ಕಮಲ್ ಹಾಸನ್‌ರ ಪಕ್ಷ ತೊರೆದು ಬಿಜೆಪಿ ಸೇರಿದ ಪ್ರಧಾನ ಕಾರ್ಯದರ್ಶಿ
ಚೆನ್ನೈ, ಡಿಸೆಂಬರ್ 25: ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಎ ಅರಣಾಚಲಂ ಪಕ್ಷ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಅರುಣಾಚಲಂ ಅವರು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಎಲ್ ಮುರುಗನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಈ ಮೂಲಕ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನವೇ ಕಮಲ್ ಹಾಸನ್ ಗೆ ಭಾರೀ ಶಾಕ್ ನೀಡಿದ್ದಾರೆ.
ಕೇಂದ್ರದ ಮೂರು ನೂತನ ಕೃಷಿ ಕಾನೂನುಗಳನ್ನು ಬೆಂಬಲಿಸಿ ಅರುಣಾಚಲಂ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಬಿಜೆಪಿಗೆ ಸೇರುತ್ತಿರುವುದು ಸಂತಸ ತಂದಿದೆ ಎಂದು ಅರುಣಾಚಲಂ ನುಡಿದರು.

ಕೇಂದ್ರದ ಕೃಷಿ ಕಾನೂನನ್ನು ಬೆಂಬಲಿಸಲು ಕಮಲ್ ನಿರಾಕರಿಸಿದ ನಂತರ ತಾವು ಬಿಜೆಪಿಗೆ ಸೇರಿಕೊಂಡಿದ್ದಾಗಿ ಅರುಣಾಚಲಂ ಮಾಹಿತಿ ನೀಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ರೈತರಿಗೆ ಅನುಕೂಲವಾಗುವಂತಹ ದೀರ್ಘಾವಧಿ ದೃಷ್ಟಿಯಿಂದ ಈ ಮೂರು ಕಾನೂನುಗಳನ್ನು ರೂಪಿಸಿದ್ದಾರೆ, ನಾನು ಸಹ ರೈತ ಕುಟುಂಬದಿಂದ ಬಂದಿದ್ದರಿಂದ, ಅವುಗಳ ಪ್ರಯೋಜನಗಳನ್ನು ನಾನು ತಿಳಿದಿದ್ದೇನೆ ಎಂದು ಹೇಳಿದರು.
ಕೇಂದ್ರದ ನಿರ್ಧಾರವನ್ನು ಬೆಂಬಲಿಸುವಂತೆ ನನ್ನ ನಾಯಕ (ಕಮಲ್) ಮತ್ತು ಎಂಎನ್‌ಎಂ ನಾಯಕರನ್ನು ನಾನು ಕೇಳಿದಾಗ ಅವರು ನಿರಾಕರಿಸಿದರು. ನಾನಿದನ್ನು ಬಿಜೆಪಿಯ ಕಾನೂನು ಎಂದು ಪರಿಗಣಿಸಬೇಡಿ ಎಂದು ಹೇಳಿದೆ.
ಕೇಂದ್ರ ಸರ್ಕಾರವು ದೀರ್ಘಾವಧಿಯಲ್ಲಿ ರೈತರ ಅನುಕೂಲಕ್ಕಾಗಿ ಈ ಕಾನೂನು ತಂದಿದ್ದಾಗಿ ನಾನು ಹೇಳಿದೆ. ನಾನು ಮನವರಿಕೆ ಮಾಡಲು ಪ್ರಯತ್ನಿಸಿದರೂ ಯಶಸ್ವಿಯಾಗಿಲ್ಲ. ನನಗೆ ಬೇರೆ ಮಾರ್ಗವಿಲ್ಲದ ಕಾರಣ ಪಕ್ಷವನ್ನು ತೊರೆದಿದ್ದೇನೆ ಎಂದಿದ್ದಾರೆ.












Click it and Unblock the Notifications