ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲ್ಲಿಕಟ್ಟು: ತಮಿಳುನಾಡಿನಿಂದ ಸುಪ್ರಿಂ ಕೋರ್ಟಿಗೆ ಕೇವಿಯಟ್ ಸಲ್ಲಿಕೆ

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಜನವರಿ 22: ತಮಿಳುನಾಡು ಸರಕಾರ ಸುಗ್ರೀವಾಜ್ಞೆ ಜಾರಿಗೊಳಿಸಿರುವ ಬೆನ್ನಿಗೆ, ಮುಂಜಾಗ್ರತಾ ಕ್ರಮವಾಗಿ ಸುಪ್ರಿಂ ಕೊರ್ಟಿಗೆ ಕೇವಿಯಟ್ ಅರ್ಜಿ ಸಲ್ಲಿಸಿದೆ. ಸುಗ್ರೀವಾಜ್ಞೆಗೆ ಸುಪ್ರಿಂ ಕೋರ್ಟ್ ತಕರಾರು ತೆಗೆಯುವ ಸಾಧ್ಯತೆಗಳಿದ್ದು, ಇದೀಗ ಕೇವಿಯಟ್ ಸಲ್ಲಿಸಿರುವುದರಿಂದ ಜಲ್ಲಿಕಟ್ಟು ವಿಚಾರವಾಗಿ ಸುಪ್ರಿಂ ಕೋರ್ಟ್ ಅಂತಿಮ ಆದೇಶ ನೀಡುವ ಮುನ್ನ ತಮಿಳುನಾಡು ವಾದವನ್ನು ಆಲಿಸಲೇಬೇಕಾಗಿದೆ.[ಜಲ್ಲಿಕಟ್ಟು: ಸುಗ್ರೀವಾಜ್ಞೆ ಜಾರಿಯಾದರೂ ನಿಲ್ಲದ ಪ್ರತಿಭಟನೆ]

ಸುಗ್ರೀವಾಜ್ಞೆಯನ್ನು ಸುಪ್ರಿಂ ಕೋರ್ಟಿನಲ್ಲಿ ಪ್ರಶ್ನಿಸುವ ಎಲ್ಲಾ ಸಾಧ್ಯತೆಗಳಿವೆ. ಇಂಥಹ ಹಲವು ಸಂದರ್ಭಗಳಲ್ಲಿ ಕೋರ್ಟ್ ಪ್ರತಿವಾದಿಯ ವಾದವನ್ನೂ ಆಲಿಸದೆ ನೇರವಾಗಿ ಮಧ್ಯಂತರ ತಡೆ ನೀಡಿ ಬಿಡುತ್ತದೆ. ಹೀಗಾಗದಿರಲಿ ಎಂದು ಕೇವಿಯಟ್ ಅರ್ಜಿ ಸಲ್ಲಿಸಲಾಗಿದೆ. ಈಗ ನಿಯಮಗಳ ಪ್ರಕಾರ ಸುಪ್ರಿಂ ಕೋರ್ಟ್ ಮಧ್ಯಂತರ ತಡೆ ನೀಡುವ ಮೊದಲು ತಮಿಳುನಾಡು ಸರಕಾರದ ವಾದವನ್ನು ಕೇಳಲೇಬೇಕಾಗಿದೆ.[ಟ್ವಿಟರ್ ನಲ್ಲಿ ಕಂಬಳಕ್ಕಾಗಿ ಕನ್ನಡಿಗರು ಏನಂದ್ರು?]

 Jalliakktu TN files caveat in SC, want hearing before interim order is passed

ಶನಿವಾರವಷ್ಟೆ ತಮಿಳುನಾಡು ಸರಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದರು. ಇದೀಗ ತಮಿಳುನಾಡು ವಿಧಾನಸಭೆಯ ಮುಂದೆ ಮಸೂದೆಯೂ ಮಂಡನೆಯಾಗಲಿದ್ದು, ನಂತರ ಅದು ಕಾನೂನಾಗಲಿದೆ.

ಸದ್ಯ ಜಲ್ಲಿಕಟ್ಟು ಪ್ರಕರಣ ಸುಪ್ರಿಂ ಕೋರ್ಟಿನಲ್ಲಿದ್ದು ವಿಚಾರಣೆ ನಡೆಯುತ್ತಿದೆ. ಈ ಹಿಂದೆ ಜಲ್ಲಿಕಟ್ಟಿಗೆ ಅವಕಾಶ ನೀಡಿ ಕೇಂದ್ರ ಸರಕಾರ ಹೊರಡಿಸಿದ ಅಧಿಸೂಚನೆ ಅದು ಮಧ್ಯಂತರ ತಡೆ ಹಿಡಿದಿ. ಈ ವಿಚಾರವಾಗಿ ಸುಪ್ರಿಂಂ ಕೋರ್ಟ್ ಇನ್ನೂ ತನ್ನ ಅಂತಿಮ ಆದೇಶ ನೀಡಿಲ್ಲ. ಇದೀಗ ಆದೇಶಕ್ಕೂ ಮುನ್ನ ಸುಗ್ರೀವಾಜ್ಞೆನ್ನೂ ಸುಪ್ರಿಂ ಕೋರ್ಟ್ ಗಮನಿಸಬೇಕಾಗಿದೆ.

English summary
The Tamil Nadu government has filed a caveat in the Supreme Court following the promulgation of the Jallikattu ordinance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X