ಸ್ಟೇಝಿಲ್ಲಾ ಸ್ಥಾಪಕ ಯೋಗೇಂದ್ರ ವಸುಪಾಲ್ ಗೆ ಜಾಮೀನು

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಏಪ್ರಿಲ್ 11: ಸ್ಟೇಝಿಲ್ಲಾ ಸ್ಥಾಪಕ ಯೋಗೇಂದ್ರ ವಸುಪಾಲ್ ಗೆ ಕೊನೆಗೂ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. 40 ಲಕ್ಷ ರು ಶ್ಯೂರಿಟಿ ಮೊತ್ತ ಪಾವತಿ, ಜಾಮೀನು ಪಡೆಯುವಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಜಡ್ಜ್ ಎಸ್ ಭಾಸ್ಕರನ್ ಅವರು ಇದೊಂದು ಇಬ್ಬರು ಉದ್ಯಮಿಗಳ ನಡುವಿನ ವ್ಯಾಜ್ಯ ಎಂದು ಪರಿಗಣಿಸಲಾಗಿದೆ ಎಂದು ಹೇಳಿ, ವಸುಪಾಲ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.

Madras High Court grants bail to Stayzilla co-founder Yogendra Vasupal

ಸ್ಟೇಂ ಹೋಮ್, ರೆಸಾರ್ಟ್ ಬುಕ್ಕಿಂಗ್ ಅವ್ಯವಹಾರದಿಂದ ಉಂಟಾಗಿರುವ ನಷ್ಟವಾಗಿರುವ ಮೊತ್ತವನ್ನು ಭರಿಸುವಂತೆ ಸೂಚಿಸಿದೆ.

ಮಾರ್ಚ್ 13ರಂದು ಬಂಧನಕ್ಕೊಳಗಾಗಿದ್ದ ವಸುಪಾಲ್ ಅವರು ಅನೇಕ ಬಾರಿ ಜಾಮೀನು ಅರ್ಜಿ ಹಾಕಿದ್ದರು. ಅದರೆ, ಜಾಮೀನು ಮಂಜೂರಾಗಿರಲಿಲ್ಲ.

ಐಪಿಸಿ ಸೆಕ್ಷನ್ 420, 406 ಹಾಗೂ 506(ಐ) ಅನ್ವಯ ದೂರು ದಾಖಲಿಸಲಾಗಿತ್ತು. ಜಿಗ್ ಸಾ ಸಲ್ಯೂಷನ್ಸ್ ಸಂಸ್ಥೆ ನೀಡಿದ ದೂರಿನ ಅನ್ವಯ 1.69 ಕೋಟಿ ರು ಬಾಕಿ ಮೊತ್ತವನ್ನು ಸ್ಟೇಝಿಲ್ಲಾ ಪಾವತಿಸಿಲ್ಲ. ಮಾರ್ಚ್ ಹಾಗೂ ಮೇ 2016ರಲ್ಲಿ ಈ ವ್ಯವಹಾರ ನಡೆದಿದೆ ಎನ್ನಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Madras High court on Tuesday granted bail to Stayzilla founder Yogendra Vasupal. The court asked Vasupal to deposit Rs 40 lakh to establish bonafide intentions.
Please Wait while comments are loading...