ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿವಿಂಗ್ ಟುಗೆದರ್‌ನಲ್ಲಿದ್ದವರಿಗೆ ಯಾವುದೇ ವೈವಾಹಿಕ ಹಕ್ಕು ಇರಲ್ಲ: ಹೈಕೋರ್ಟ್

|
Google Oneindia Kannada News

ಚೆನ್ನೈ, ನವೆಂಬರ್‌ 04: "ದೀರ್ಘ ಸಮಯದವರೆಗೆ ಜೊತೆಯಾಗಿ ಬದುಕುವುದು ಅಥವಾ ಲಿವಿಂಗ್ ಟುಗೆದರ್‌ನಲ್ಲಿ ಇರುವವರಿಗೆ ಯಾವುದೇ ವೈವಾಹಿಕ ಹಕ್ಕು ಇಲ್ಲ," ಎಂದು ಮದ್ರಾಸ್‌ ಹೈಕೋರ್ಟ್ ತೀರ್ಪು ನೀಡಿದೆ.

ಕೊಯಮತ್ತೂರಿನ ಆರ್ ಕಲೈಸೆಲ್ವಿ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ವಜಾಗೊಳಿಸಿ ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಆರ್ ವಿಜಯಕುಮಾರ್‌ರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಲಿವ್‌ ಇನ್‌ ಸಂಬಂಧದಲ್ಲಿರುವ ಜೋಡಿಗೆ ರಕ್ಷಣೆ ಒದಗಿಸಲು ಸುಪ್ರೀಂ ಆದೇಶ ಲಿವ್‌ ಇನ್‌ ಸಂಬಂಧದಲ್ಲಿರುವ ಜೋಡಿಗೆ ರಕ್ಷಣೆ ಒದಗಿಸಲು ಸುಪ್ರೀಂ ಆದೇಶ

"ದೀರ್ಘ ಸಮಯದವರೆಗೆ ಜೊತೆಯಾಗಿ ಬದುಕುವುದು ಅಥವಾ ಲಿವಿಂಗ್ ಟುಗೆದರ್‌ನಲ್ಲಿ ಇರುವವರು ನ್ಯಾಯಾಲಯದ ಮುಂದೆ ಯಾವುದೇ ವೈವಾಹಿಕ ವಿವಾದದ ಬಗ್ಗೆ ಅರ್ಜಿ ಸಲ್ಲಿಸಲು ಆಗದು. ಲಿವಿಂಗ್ ಟುಗೆದರ್‌ನಲ್ಲಿ ಇರುವವರಿಗೆ ವೈವಾಹಿಕ ಹಕ್ಕುಗಳು ಇರುವುದಿಲ್ಲ. ಕಾನೂನು ಪ್ರಕಾರವಾಗಿ ವಿವಾಹವಾಗಿದ್ದರೆ ಮಾತ್ರ ವೈವಾಹಿಕ ಹಕ್ಕು ಇರಲಿದೆ," ಎಂದು ಮದ್ರಾಸ್‌ ಹೈಕೋರ್ಟ್ ಹೇಳಿದೆ.

ಕೊಯಮತ್ತೂರಿನ ಆರ್ ಕಲೈಸೆಲ್ವಿ ಎಂಬವರು ವಿಚ್ಛೇದನ ಕಾಯಿದೆ 1869 ರ ಸೆಕ್ಷನ್ 32 ರ ಅಡಿಯಲ್ಲಿ ವೈವಾಹಿಕ ಹಕ್ಕುಗಳ ಮರುಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಕೊಯಮತ್ತೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು 2019 ರ ಫೆಬ್ರವರಿ 14 ರಂದು ತಿರಸ್ಕಾರ ಮಾಡಿತ್ತು. ಈ ನಿಟ್ಟಿನಲ್ಲಿ ಆರ್ ಕಲೈಸೆಲ್ವಿ ಮದ್ರಾಸ್‌ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

"ನಾನು 2013 ರಿಂದ ಜೋಸೆಫ್‌ ಬೇಬಿ ಜೊತೆಯಲ್ಲಿ ವಾಸವಾಗಿದ್ದೇನೆ. ಆದರೆ ಆತ ನನ್ನನ್ನು ಹೊರಗೆ ಹಾಕಿದ್ದಾನೆ," ಎಂದು ಆರ್ ಕಲೈಸೆಲ್ವಿ ಆರೋಪ ಮಾಡಿ, ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯನ್ನು ವಜಾ ಮಾಡಿದ ನ್ಯಾಯಾಲಯವು, "ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರ ಪರಿಶೀಲನೆ ಬಳಿಕ ಸಮ್ಮತಿ ನೀಡಲು ಯಾವುದೇ ಹಿಂಜರಿಕೆ ಇಲ್ಲ," ಎಂದು ತಿಳಿಸಿದ್ದಾರೆ.

"ದೀರ್ಘ ಸಮಯದಿಂದ ಜೊತೆಯಾಗಿ ವಾಸಿಸುತ್ತಿದ್ದರೂ, ಲಿವಿಂಗ್ ಟುಗೆದರ್‌ನಲ್ಲಿ ಇದ್ದರೂ ಯಾವುದೇ ಒಂದು ಆಚರಣೆಯಂತೆ ಶಾಸ್ತ್ರೋಕ್ತವಾಗಿ ವಿವಾಹವನ್ನು ನೆರವೇರಿಸದೆ ಇದ್ದಾಗ, ಆ ವ್ಯಕ್ತಿಯು ತನ್ನ ವೈವಾಹಿಕ ಹಕ್ಕುಗಳ ಮರುಪಾವತಿಗಾಗಿ ಅರ್ಜಿಯನ್ನು ಸಲ್ಲಿಸಲು ಆಗದು. ದೀರ್ಘ ಸಮಯದವರೆಗೆ ಜೊತೆಯಾಗಿ ಬದುಕುವುದು ಅಥವಾ ಲಿವಿಂಗ್ ಟುಗೆದರ್‌ನಲ್ಲಿ ಇರುವವರಿಗೆ ಯಾವುದೇ ವೈವಾಹಿಕ ಹಕ್ಕು ಇಲ್ಲ. ಲಿವಿಂಗ್‌ ಟುಗೆದರ್‌ ಇರುವವರ ಕೌಟುಂಬಿಕ ವಿಚಾರ ಕೌಟುಂಬಿಕ ಕೋರ್ಟ್‌ಗೆ ಬರುವುದಿಲ್ಲ. ಕಾನೂನಿನ ಪ್ರಕಾರ ವಿವಾಹವಾಗಿದ್ದರೆ ಮಾತ್ರ ವೈವಾಹಿಕ ಹಕ್ಕುಗಳು ದೊರೆಯುತ್ತದೆ," ಎಂದು ಹೇಳಿದೆ.

ಲಿವ್-ಇನ್ ಸಂಬಂಧ ನಿಷೇಧಿಸಿಲ್ಲ: ಪಂಜಾಬ್-ಹರ್ಯಾಣ ಹೈಕೋರ್ಟ್ಲಿವ್-ಇನ್ ಸಂಬಂಧ ನಿಷೇಧಿಸಿಲ್ಲ: ಪಂಜಾಬ್-ಹರ್ಯಾಣ ಹೈಕೋರ್ಟ್

ಭಾರತದಲ್ಲಿ ಲಿವ್‌ ಇನ್‌ ಸಂಬಂಧ

ದೇಶದ ಸುಪ್ರೀಂ ಕೋರ್ಟ್ ಲಿವಿಂಗ್‌ ಟುಗೆದರ್‌ ಅಥವಾ ಲಿವಿಂಗ್‌ ಇನ್ ಸಂಬಂಧವು ಒಪ್ಪುವಂತದ್ದು ಎಂದು ಈಗಾಗಲೇ ಹೇಳಿದೆ. ಹಾಗೆಯೇ ಪತಿ ಪತ್ನಿಯಂತೆ ಜೋಡಿಯೊಂದು ದೀರ್ಘಕಾಲ ವಾಸಮಾಡುತ್ತಿದ್ದರೆ ಅವರನ್ನು ಕಾನೂನು ಬದ್ಧವಾಗಿ ದಂಪತಿ ಎಂದೇ ಭಾವಿಸಲಾಗುತ್ತದೆ'' ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹಾಗೆಯೇ ಲಿವ್ ಇನ್ ಸಂಬಂಧ ಅಪರಾಧವಲ್ಲ, ವಯಸ್ಕರಿಬ್ಬರು ಸಮಾನ ಮನಸ್ಕರ ಜೊತೆ ಸಹಮತ ಬಾಳ್ವೆ ನಡೆಸಿದರೆ ಅದು ತಪ್ಪಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ. ಆದರೆ ಇದಕ್ಕೆ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಕಾನೂನು ಮದುವೆಯ ಪರವಾಗಿ, ಅಕ್ರಮ ಸಂಬಂಧದ ವಿರುದ್ಧವಾಗಿ ಸದಾ ಕೆಲಸ ಮಾಡುತ್ತದೆ. ದೀರ್ಘಕಾಲದ ಬಂಧ ಇಟ್ಟುಕೊಂಡಿದ್ದರೆ ಅದನ್ನು ಮದುವೆ ಎಂದೇ ಪರಿಗಣಿಸಬೇಕಾಗುತ್ತದೆ. ಲಿವ್ ಇನ್ ಸಂಬಂಧದಲ್ಲಿ ಪುರುಷ ಸಾವಿಗೀಡಾದರೆ ಆತನ ಆಸ್ತಿಗೆ ಮಹಿಳೆ ಉತ್ತರಾಧಿಕಾರಿಯಾಗಿ ಮಾರ್ಪಡುತ್ತಾಳೆ ಎಂದು ನ್ಯಾ ಎಂ. ಎ. ಇಕ್ಬಾಲ್ ಮತ್ತು ಅಮೀತ್ ರಾಯ್ ನೇತೃತ್ವದ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು 2015ರಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖ ಮಾಡಿ ತನ್ನ ತೀರ್ಪು ನೀಡಿದೆ.

(ಒನ್‌ಇಂಡಿಯಾ ಸುದ್ದಿ)

Recommended Video

ಧೋನಿಯ ಈ ಮಾತನ್ನು ಕೇಳಿದ್ದಿದ್ರೆ ಟೀಂ‌ ಇಂಡಿಯಾ ಪಾಕ್ ವಿರುದ್ಧ ಸೋಲ್ತಾನೆ ಇರ್ಲಿಲ್ಲ | Oneindia Kannada

English summary
Living Together Won't Confer Any Matrimonial Right says Madras High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X