ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಕಾಂತ್ 'ಲಿಂಗಾ' ವಿರುದ್ಧದ ಕೇಸ್ ರದ್ದು

By Mahesh
|
Google Oneindia Kannada News

ಚೆನ್ನೈ, ಡಿ.3: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಲಿಂಗಾ ಚಿತ್ರದ ಕಥೆ ಕದಿಯಲಾಗಿದೆ ಎಂದು ನಿರ್ದೇಶಕರೊಬ್ಬರು ಆರೋಪಿಸಿದ್ದ ಪ್ರಕರಣ ಮುರಿದು ಬಿದ್ದಿದೆ. ಮದ್ರಾಸ್ ಹೈಕೋರ್ಟಿನ ಮದುರೈ ಪೀಠ ರಿಟ್ ಅರ್ಜಿಯನ್ನು ಬುಧವಾರ ತಿರಸ್ಕರಿಸಿದೆ. ಹೀಗಾಗಿ ಚಿತ್ರದ ಬಿಡುಗಡೆಗೂ ಮುನ್ನ ಇದ್ದ ಅಡ್ಡಿ ಆತಂಕ ದೂರಾಗಿದೆ. ಡಿ.12ರಂದು ವಿಶ್ವದೆಲ್ಲೆಡೆ ಬಿಡುಗಡೆಯಾಗಲಿದೆ.

ಲಿಂಗಾ ಚಿತ್ರದ ಕಥೆ ಕದಿಯಲಾಗಿದೆ ಎಂದು ನಿರ್ದೇಶಕ ಕೆ.ಆರ್ ರವಿ ರತ್ನಂ ಆರೋಪಿಸಿದ್ದರು. ವಿವಾದ ಕೋರ್ಟ್ ಮೆಟ್ಟಿಲೇರಿತ್ತು, ಮದ್ರಾಸ್ ಹೈಕೋರ್ಟ್ ಜಸ್ಟೀಸ್ ಎಂ. ವೇಣುಗೋಪಾಲ್ ದೂರು ಸ್ವೀಕರಿಸಿ ನಟ ರಜನಿಕಾಂತ್ ಹಾಗೂ ತಮಿಳುನಾಡಿನ ಪೊಲೀಸ್ ಮಹಾನಿರ್ದೇಶಕ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಚಿತ್ರಕಥೆಗಾರ ಬಿ ಪೊನ್ನುಕುಮಾರ್, ನಿರ್ದೇಶಕ ಕೆಎಸ್ ರವಿಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. [ರಜನಿಕಾಂತ್ ಗೆ ಹೈಕೋರ್ಟಿನಿಂದ ನೋಟಿಸ್]

Case against Rajinikanth starrer Lingaa dismissed

ಇದು ಖಾಸಗಿ ವ್ಯಾಜ್ಯವಾಗಿದ್ದು, ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದಾಗಿದೆ ಅದರೆ, ರಿಟ್ ಅರ್ಜಿ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಚಿತ್ರಕ್ಕೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಸಂವಿಧಾನದ 226ನೇ ಪರಿಚ್ಛೇದವನ್ನು ಉಲ್ಲೇಖಿಸಿ ಹೈಕೋರ್ಟ್ ಜಸ್ಟೀಸ್ ವೇಣುಗೋಪಾಲ್ ಅವರು ತೀರ್ಪು ನೀಡಿದ್ದಾರೆ.

ಚಿತ್ರದ ಹೀರೋ ಆದ ಮಾತ್ರಕ್ಕೆ ರಜನಿ ನೋಟಿಸ್ ನೀಡಲಾಗಿದೆಯೇ? ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದ್ದರು. ಆದರೆ, ಅರ್ಜಿದಾರ ಕೆ.ಆರ್ ರವಿ ರತ್ನಂ ಅವರ ಪರವಾಗಿ ವಾದಿಸಿದ ಪೀಟರ್ ರಮೇಶ್ ಕುಮಾರ್ ಅವರು ಮಾತನಾಡಿ, ರಜನಿಕಾಂತ್ ಅವರು ಚಿತ್ರಕ್ಕೆ ಕಥೆ ಒದಗಿಸುವಲ್ಲಿ ಯಾವುದೇ ಪಾತ್ರವಹಿಸಿಲ್ಲ ನಿಜ, ಅದರೆ, ಚಿತ್ರದ ವಿತರಣೆ ಹಕ್ಕು ಇನ್ನಿತರ ರೀತಿಯಲ್ಲಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಹೀಗಾಗಿ ದೂರಿನಲ್ಲಿ ರಜನಿ ಅವರ ಹೆಸರು ಸೇರಿಸಲಾಗಿದೆ ಎಂದಿದ್ದರು.

ಏನಿದು ತಕರಾರು?: ತಮಿಳುನಾಡು ಹೌಸಿಂಗ್ ಬೋರ್ಡಿನ ಅರ್ಜಿದಾರ ರವಿ ರತ್ನಂ ಪ್ರಕಾರ ಲಿಂಗಾ ಚಿತ್ರದ ಕಥೆಯನ್ನು ಅವರೆ ಬರೆದಿದ್ದಂತೆ. ಮುಲ್ಲೈ ವಾನಂ 999 ಎಂಬ ಮುಲ್ಲಪೆರಿಯಾರ್ ಅಣೆಕಟ್ಟು ಕುರಿತ ಚಿತ್ರ ಬಗ್ಗೆ ಜಾನ್ ಪೆನ್ನಿಕ್ಯೂಕ್ ಬರೆದಿರುವ ಲೇಖನ ಆಧಾರಿಸಿ ಚಿತ್ರ ಮಾಡಲು ಹೊರಟಾಗ ಈ ಕಥೆ ಬರೆದಿದ್ದರಂತೆ. ಈ ಕಥೆಯನ್ನು ಲಿಂಗಾ ಚಿತ್ರತಂಡ ಕದ್ದಿದೆ ಎಂದು ಆರೋಪಿಸಲಾಗಿದೆ.

ರಜಿನಿ ಕೌಂಟರ್ ಅಫಿಡವಿಟ್ : ನೋಟಿಸ್ ಗೆ ಉತ್ತರಿಸಿದ್ದ ರಜನಿ ಅವರು ಕೌಂಟರ್ ಅಫಿಡವಿಟ್ ಸಲ್ಲಿಸಿ, ಎರಡು ಚಿತ್ರದ ಕಥೆಯನ್ನು ಎಸ್ ಪೊನ್ ಕುಮಾರನ್ ಬರೆದಿದ್ದಾರೆ. 2010ರಲ್ಲಿ ಕಿಂಗ್ ಖಾನ್ ಎಂಬ ಹೆಸರಿನಲ್ಲಿ ಕಥೆಯನ್ನು ದಕ್ಷಿಣ ಭಾರತದ ಚಿತ್ರಕಥೆಗಾರರ ಒಕ್ಕೂಟದಲ್ಲಿ ನೋಂದಾಯಿಸಿದ್ದಾರೆ ಎಂದು ದಾಖಲೆಗಳನ್ನು ಒದಗಿಸಿದ್ದರು.[ರಜನಿ 'ಲಿಂಗಾ' ಚಿತ್ರದ ಹೈಲೈಟ್ಸ್]

ಕೋರ್ಟ್ ನೋಟಿಸ್ ಬಂದ ಮೇಲೆ ಮದುರೈ ಪೊಲೀಸ್ ಆಯುಕ್ತರು ರಿಟ್ ಅರ್ಜಿಯ ಪ್ರತಿಯನ್ನು ತಲ್ಲಕುಲಂ ಪೊಲೀಸ್ ಠಾಣೆಗೆ ಕಳಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದರು. ಅದರೆ, ಅರ್ಜಿದಾರರ ಹಾಗೂ ಲಿಂಗಾ ಚಿತ್ರತಂಡವಾಗಲಿ ವಿವಾದಕ್ಕೆ ಕಾರಣವಾಗಿರುವ ಕಥೆಯ ಪ್ರತಿಯನ್ನು ಠಾಣೆಗೆ ಕಳಿಸಿರಲಿಲ್ಲ ಎಂಬುದು ಗಮನಾರ್ಹ.

English summary
The Madurai Bench of Madras High Court on Wednesday dismissed a writ petition filed by an aspiring filmmaker accusing the crew of Rajinikanth starrer Lingaa of having stolen his story, based on the construction of Mullaperiyar dam, for the movie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X