ಕೆಸಿಆರ್ ಪ್ರಧಾನಿ ಪಟ್ಟದ ಕನಸಿಗೆ ಅದೊಂದು ಮಾತಿಂದ ಕೊಳ್ಳಿ ಇಟ್ಟ ಸ್ಟಾಲಿನ್!
ಚೆನ್ನೈ, ಮೇ 14: ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ 'ಸೌಜನ್ಯದ ಭೇಟಿ' ಸೋಮವಾರ ಮುಗಿದಿದೆ!
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ತೃತೀಯ ರಂಗಕ್ಕೆ ತನ್ನ ಬೆಂಬಲವಿಲ್ಲ ಎಂದು ಸಭೆಯಲ್ಲಿ ಸ್ಟಾಲಿನ್ ಸ್ಪಷ್ಟವಾಗಿ ಹೇಳಿದ್ದು, ಕೆ ಚಂದ್ರಶೇಖರ್ ರಾವ್ ಅವರ ಪ್ರಧಾನಿಯಾಗುವ ಕನಸಿಗೂ ಕೊಳ್ಳಿ ಇಡುವಂಥ ಮಾತನ್ನು ಸ್ಟಾಲಿನ್ ಹೇಳಿದ್ದಾರೆ.
"ಕಾಂಗ್ರೆಸ್ ಜೊತೆ ನಾವು ಈಗಾಗಲೇ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ರಿಯಿಂದ ಹೊರಬರುವುದು ಸಾಧ್ಯವಿಲ್ಲದ ಮಾತು" ಎಂದ ಸ್ಟಾಲಿನ್, ಹಾಗೆಯೇ ಮುಂದುವರಿದು, "ನಾನು ಪ್ರಧಾನಿ ಪಟ್ಟಕ್ಕೆ ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರನ್ನು ಸೂಚಿಸಿದ್ದೇನೆ. ನನ್ನ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ" ಎಂದರು.

ಪ್ರಧಾನಿ ಹುದ್ದೆಯ ಕನಸನ್ನೂ ಜೇಬಿನಲ್ಲೇ ಇಟ್ಟುಕೊಂಡು ಸ್ಟಾಲಿನ್ ಬಳಿ ತೆರಳಿದ್ದ ಕೆಸಿಆರ್ ಅವರಿಗೆ ಸ್ಟಾಲಿನ್ ಅವರ ಈ ಮಾತು ತೀವ್ರ ಮುಖಭಂಗವನ್ನುಂಟು ಮಾಡಿದೆ. 'ನಿಮ್ಮನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ನಾವು ಸಿದ್ಧರಿಲ್ಲ' ಎಂಬ ಸಂದೇಶವನ್ನೂ ಈ ಮಾತಿನಲ್ಲಿ ಪರೋಕ್ಷವಾಗಿ ಸ್ಟಾಲಿನ್ ನೀಡಿದ್ದಾರೆ. ಈ ಮೂಲಕ ಅವರ ಪ್ರಧಾನಿ ಹುದ್ದೆಯ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ ಸ್ಟಾಲಿನ್!
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಆಚೆ ಇಟ್ಟು ತೃತೀಯ ರಂಗ ರಚಿಸುವ ಬಗ್ಗೆ ಕೆ ಚಂದ್ರಶೇಖರ್ ರಾವ್ ಓಡಾಡುತ್ತಿದ್ದರು. ಈಗಾಗಲೇ ಅವರು ಕೇರಳ ಮುಖ್ಯಮಂತ್ರಿ, ಸಿಪಿಐಎಂ ಮುಖಂಡ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಜೊತೆಗೆ ಕರ್ನಾತಕ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೂ ಮಾತುಕತೆ ನಡೆಸಿದ್ದರು. ಅದೇ ಕಾರಣಕ್ಕಾಗಿಯೇ ಕಳೆದ ವಾರವೇ ಸ್ಟಾಲಿನ್ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದ ಅವರಿಗೆ, 'ಚುನಾವಣೆ ಕೆಲಸಲದಲ್ಲಿ ನಾನು ಬ್ಯುಸಿ' ಎನ್ನುವ ಮೂಲಕ ಸ್ಟಾಲಿನ್ ಮುಖಭಂಗವನ್ನುಂಟು ಮಾಡಿದ್ದರು. ಆದರೂ ಪಟ್ಟು ಬಿಡದ ಕೆಸಿಆರ್ ಮತ್ತೊಮ್ಮೆ ಸ್ಟಾಲಿನ್ ಭೇಟಿಗೆ ತೆರಳಿ, ಮತ್ತದೇ ಪ್ರತಿಕ್ರಿಯೆ ಪಡೆದಿದ್ದಾರೆ!












Click it and Unblock the Notifications