ಸನ್ನೆ ಮೂಲಕ ಸ್ಪಂದಿಸುತ್ತಿದ್ದಾರೆ ಜಯಲಲಿತಾ!

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಅಕ್ಟೋಬರ್ 21: ಪ್ರೊಫೆಸರ್ ರಿಚರ್ಡ್ ಬೇಲೆ ಭಾನುವಾರ ಅಪೋಲೋ ಆಸ್ಪತ್ರೆಯಿಂದ ಹಿಂತಿರುಗಲಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯಸ್ಥಿತಿಯಲ್ಲಿ ಗಣನೀಯವಾಗಿ ಚೇತರಿಕೆ ಕಂಡಿದೆ ಎಂಬ ವರದಿ ಬಂದಿದೆ. ಆದರೂ ಅಪೋಲೋ ಆಸ್ಪತ್ರೆಯಿಂದ ಜಯಲಲಿತಾ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ಮೆಡಿಕಲ್ ಬುಲೆಟಿನ್ ಬಂದಿಲ್ಲ.

ಆಕೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗುವ ಸಾಧ್ಯತೆ ಇದೆ. ಮಾಧ್ಯಮವೊಂದರ ಮಾಹಿತಿ ಪ್ರಕಾರ, ಜಯಲಲಿತಾ ಕೂತು, ಸನ್ನೆಗಳ ಮೂಲಕ ಸ್ಪಂದಿಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ನಿದ್ದೆ ಮಾಡಿಲ್ಲ. ಅದರೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಮುಂದುವರಿಸಲಾಗಿದೆ. ಒಮ್ಮೆ ಆಕೆಗೆ ಹಾಕಿರುವ ಟ್ಯೂಬ್ ತೆಗೆದ ನಂತರ ಮಾತನಾಡಬಹುದು.['ಅಮ್ಮ'ನಿಗೆ ಶನಿ ಭುಕ್ತಿ ಸಮಸ್ಯೆ: ಅ.10ರ ನಂತರ ಓಕೆ ಅಂತಾರೆ ಜ್ಯೋತಿಷಿಗಳು!]

Jayalalithaa

ಜಯಲಲಿತಾ ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡಿದೆ. ತಜ್ಞ ವೈದ್ಯರ ಚಿಕಿತ್ಸೆಯಿಂದ ಸೋಂಕು ಕಡಿಮೆಯಾಗಿದೆ. ಈ ಮಧ್ಯೆ ಎಐಎಡಿಎಂಕೆ ಪಕ್ಷದಿಂದಲೂ ಹೇಳಿಕೆ ಬಂದಿದ್ದು, ತಜ್ಞರು-ವೈದ್ಯರು ನಿತ್ಯವೂ ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.[ಜಯಲಲಿತಾ ನಿಸ್ತೇಜ, ಆರೋಗ್ಯ ವರದಿ ನಿಶ್ಯಬ್ದ]

ಎಐಎಡಿಎಂಕೆ ವಕ್ತಾರೆ ಸರಸ್ವತಿ ಚೆನ್ನೈನಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿ, ಜಯಲಲಿತಾ ಅವರು ವೈದ್ಯರ ಸಕಹೆ ಮೇರೆಗೆ ವಿಶ್ರಾಂತಿಯಲ್ಲಿದ್ದಾರೆ. ಅವರೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯದಲ್ಲೇ ಮನೆಗೆ ಹಿಂತಿರುಗಲಿದ್ದಾರೆ. ಆಕೆ ಪರವಾಗಿ ದೇವರಿದ್ದಾನೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil Nadu chief minister Jayalalithaa is able to sit up and communicate through gestures. While the respiratory support continues, she will be able to communicate verbally once the tracheostomy tube is removed. Professor Richard Beale, consultant intensivist, is expected to return on Sunday.
Please Wait while comments are loading...