ಚೆನ್ನೈನಲ್ಲಿ ನೆರೆಹೊರೆಯ ಫ್ಲ್ಯಾಟ್ ಸದಸ್ಯರಿಂದ ಪತ್ರಕರ್ತೆಗೆ ನಿಂದನೆ: ದೂರು ಪಡೆಯದ ಪೊಲೀಸರು

ಚೆನ್ನೈ, ಏಪ್ರಿಲ್ 14:‌ ಮಹಿಳೆಯರ ರಕ್ಷಣೆಗೆ ಪೋಲಿಸರು ಆಗಲಿ ಅಥವಾ ಪೋಲಿಸ್‌ ಇಲಾಖೆಯವರು ಮೊದಲ ಆದ್ಯತೆ ನೀಡುವುದು ಜವಾಬ್ದಾರಿಯಾಗಿರುತ್ತದೆ. ಆದರೆ, ಚೆನ್ನೈನಲ್ಲಿ ಪತ್ರಕರ್ತೆಗೆ ಜೊತೆಗಿದ್ದ ಅಪಾರ್ಟ್‌ಮೆಂಟ್ ಸದಸ್ಯರಿಂದ ಆದ ಕಿರುಕುಳ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯನ್ನು ಪೋಲಿಸರಿಗೆ ತಿಳಿಸಿ, ಪ್ರಕರಣ ದಾಖಲು ಮಾಡುವಂತೆ ಮನವಿ ಮಾಡಿಕೊಂಡರೂ ಪೋಲಿಸರು ದೂರು ಪಡೆಯಲು ನಿರಾಕರಿಸಿದ್ದಾರೆ ಎಂದು ಪತ್ರಕರ್ತೆ ಆರೋಪ ಮಾಡಿದ್ದಾರೆ.

ಚೆನ್ನೈನಲ್ಲಿ ನೆಲಸಿರುವ ಎಸ್.‌ ಶುಭಕೀರ್ತನಾ ವೃತ್ತಿಯಲ್ಲಿ ಪತ್ರಕರ್ತೆಯಾಗಿದ್ದು, ಇಂಡಿಯನ್‌ ಎಕ್ಸಪ್ರೆಸ್ ಹಾಗೂ ರೆಡಿಯೋ ಮಿರ್ಚಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶುಭಕೀರ್ತನ ಚೆನ್ನೈನ ಪರಣಿಪುತ್ತೂರನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಅಲ್ಲಿನ ಫ್ಲ್ಯಾಟ್ಸ್ ಮಾಲೀಕರ ಸಂಘದ ಸದಸ್ಯರಿಂದ ಪತ್ರಕರ್ತೆ ಮೌಖಿಕ ಕಿರುಕುಳ ಮತ್ತು ನಿಂದನೆಯನ್ನು ಎದುರಿಸಿದ್ದೇನೆ ಎಂದು ಶುಭಕೀರ್ತನ ಗುರುವಾರ ಸ್ಥಳೀಯ ಪೋಲಿಸರ ಠಾಣೆಯ ಪೋಲಿಸರನ್ನು ಸಂಪರ್ಕಿಸಿದರೆ ಯಾವುದೇ ಕ್ರಮ ಕೈಗೊಳ್ಳದೇ ದೂರು ಪಡೆಯಲು ನಿರಾಕರಿಸಿದರು. ನನ್ನ ಅಪಾರ್ಟಮೆಂಟ್‌ನಲ್ಲಿ ಪುರುಷ ಸದಸ್ಯರೊಬ್ಬರು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಹಾಗೂ ನಿರಂತರ ದಿನನಿತ್ಯ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಅಪಾರ್ಟಮೆಂಟ್ ಮಾಲೀಕರಾಗಿದ್ದ ಪತ್ರಕರ್ತೆ ಶುಭಕೀರ್ತನಾ ತಮ್ಮ ವಯಸ್ಸಾದ ಪೋಷಕರೊಂದಿಗೆ ವಾಸುತ್ತಿದ್ದರು. ಆದರೆ ನಾನು ಹೆಣ್ಣು ಎಂಬ ಕಾರಣಕ್ಕಾಗಿ ಫ್ಲ್ಯಾಟ್‌ ಮಾಲೀಕರಿಂದ ತಾರತಮ್ಯ ಮಾಡಲಾಗಿದೆ. ನನ್ನನ್ನು ಟ್ರಾನ್ಸ್ಜೆಂಡರ್‌ ಪದದಿಂದ ನಿಂದಿಸಿ ಹಾಗೂ ಬೇರೆವರ ಜತೆ ಹೋಗಿ ಮಲಗಿ ಎಂಬ ಅವಾಚ್ಯ ಶಬ್ಧದಿಂದ ನಿಂದಿಸಲಾಗಿದೆ. ಕಳೆದ ಗುರುವಾರ ನನ್ನನ್ನು ಅಪಾರ್ಟ್‌ಮೆಂಟ್ ನಿವಾಸಿಗಳ ವಾಟ್ಸ್ಆ್ಯಪ್ ಗ್ರೂಪ್‌ನಿಂದ ತೆಗೆದುಹಾಕಲಾಗಿದೆ. ಏಕೆಂದರೆ ನಾನು ಅಪಾರ್ಟ್‌ಮೆಂಟ್‌ನ ಕಾರ್ಯಚಟುವಟಿಕೆಯನ್ನು ಪ್ರಶ್ನಿಸುತ್ತೇನೆ ಎಂದು ಸುಭಕೀರ್ತನಾ ಹೇಳುತ್ತಾರೆ.

Journalist of Chennai Says Police Refused To Take Her Complaint on Harassment

29 ವರ್ಷದ ಯುವತಿ ತಾವು ಮಾಂಗಾಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಸಹ ದೂರು ಸ್ವೀಕೃತಿ ಪಡೆಯದಿರುವುದರಿಂದ ಈ ಪ್ರಕರಣನ್ನು ಗಂಭೀರವಾಗಿ ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

"ನನ್ನನ್ನು ಮರಳಿ ಆಪಾರ್ಟ್‌ಮೆಂಟ್‌ಗೆ ಸೇರಿಸುವುದು ಉಳಿದ ಸದಸ್ಯರಿಗೆ ಬಿಟ್ಟದ್ದು ಮತ್ತು ಅವರು ನಿರ್ಧರಿಸಲು ಮತದಾನವನ್ನು ನಡೆಸಬೇಕು ಎಂದು ಅಧಿಕಾರಿ ಹೇಳಿದರು. ಆದರೆ ನನ್ನನ್ನು ಗುಂಪಿನಿಂದ ತೆಗೆದುಹಾಕಿದಾಗ ಈ ಪ್ರಕ್ರಿಯೆಯನ್ನು ಅನುಸರಿಸಲಿಲ್ಲ, "ಎಂದು ಅವರು ಹೇಳುತ್ತಾರೆ.

Journalist of Chennai Says Police Refused To Take Her Complaint on Harassment

ಕಾಂಪ್ಲೆಕ್ಸ್‌ನ ಅಪಾರ್ಟ್‌ಮೆಂಟ್ ಮಾಲೀಕ ಮತ್ತು ಸಂಘದ ಮಾಜಿ ಅಧ್ಯಕ್ಷ ಎಎಸ್ ಗೋವಿಂದನ್ ಟಿಎನ್‌ಎಂ ಜೊತೆ ಮಾತನಾಡಿದ ಅವರು, ಸುಭಕೀರ್ತನಾ ಅವರ ಸಮಸ್ಯೆಗಳನ್ನು ಪರಿಹರಿಸಲು ನಾವು ಭಾನುವಾರ ವಿಶೇಷ ಸಭೆ ನಡೆಸುತ್ತಿದ್ದೇವೆ. ನಾವು ಈಗಾಗಲೇ ಮೂರು ಬಾರಿ ಪೊಲೀಸ್ ಠಾಣೆಗೆ ಹೋಗಿದ್ದೇವೆ. ಕ್ಷುಲ್ಲಕ ವಿಷಯಗಳಿಂದ ಸಮಸ್ಯೆಗಳು ಪ್ರಾರಂಭವಾಗಿರುವುದರಿಂದ ನಾನು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ (ಆರ್‌ಡಬ್ಲ್ಯೂಎ) ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+