ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಕಮಲ್‌ಹಾಸನ್
Recommended Video

ಚೆನ್ನೈ, ಡಿಸೆಂಬರ್ 08: ಮಕ್ಕಳ್ ನಿಧಿಮಯಂ ಪಕ್ಷದ ಸ್ಥಾಪಕ ಕಮಲ್‌ಹಾಸನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಮಕ್ಕಳ ಕಳ್ಳಸಾಗಣೆ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವಂತೆ ಆಗ್ರಹಿಸಿದ್ದಾರೆ.
ಈ ಚಳಿಗಾಲದ ಅಧಿವೇಶನದಲ್ಲಿ ಮೋದಿ ಅವರು ಮಕ್ಕಳ ಕಳ್ಳಸಾಗಣೆ ಬಗ್ಗೆ ಮಾತನಾಡಬೇಕು ಎಂದು ಕಮಲ್‌ಹಾಸನ್ ಆಗ್ರಹಿಸಿದ್ದಾರೆ.
ಮಾನವಕಳ್ಳ ಸಾಗಣೆ ವಿರುದ್ಧ ಕಾಯ್ದೆಯೊಂದು ಇದೇ ಜುಲೈ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ ಆದರೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿಲ್ಲ ಇದರ ಬಗ್ಗೆಯೂ ಕಮಲ್‌ಹಾಸನ್ ಅವರು ಮೋದಿ ಅವರಿಗೆ ನೆನಪಿಸಿದ್ದಾರೆ.

ಈ ಅಧಿವೇಶನದಲ್ಲಿ ಮೋದಿ ಅವರು ಮಾನವ ಕಳ್ಳಸಾಗಣೆ ವಿರುದ್ಧ ಕಾಯ್ದೆ ಬಗ್ಗೆ ಚರ್ಚಿಸುತ್ತಾರೆ ಎಂಬ ನಂಬಿಕೆ ನನಗಿದೆ. ಎಲ್ಲಾ ಪಕ್ಷಗಳು ಈ ಕಾಯ್ದೆಗೆ ಬೆಂಬಲ ಕೊಡುತ್ತಾರೆಂದು ಆಶಿಸುತ್ತೇನೆ ಎಂದು ಕಮಲ್‌ಹಾಸನ್ ಪತ್ರದಲ್ಲಿ ಬರೆದಿದ್ದಾರೆ.
ಮಾನವಕಳ್ಳಸಾಗಣೆ ವಿರುದ್ಧ ಕಾನೂನು ಗಟ್ಟಿಗೊಳ್ಳಲು ಸಂಸತ್ತು ಸರಿಯಾದ ಪರಿಕರಗಳನ್ನು ಒದಗಿಸುತ್ತದೆ ಎಂದು ನಂಬಿದ್ದೇನೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಮಕ್ಕಳ ನಿಧಿಮಯಂ ಪಕ್ಷ ಸ್ಥಾಪನೆ ಮಾಡಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.











Click it and Unblock the Notifications