ದತ್ತುಪುತ್ರನ ವಿವಾಹಕ್ಕೆ ಅಮ್ಮಾ ಖರ್ಚು ಮಾಡಿದ್ದು 6 ಕೋಟಿ

ಬೆಂಗಳೂರು, ಅ. 6 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ದತ್ತುಪುತ್ರ ವಿ.ಎನ್‌. ಸುಧಾಕರನ್‌ ವಿವಾಹಕ್ಕೆ ಸುಮಾರು 6 ಕೋಟಿ ರೂ. ಖರ್ಚು ಮಾಡಿದ್ದರು ಎಂಬುದು ವಿಶೇಷ ನ್ಯಾಯಾಲಯ ತೀರ್ಪಿನಿಂದ ಬಹಿರಂಗಗೊಂಡಿದೆ. 1995ರಲ್ಲಿ ಈ ವಿವಾಹ ನಡೆದಿತ್ತು.

ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ನೀಡುವಾಗ ಈ ಕುರಿತು ಉಲ್ಲೇಖಿಸಿದ್ದು, ನ್ಯಾಯಾಧೀಶರಾದ ಜಾನ್‌ ಮೈಕಲ್ ಕುನ್ಹ ಅವರು, ಜಯಲಲಿತಾ ಅವರೊಬ್ಬರೇ ಮದುವೆಯ ಅಷ್ಟೂ ಖರ್ಚನ್ನು ಭರಿಸಿದ್ದರು ಎಂಬುದನ್ನು ಸಾಕ್ಷ್ಯಗಳು ಹೇಳುತ್ತಿವೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ. [ಜಯಾ ಕೇಸ್ ಚೆನ್ನೈಗೆ ವರ್ಗಾಯಿಸಿ ಅಂದ್ರು ದೇವೇಗೌಡ್ರು]

jayalalithaa

ಮದುವೆಯ ಖರ್ಚನ್ನು ಜಯಲಲಿತಾ ಪಾವ­ತಿಸಿಲ್ಲ. ಸುಧಾಕರನ್‌ ಅವರ ಮಾವನ ಮನೆ­ಯವರು ಖರ್ಚಿನಲ್ಲಿ ದೊಡ್ಡ ಮೊತ್ತ ಪಾವತಿ ಮಾಡಿದ್ದಾರೆ ಎಂದು ಜಯಲಲಿತಾ ಪರ ವಕೀಲರು ವಾದಿಸಿದ್ದರು. ಆದರೆ, ಈ ವಾದವನ್ನು ತಳ್ಳಿಹಾಕಿರುವ ನ್ಯಾಯಾಧೀಶರು, ಜಯಲಲಿತಾ ಅವರು ಅಷ್ಟೂ ಖರ್ಚನ್ನು ಭರಿಸಿದ್ದರು ಎಂಬುದನ್ನು ಸಾಕ್ಷ್ಯಗಳು ಹೇಳುತ್ತಿವೆ ಎಂದು ತಿಳಿಸಿದ್ದಾರೆ. [ಜಯಾ ಸಾಮಾನ್ಯ ಖೈದಿ, ಎಸಿ, ಟಿವಿ ಕೊಟ್ಟಿಲ್ಲ]

ಯಾವುದಕ್ಕೆ ಎಷ್ಟು ಖರ್ಚು : ಸುಧಾಕರನ್‌ ಮದುವೆ ಪೆಂಡಾಲ್‌ ಹಾಕಿಸಲು ಸುಮಾರು 3 ಕೋಟಿ, ಊಟ, ನೀರು ಮತ್ತು ತಾಂಬೂಲಕ್ಕಾಗಿ 1.14 ಕೋಟಿ ಖರ್ಚು ಮಾಡಲಾಗಿತ್ತು. ಮದುವೆಗೆ ಟೈಟಾನ್‌ ಕೈಗಡಿಯಾರ ಖರೀದಿ­ಸಲು 1.34 ಲಕ್ಷ, ವಿಶೇಷ ಬಟ್ಟೆ ಹೊಲಿ­ಸಲು 1.26 ಲಕ್ಷ, 100 ಬೆಳ್ಳಿಯ ತಟ್ಟೆಗಳನ್ನು ಖರೀದಿಸಲು 4 ಲಕ್ಷ ಖರ್ಚು ಮಾಡಲಾಯಿತು. 56 ಸಾವಿರ ಆಮಂತ್ರಣ ಪತ್ರವನ್ನು ಅಂಚೆ ಮೂಲಕ ಕಳುಹಿಸಲು 2.24 ಲಕ್ಷ ಪಾವತಿಸಲಾಗಿತ್ತು.

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ.ಗಳ ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಸೆ.27ರಂದು ತೀರ್ಪು ನೀಡಿದೆ. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜಯಲಲಿತಾ ಅವರಿದ್ದಾರೆ. ವಿಶೇಷ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿ, ಜಾಮೀನು ನೀಡಬೇಕೆಂದು ಜಯಲಲಿತಾ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅ.7ರ ಮಂಗಳವಾರ ಅರ್ಜಿಯ ವಿಚಾರಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+