ಆಸ್ಪತ್ರೆಯ CCTV ಆಫ್ ಆಗಿದ್ದೇಕೆ? ಜಯಲಲಿತಾ ಪ್ರಕರಣಕ್ಕೆ ಹೊಸ ತಿರುವು?!
ಚೆನ್ನೈ, ಅಕ್ಟೋಬರ್ 06: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ಆಸ್ಪತ್ರೆಯ ಸಿಸಿಟಿವಿಗಳನ್ನು ಆಫ್ ಮಾಡುವಂತೆ ಪೊಲೀಸರೇ ಸೂಚಿಸಿದ್ದರು ಎಂದು ಅಪೋಲೋ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಈ ಮೂಲಕ ಜಯಲಲಿತಾ ನಿಧನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಜಯಲಲಿತಾ ಅವರ ನಿಧನಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ನೇಮಿಸಲಾದ ಆರ್ಮುಗಸ್ವಾಮಿ ಆಯೋಗಕ್ಕೆ ಅಪೋಲೋ ಆಸ್ಪತ್ರೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಈ ಹೇಳಿಕೆ ದಾಖಲಾಗಿದೆ.
ಆಸ್ಪತ್ರೆಯ ಆಡಳಿತ ಮಂಡಳಿ ನೀಡಿದ ಈ ಹೇಳಿಕೆ ಜಯಲಲಿತಾ ಸಾವಿನ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಅಪೋಲೋ ಆಸ್ಪತ್ರೆ ಸಲ್ಲಿಸಿದ ಅಫಿಡವಿಟ್ ನಲ್ಲೇನಿದೆ?
ಐಜಿ(ಗುಪ್ತಚರ ವಿಭಾಗ) ಕೆ ಎನ್ ಸತಿಯಮೂರ್ತಿ ಸೇರಿದಂತೆ ನಾಲ್ವರು ಉನ್ನತ ಪೊಲೀಸ್ ಅಧಿಕಾರಿಗಳೇ ಸಿಸಿಟಿವಿ ಕ್ಯಾಮರಾವನ್ನು ಆಫ್ ಮಾಡುವಂತೆ ಮನವಿ ಮಾಡಿಕೊಂಡಿದ್ದರು ಎಂದು ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ಮಂಡಳಿ ಹೇಳಿದೆ. ಜಯಲಲಿತಾ ಅವರನ್ನು ಆಸ್ಪತ್ರೆಗೆ ಕರೆತರುವಾಗ ಸಿಸಿತಿವಿ ಕ್ಯಾಮರಾವನ್ನು ಆಫ್ ಮಾಡಲಾಗಿತ್ತು. ನಂತರ ಅವರನ್ನು ಚಿಕಿತ್ಸೆಯ ಕೊಠಡಿಗೆ ಕರೆದೊಯ್ದ ನಂತರ ಸಿಸಿಟಿವಿಯನ್ನು ಆನ್ ಮಾಡಲಾಯಿತು ಎಂದು ಅದು ಹೇಳಿದೆ.

ಪ್ರಕರಣಕ್ಕೆ ಹೊಸ ತಿರುವು?
ಇಂದಿನ ತಂತ್ರಜ್ಞಾನದ ಯುಗದಲ್ಲಿ ಯಾವುದೇ ತನಿಖೆಯ ಸಂದರ್ಭಗಳಲ್ಲೂ ಸಿಸಿಟಿವಿ ಕ್ಯಾಮರಾಗಳು ಬಹಳ ಮಹತ್ವದ ಪಾತ್ರ ವಹಿಸುತ್ತವೆ. ಅಪೋಲೋದಂಥ ಮಲ್ಟಿಸ್ಪೆಷಾಲಲಿಟಿ ಆಸ್ಪತ್ರೆಗಳಲ್ಲೂ ಆಗಿನ ಮುಖ್ಯಮಂತ್ರಿಗಳು ದಾಖಲಾಗಿದ್ದ ಸಮಯದಲ್ಲಿ ಸಿಸಿಟಿವಿ ಕ್ಯಾಮರಾ ಕೆಲಸ ನಿರ್ವಹಿಸುತ್ತಿರಲಿಲ್ಲ ಎಂಬುದು ಅನುಮಾನ ಹುಟ್ಟಿಸಿತ್ತು. ಆದರೆ ಸಿಸಿಟಿವಿ ಕ್ಯಾಮರಾ ಕೆಟ್ಟಿರಲಿಲ್ಲ. ಆದರೆ ಅದನ್ನು ಉದ್ದೇಶಪೂರ್ವಕವಾಗಿಯೇ ಆಫ್ ಮಾಡಲಾಗಿತ್ತು ಎಂಬುದು ಅಪೋಲೋ ಆಸ್ಪತ್ರೆಯ ಹೇಳಿಕೆಯಿಂದ ಸಾಬೀತಾಗಿದೆ. ಅಲ್ಲದೆ ಈ ಸಿಸಿಟಿವಿಗಳನ್ನು ಸ್ವತಃ ಪೊಲೀಸರೇ ಆಫ್ ಮಾಡಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಬೆಚ್ಚಿಬೀಳಿಸಿದೆ.

ವೀರ ಹನುಮಾನ್ ಧಾರಾವಾಹಿ ವೀಕ್ಷಿಸಿದ್ದರು ಅಮ್ಮ!
ಜಯಲಲಿತಾ ಅವರು ಸಾಯುವ ಕೆಲವು ಕ್ಷಣ ಮೊದಲು ಟಿವಿಯಲ್ಲಿ ವೀರ ಹನುಮಾನ್ ಧಾರಾವಾಹಿ ವೀಕ್ಷಿಸುತ್ತಿದ್ದರು ಎಂದು ಇತ್ತೀಚೆಗಷ್ಟೇ ಆರ್ಮುಗಂಸ್ವಾಮಿ ಆಯೋಗಕ್ಕೆ ನೀಡಿದ ಅಫಿಡವಿಟ್ ನಲ್ಲಿ ಜಯಲಲಿತಾ ಅವರ ಸ್ನೇಹಿತೆ ಶಶಿಕಲಾ ನಟರಾಜನ್ ಹೇಳಿಕೆ ನೀಡಿದ್ದರು. ತೀವ್ರ ಹೃದಯಾಘಾತದಿಂದ ಜಯಲಲಿತಾ ಅವರು ಮೃತರಾದರು ಎಂದು ಶಶಿಕಲಾ ಹೇಳಿದ್ದರು. ಆದರೆ 75 ದಿನಗಳ ಜಯಲಲಿತಾ ಅವರ ಆಸ್ಪತ್ರೆ ವಾಸದಲ್ಲಿ ಒಂದು ದಿನವೂ ಅವರ ಚಿತ್ರವನ್ನು ಆಅಸ್ಪತ್ರೆ ಬಿಡುಗಡೆ ಮಾಡಿರಲಿಲ್ಲ. ಅವರ ಆರೋಗ್ಯದ ಕುರಿತ ಮಾಹಿತಿಯನ್ನೂ ಬಹಿರಂಗ ಪಡಿಸಿರಲಿಲ್ಲ. ಅವರ ಆರೋಗ್ಯದ ಕುರಿತ ಮಾಹಿತಿಯನ್ನು ಗೌಪ್ಯವಾಗಿಯೇ ಇಡಲು ಆಸ್ಪತ್ರೆಯ ಮೇಲೂ ಒತ್ತಡವಿತ್ತು ಎಂಬುದು ಮೂಲಗಳಿಂದ ಸಿಕ್ಕ ಮಾಹಿತಿ.

ನಿಗೂಢತೆಯನ್ನೇ ಉಳಿಸಿಹೋದ 'ಅಮ್ಮಾ' ಸಾವು!
ಲಕ್ಷಾಂತರ ತಮಿಳರ ಪಾಲಿನ 'ಅಮ್ಮಾ' ಯಜಲಲಿತಾ ಅವರ ಸಾವು ನಿಗೂಢತೆಯನ್ನೇ ಉಳಿಸಿಹೋಗಿದೆ. ಡೆಸೆಂಬರ್ 5 ರಂದು ರಾತ್ರಿ ಕೊನೆಯುಸಿರೆಳೆದ ಅವರು ಅದಕ್ಕೂ ಮುನ್ನ ಎರಡೂವರೆ ತಿಂಗಳುಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದರು. ಅವರ ಮನೆಯಲ್ಲಿ ಅವರ ಮೇಲೆ ಹಲ್ಲೆ ನಡೆದಿತ್ತು, ಆದ್ದರಿಂದಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತು, ಅವರಿಗೆ ಸ್ಲೋ ಪಾಯ್ಸನ್ ನೀಡಲಾಗುತ್ತಿತ್ತು ಎಂಬಿತ್ಯಾದ ಸಾಕಷ್ಟು ಅಂತೆಕಂತೆಗಳು ಅವರ ಸಾವಿನ ಸುತ್ತ ಸುತ್ತಿಕೊಂಡವು. ಅವರ ಆಪ್ತ ಸ್ನೇಹಿತೆ ಶಶಿಕಲಾ ಅವರ ಮೇಲೆ ಅನುಮಾನ ಹುಟ್ಟಿಕೊಂಡಿತ್ತು. ಆದರೆ ಇದುವರೆಗೂ ಜಯಲಲಿತಾ ಅವರ ಸಾವಿನ ಕುರಿತು ಸ್ಪಷ್ಟ ಮಾಹಿತಿ ನೀಡಬಲ್ಲ ಯಾವ ಸಾಕ್ಷ್ಯವೂ ಸಿಕ್ಕಿಲ್ಲ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD











Click it and Unblock the Notifications