ಹೇಳಿದ ಸ್ಟಾಲಿನ್

Posted By:
Subscribe to Oneindia Kannada

ಚೆನ್ನೈ, ಮೇ 20: ತಮ್ಮನ್ನು ದಕ್ಷ ರಾಜಕಾರಣಿ ಎಂದು ಹೊಗಳಿದ ಚಿತ್ರ ನಟ ರಜನೀ ಕಾಂತ್ ಬಗ್ಗೆ ಡಿಎಂಕೆ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಅವರು ಧನ್ಯವಾದ ಅರ್ಪಿಸಿದ್ದಾರೆ.

ಶುಕ್ರವಾರ ತಮ್ಮ ಅಭಿಮಾನಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ರಜನೀಕಾಂತ್ ಅವರು, ತಮಿಳುನಾಡಿನಲ್ಲಿ ದಕ್ಷ ರಾಜಕಾರಣಿಗಳಿದ್ದರೂ ವ್ಯವಸ್ಥೆ ಹದಗೆಟ್ಟಿರುವುದಾಗಿ ಬೇಸರ ವ್ಯಕ್ತಪಡಿಸಿದ್ದರು. ಆ ವೇಳೆ, ಈವರೆಗೆ ಬಂದು ಹೋಗಿರುವ ಹಾಗೂ ಈಗ ಇರುವ ಕೆಲವು ದಕ್ಷ ರಾಜಕಾರಣಿಗಳ ಹೆಸರುಗಳನ್ನು ಹೇಳಿದ್ದ ಅವರು, ಆ ವೇಳೆ ಸ್ಟಾಲಿನ್ ಅವರನ್ನೂ ಸ್ಮರಿಸಿದ್ದರು.

Stalin says thanks to Rajnikanth

ಇದರಿಂದ ಸಂಪ್ರೀತರಾಗಿರುವ ಸ್ಟಾಲಿನ್, ರಜನೀಕಾಂತ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ''ನನ್ನನ್ನು ದಕ್ಷ ರಾಜಕಾರಣಿ ಎಂದು ಹೆಸರಿಸಿದ್ದಕ್ಕೆ ನನಗೆ ಖುಷಿಯಾಗಿದೆ'' ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
DMK's leader Stalin express his delightness and thanks to Super Star Rajnikanth for later's appluse toward him. On Friday, talking to his fans Rajnikath has said ''Even having good politicians like Stalin and Anbumani Ramdoss the system is affected and it should be changed''.
Please Wait while comments are loading...