ಜಯಲಲಿತಾ 'ಥ್ಯಾಂಕ್ಸ್' ಹೇಳಿ, ಕೈಬೀಸಿದ್ದರು: ಏಮ್ಸ್

ಚೆನ್ನೈ, ಆಗಸ್ಟ್ 26: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆರೋಗ್ಯ ತಪಾಸಣೆ, ಸಾವಿನ ಗುರಿತಾದ ತನಿಖೆ ನಡೆಸಿರುವ ಆಯೋಗವು ತನ್ನ ವರದಿಯನ್ನು ನೀಡಿದೆ. 2016ರಲ್ಲಿ 9 ಬಾರಿ ಏಮ್ಸ್ ನ ಮೂರು ತಜ್ಞ ವೈದ್ಯರ ತಂಡವು, ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿತ್ತು. ಈ ವೇಳೆಯಲ್ಲಿ ಜಯಲಲಿತಾ ಅವರು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿದ್ದರು ಎಂದಿದ್ದಾರೆ.

ಜಯಲಲಿತಾ ಅವರ ಸಾವಿನ ಕುರಿತಾದ ಊಹಾಪೋಹಗಳ ಬಗ್ಗೆ ತನಿಖೆ ನಡೆಸಿರುವ ಜಸ್ಟೀಸ್ ಅರ್ಮುಗಸ್ವಾಮಿ ಆಯೋಗವು ತನ್ನ ವರದಿಯನ್ನು ನೀಡಿದೆ. ಪಲ್ಮನೋಲೋಜಿಸ್ಟ್ ಡಾ.ಕೆಸಿ ಖಿಲ್ನಾನಿ, ಕಾರ್ಡಿಯೋಲಾಜಿಸ್ಟ್ ಡಾ. ನಿತೀಶ್ ನಾಯ್ಕ್ ಹಾಗೂ ಅನೇಸ್ತೇಟಿಸ್ಟ್ ಡಾ ಅಂಜಾನ್ ತ್ರಿಕಾ ಅವರು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತಿತ್ತು. ಅಂದಿನ ಹಂಗಾಮಿ ಸಿಎಂ ಓ ಪನ್ನೀರ್ ಸೆಲ್ವ, ಲೋಕಸಭಾ ಉಪ ಸಭಾಪತಿ ಎಂ ತಂಬಿದೊರೈ ಹಾಗೂ ಆರೋಗ್ಯ ಸಚಿವ ವಿಜಯಭಾಸ್ಕರ್ ಅವರಿಗೆ ನಿರಂತರವಾಗಿ ಮೆಡಿಕಲ್ ಬುಲೆಟಿನ್ ನೀಡಲಾಗುತ್ತಿತ್ತು.

Jayalalithaa waved and said thanks: AIIMS doctors

ಡಿಸೆಂಬರ್ 03,2016ರಂದು ಜಯಲಲಿತಾ ಅವರ ಬಳಿ ಸುಮಾರು 20 ನಿಮಿಷಗಳ ಕುಳಿತ್ತಿದ್ದೆವು. ಈ ಸಂದರ್ಭದಲ್ಲಿ ಅವರು ನಮಗೆ ಥ್ಯಾಂಕ್ಸ್ ಹೇಳಿ, ಕೈ ಬೀಸಿದರು. ಜಯಲಲಿತಾ ಅವರಿಗೆ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿಲ್ಲ. ಅಥವಾ ಈ ಕುರಿತಂತೆ ಯಾವುದೇ ಸಂಚು ನಡೆಸಿದ್ದು ಕಂಡು ಬಂದಿಲ್ಲ. ಆಸ್ಪತ್ರೆಯ ವ್ಯವಸ್ಥೆ, ಚಿಕಿತ್ಸೆ ಬಗ್ಗೆ ಯಾವುದೇ ದೋಷ ಕಾಣಲಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+