ಜಯಲಲಿತಾ ಬದುಕಿದ್ದಿದ್ದರೆ ಹೀಗೆ ಮಾಡುವ ಧೈರ್ಯ ಯಾರಿಗೂ ಇರ್ತಿರಲಿಲ್ಲ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 27: ನಾನಿನ್ನೂ ಮುಖ್ಯ ಕಾರ್ಯದರ್ಶಿ. ನನ್ನ ವರ್ಗಾವಣೆ ಮಾಡೋದಿಕ್ಕೆ ಸರಕಾರಕ್ಕೆ ಧೈರ್ಯವಿಲ್ಲ ಎಂದು ಐಎಎಸ್ ಅಧಿಕಾರಿ ರಾಮ್ ಮೋಹನ್ ರಾವ್ ಹೇಳಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಅನೇಕ ಸ್ಫೋಟಕ ಸಂಗತಿಗಳನ್ನು ಹೊರಹಾಕಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಾವ್ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ನಂತರ ಅವರನ್ನು ಸಿಎಸ್ ಹುದ್ದೆಯಿಂದ ತೆಗೆದುಹಾಕಲಾಗಿತ್ತು.

ನನ್ನ ಜೀವಕ್ಕೆ ತೊಂದರೆಯಿದೆ ಎಂದು ಕೂಡ ಅತಂಕ ಹೊರಹಾಕಿದ್ದಾರೆ ರಾವ್. ಎರಡು ದಿನಗಳ ಕಾಲ ರಾವ್ ಹಾಗೂ ಅವರಿಗೆ ಸಂಬಂಧಪಟ್ಟವರ ಮನೆಗಳ ಮೇಲೂ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಿತ್ತು. 30 ಲಕ್ಷ ನಗದು, 5 ಕೆ.ಜಿ. ಚಿನ್ನ ಅಧಿಕಾರಿಯ ಮನೆಯಲ್ಲಿ ಸಿಕ್ಕಿತ್ತು. ಹಣ ಬದಲಾಯಿಸುವ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ರಾವ್ ಅವರ ಮಗನ ಮನೆ ಮೇಲೆ ಕೂಡ ದಾಳಿ ನಡೆದಿತ್ತು.[ಮುಖ್ಯ ಕಾರ್ಯದರ್ಶಿ ಸಂಬಂಧಿಕರ ಮನೇಲಿ ಸಿಕ್ತು ಕೆಜಿಗಟ್ಟಲೆ ಚಿನ್ನ]

My life was in danger: Ram Mohan Rao

ಅದಾದ ಒಂದು ದಿನಕ್ಕೆ ರಾವ್ ಅವರ ಸ್ಥಾನಕ್ಕೆ ಗಿರಿಜಾ ವೈದ್ಯನಾಥನ್ ನೇಮಕವಾಗಿತ್ತು. ಸಿಆರ್ ಪಿಎಫ್ ಸಿಬ್ಬಂದಿ ತನಿಖೆಗಾಗಿ ತಂದಿದ್ದ ವಾರಂಟ್ ನಲ್ಲಿ ನನ್ನ ಹೆಸರೇ ಇರಲಿಲ್ಲ. ಒಂದು ವೇಳೆ ಜಯಲಲಿತಾ ಅವರು ಬದುಕಿದ್ದಿದ್ದರೆ ಹೀಗೆ ಮಾಡುವುದಕ್ಕೆ ಯಾರಿಗೂ ಧೈರ್ಯ ಇರ್ತಿರಲಿಲ್ಲ. ಇದು ಸಾಂವಿಧಾನಿಕ ಹಲ್ಲೆ ಎಂದಿದ್ದಾರೆ ರಾಮ್ ಮೋಹನ್ ರಾವ್.[ತ.ನಾಡು ಸಿಎಸ್ ರಾಮ್ ಮನೋಹರ್ ರಾವ್ ಔಟ್, ಗಿರಿಜಾ ಇನ್]

ತಮ್ಮನ್ನು ಬೆಂಬಲಿಸಿದ ಮಮತಾ ಬ್ಯಾನರ್ಜಿ, ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ ರಾವ್. ಅವರಿಗೆ ನನ್ನ ಹತ್ತಿರ ಸಿಕ್ಕಿದ್ದು 1,02,320 ರುಪಾಯಿ ಮಾತ್ರ ಎಂದು ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Tamil Nadu bureaucrat P Rama Mohana Rao, who was removed as Chief Secretary after unprecedented tax raids at his home and office, alleged today that his life was in danger and declared: "I am still Chief Secretary. The government doesn't have guts to serve me transfer orders," Mr Rao said in a series of explosive allegations.
Please Wait while comments are loading...