LIVE: ಚೆನ್ನೈನಲ್ಲಿ ನಿಷೇಧಾಜ್ಞೆ ಶಾಲಾ, ಕಾಲೇಜುಗಳಿಗೆ ರಜೆ

Posted By:
Subscribe to Oneindia Kannada

ಚೆನ್ನೈ, ಜನವರಿ 23: ತಮಿಳುನಾಡಿನಲ್ಲಿ ಸೋಮವಾರದಂದು ಜಲ್ಲಿಕಟ್ಟು ಪರ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಚೆನ್ನೈನ
ಐಸ್ ಹೌಸ್ ಪೊಲೀಸ್ ಠಾಣೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮೇಲೂ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

ಚೆನ್ನೈನ ಮರೀನಾ ಬೀಚಿನಲ್ಲಿದ್ದ ಪ್ರತಿಭಟನಕಾರರನ್ನು ತೆರವುಗೊಳಿಸಲು ಪೊಲೀಸರು ಮುಂದಾದ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಲಾಗಿದೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ತಿರುಗಿ ಬಿದ್ದಿದ್ದಾರೆ. ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಏಕಾ ಏಕಿ ಹಿಂಸಾಸ್ವರೂಪ ಪಡೆದುಕೊಂಡಿದೆ.
* ಚೆನ್ನೈನಲ್ಲಿ ನಿಷೇಧಾಜ್ಞೆ ಶಾಲಾ, ಕಾಲೇಜುಗಳಿಗೆ ರಜೆ
* ಮೆಟ್ರೋ ರೈಲು ಸಂಚಾರ, ಸ್ಥಳೀಯ ರೈಲು ಸಂಚಾರ ವ್ಯತ್ಯಯ

* ಮಧುರೈನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಆಂಭವಾಗಿದೆ.
* ಚೆನ್ನೈನಲ್ಲಿ ಪೊಲೀಸ್ ವಾಹನ ಸೇರಿ 20 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
* ಪ್ರತಿಭಟನಾಕಾರರ ಮೇಲೆ ಪೆಟ್ರೋಲ್ ಬಾಂಬ್ ಬಳಕೆ ಮಾಡಲಾಗುತ್ತಿದೆ.
(ಒನ್ ಇಂಡಿಯಾ ಸುದ್ದಿ)

ಶಾಂತ ರೀತಿಯಿಂದ ನಡೆದಿದ್ದ ಪ್ರತಿಭಟನೆ

ಶಾಂತ ರೀತಿಯಿಂದ ನಡೆದಿದ್ದ ಪ್ರತಿಭಟನೆ

ಜಲ್ಲಿಕಟ್ಟು ಪರ ಶಾಂತ ರೀತಿಯಿಂದ ನಡೆದಿದ್ದ ಪ್ರತಿಭಟನೆ ಈಗ ಎಲ್ಲೆಡೆ ಹಿಂಸಾರೂಪಕ್ಕೆ ತಿರುಗಿದೆ. ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಂತೆ, ಐಸ್ ಹೌಸ್ ಪೊಲೀಸ್ ಠಾಣೆಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ.

ಐಸ್ ಹೌಸ್ ಠಾಣೆ ಸುತ್ತಾ ಮುತ್ತಾ ಉದ್ವಿಗ್ನ

ಐಸ್ ಹೌಸ್ ಠಾಣೆ ಸುತ್ತಾ ಮುತ್ತಾ ಉದ್ವಿಗ್ನ

ಚೆನ್ನೈನ ಐಸ್ ಹೌಸ್ ಪೊಲೀಸ್ ಠಾಣೆ ಸುತ್ತಾ ಮುತ್ತಾ ಉದ್ವಿಗ್ನ ಪರಿಸ್ಥಿತಿ ಮುಂದುವರೆರೆದಿದೆ. ಠಾಣೆಯ ಬಳಿ ಇದ್ದ 20ಕ್ಕೂ ಅಧಿಕ ವಾಹನಗಳಿಗೆ ಬೆಂಕಿ ಇಡಲಾಗಿದೆ.

ಪೊಲೀಸರಿಂದ ಬಲ ಪ್ರಯೋಗ

ಪೊಲೀಸರಿಂದ ಬಲ ಪ್ರಯೋಗ

ಚೆನ್ನೈನ ಮರೀನಾ ಬೀಚ್ ಗೆ ತೆರಳುವ ಎಲ್ಲಾ ರಸ್ತೆಗಳು ಬಂದ್ ಮಾಡಿರುವ ಪೊಲೀಸರು, ಭಾಗಶಃ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಆದರೆ, ಹಿಂಸಾಚಾರ ಮುಂದುವರೆದಿದ್ದು, ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಬಳಸಿದ್ದಾರೆ.

ಜನಗಣಮನ ಹಾಡಿದ ಪ್ರತಿಭಟನಾಕಾರರು

ಮರೀನಾ ಬೀಚ್ ನಲ್ಲಿದ್ದ ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಲು ಮುಂದಾದ ಪೊಲೀಸರು ಕಕ್ಕಾಬಿಕ್ಕಿಯಾದ ಘಟನೆ ನಡೆಯಿತು. ಪ್ರತಿಭಟನಾಕಾರರು ಜನಗಣಮನ ಎಂದು ರಾಷ್ಟ್ರಗೀತೆ ಹಾಡುವ ಮೂಲಕ ಪೊಲೀಸರ ಕೈಕಟ್ಟಿಹಾಕಿದರು.

ತಿರುಚ್ಚಿ, ಸೇಲಂ, ಪುದುಕೋಟೈ

ತಿರುಚ್ಚಿ, ಸೇಲಂ, ಪುದುಕೋಟೈ

ತಿರುಚ್ಚಿ, ಸೇಲಂ, ಪುದುಕೋಟೈನಲ್ಲಿ ಪ್ರತಿಭಟನೆ ಮುಂದುವರಿಕೆ
ಕೊಯಮತ್ತೂರಿನಲ್ಲಿ ಪರಿಸ್ಥಿತಿ ಶಾಂತವಾಗಿದೆ : ಪೊಲೀಸ್
ಚೆನ್ನೈನ ಐಸ್ ಹೌಸ್ ಠಾಣೆಗೆ ವಿದ್ಯಾರ್ಥಿಗಳು ಬೆಂಕಿ ಇಟ್ಟಿಲ್ಲ: ಡಿಸಿಪಿ ರಾಧಾಕೃಷ್ಣ
ಸೋಮವಾರ ಸಂಜೆ 5 ಗಂಟೆಗೆ ವಿಶೇಷ ಅಧಿವೇಶನ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil Nadu police since early morning started evicting protestors who were demonstrating their support for Jallikattu at the Marina Beach.
Please Wait while comments are loading...