• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಸಾದ ಉಪಗ್ರಹದೊಂದಿಗೆ ಡಿಕ್ಕಿ ತಪ್ಪಿಸಿದ ಇಸ್ರೋ

|
Google Oneindia Kannada News

ಚಂದ್ರನನ್ನು ಸುತ್ತುತ್ತಾ ಶೋಧವನ್ನು ನಡೆಸುತ್ತಿರುವ ಬಾಹ್ಯಾಕಾಶ ನೌಕೆಗಳು ಒಂದನ್ನೊಂದು ಡಿಕ್ಕಿ ಹೊಡೆಯುವುದನ್ನು ಇಸ್ರೋ ತಪ್ಪಿಸಿದೆ. ಇಸ್ರೋದ ಚಂದ್ರಯಾನ- 2 ಆರ್ಬಿಟರ್‌ ಮತ್ತು ನಾಸಾದ ಚಂದ್ರ ಸ್ಥಳಾನ್ವೇಷಣಾ ಆರ್ಬಿಟರ್‌ಗಳ ಕಕ್ಷೆ ಸೇರುವ ಜಾಗದಲ್ಲಿ ಎರಡು ಉಪಗ್ರಹಗಳು ಕಳೆದ ತಿಂಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು.

ಆದರೆ ಈ ವಿಷಯ ಮೊದಲೇ ಅರಿತ ಇಸ್ರೋ, ಚಂದ್ರಯಾನ ಆರ್ಬಿಟರ್‌ನ ಕಕ್ಷೆಯನ್ನು ಕೊಂಚ ಬದಲಿಸುವ ಮೂಲಕ ಅನಾಹುತವನ್ನು ತಪ್ಪಿಸಿದೆ. ಅ. 20ರಂದು ಚಂದ್ರನ ಉತ್ತರ ಧ್ರುವದ ಬಳಿ ಈ ಎರಡು ಉಪಗ್ರಹಗಳು ಸುಮಾರು 100 ಮೀ.ಗಳಷ್ಟುಸಮೀಪಕ್ಕೆ ಬರಲಿವೆ ಎಂದು ಅಂದಾಜಿಸಲಾಗಿತ್ತು.

ಚಂದ್ರಯಾನ-2 ನೌಕೆಯಿಂದ ಚಂದ್ರನ ಸುತ್ತ 9 ಸಾವಿರ ಪ್ರದಕ್ಷಿಣೆಚಂದ್ರಯಾನ-2 ನೌಕೆಯಿಂದ ಚಂದ್ರನ ಸುತ್ತ 9 ಸಾವಿರ ಪ್ರದಕ್ಷಿಣೆ

ಇಸ್ರೋ ಪ್ರಕಾರ ಚಂದ್ರನ ಉತ್ತರ ಧ್ರುವದ ಸಮೀಪದಲ್ಲಿ 2021ರ ಅಕ್ಟೋಬರ್ 20ರಂದು ಚಂದ್ರಯಾನ-2 ಆರ್ಬಿಟರ್ ಹಾಗೂ ಎಲ್‌ಆರ್‌ಒ ಒಂದಕ್ಕೊಂದು ತೀರ ಹತ್ತಿರಕ್ಕೆ ಬರುವ ಮುನ್ಸೂಚನೆ ದೊರೆತಿತ್ತು. ಇಸ್ರೋ ಹಾಗೂ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಮಾಡಿದ ಲೆಕ್ಕಾಚಾರದಲ್ಲಿ ಉಭಯ ಬಾಹ್ಯಾಕಾಶ ನೌಕೆಗಳ ಕಕ್ಷೆಗಳ ಅಂತರ 100 ಮೀಟರ್‌ಗೂ ಕಡಿಮೆಯಾಗುವುದನ್ನು ಅರಿಯಲಾಯಿತು.

ಹಾಗೆಯೇ ಅಕ್ಟೋಬರ್ 20ರಂದು ಬೆಳಗ್ಗೆ 11.15ಕ್ಕೆ ಎರಡೂ ಬಾಹ್ಯಾಕಾಶ ನೌಕೆಗಳ ನಡುವಿನ ಅಂತರ ಮೂರು ಕಿ.ಮೀ ದೂರವು ಅತ್ಯಂತ ಕಡಿಮೆ ಅಂತರವೆಂದೇ ಪರಿಗಣಿಸಲಾಗುತ್ತದೆ. ಒಂದು ವೇಳೆ ಎರಡು ಉಪಗ್ರಹಗಳ ನಡುವೆ ಢಿಕ್ಕಿ ಸಂಭವಿಸಿದ್ದರೆ ಎರಡೂ ದೇಶಗಳ ಮಿಶನ್‌ ಚಂದ್ರಯಾನ ಯೋಜನೆ ವಿಫಲವಾಗುತ್ತಿತ್ತು. ಆದರೆ ಪಥ ಬದಲಿಸಿರುವ ಕಾರಣ ಇನ್ನು ಮುಂದೆ 2 ಆರ್ಬಿಟರ್‌ಗಳು ಸಮೀಪಕ್ಕೆ ಬರುವ ಭೀತಿ ಇಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ. ಈ ಬಗ್ಗೆ ಸುಮಾರು ಒಂದು ತಿಂಗಳ ನಂತರ ಇಸ್ರೋ ಮಾಹಿತಿ ಬಿಡುಗಡೆ ಮಾಡಿದೆ.

"ಬಾಹ್ಯಾಕಾಶ ಅವಶೇಷಗಳು ಮತ್ತು ಬಾಹ್ಯಾಕಾಶ ನೌಕೆಗಳು ಸೇರಿದಂತೆ ಬಾಹ್ಯಾಕಾಶ ವಸ್ತುಗಳ ಕಾರಣದಿಂದಾಗಿ ಘರ್ಷಣೆಯ ಅಪಾಯವನ್ನು ತಗ್ಗಿಸಲು ಭೂ ಕಕ್ಷೆಯಲ್ಲಿರುವ ಉಪಗ್ರಹಗಳ ಘರ್ಷಣೆಯನ್ನು ತಪ್ಪಿಸುವ ಪ್ರಕ್ರಿಯೆ ಸಾಮಾನ್ಯವಾಗಿದೆ. ಘರ್ಷಣೆಯ ಅಪಾಯ ಇದೆ ಎಂದು ತಿಳಿದಾಗಲೆಲ್ಲ ಇಸ್ರೋ ಇಂಥಹ ನಿಯಮಿತ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅದರ ಕಾರ್ಯಾಚರಣೆಯ ಉಪಗ್ರಹಗಳಿಗೆ CAM ಗಳನ್ನು ಕಾರ್ಯಗತಗೊಳಿಸುತ್ತದೆ. ಆದಾಗ್ಯೂ, ಇಸ್ರೋದ ಬಾಹ್ಯಾಕಾಶ ಪರಿಶೋಧನಾ ಕಾರ್ಯಾಚರಣೆಯಲ್ಲಿ ಇಂತಹ ಡಿಕ್ಕಿಯಾಗುವ ಸಂದರ್ಭ ಅನುಭವಿಸಿದ್ದು ಇದೇ ಮೊದಲು, ಹಾಗಾಗಿ ಇಸ್ರೋ ತಕ್ಷಣ ಈ ಡಿಕ್ಕಿ ತಪ್ಪಿಸುವ ಕ್ರಮ ಕೈಗೊಂಡಿದೆ, "ಎಂದು ಇಸ್ರೋ ಹೇಳಿದೆ.

ಬಾಹ್ಯಾಕಾಶದಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ ಹಾಗೂ ಕಾರ್ಯಾಚರಿಸುತ್ತಿರುವ ಗಗನನೌಕೆಯೊಂದಿಗೆ ಡಿಕ್ಕಿಯನ್ನು ತಪ್ಪಿಸಲು ಭೂ ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹಗಳ ಪಥ ಬದಲಿಸುವ ಕಾರ್ಯವು ಸಾಮಾನ್ಯವಾಗಿದೆ. ಆದರೆ, ಚಂದ್ರನ ಕಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಇಸ್ರೋ ಇಂಥ ಪ್ರಯತ್ನ ಮಾಡಿದೆ.

ಭಾರತದ 700 ಕೆಜಿ ತೂಕದ ಕಾರ್ಟೋಸ್ಯಾಟ್ 2 ಎಫ್ ಹಾಗೂ ರಷ್ಯಾದ 450 ಕೆಜಿ ತೂಕದ ಕ್ಯಾನೊಪಸ್ -ವಿ ಉಪಗ್ರಹಗಳು 2020ರಲ್ಲಿ 224 ಮೀಟರ್‌ಗಳಷ್ಟು ಸಮೀಪದಲ್ಲಿ ಹಾದು ಹೋಗಿದ್ದವು ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಎರಡು ವರ್ಷಗಳ ಹಿಂದೆ ಕ್ರಾಶ್ ಲ್ಯಾಂಡಿಂಗ್ ನಂತರ ಚಂದ್ರಯಾನ-2 ಮಿಷನ್ ವಿಫಲವಾದ ನಂತರವೂ, ಆರ್ಬಿಟರ್ ಮಹತ್ವದ ಮಾಹಿತಿಯನ್ನು ಸಂಗ್ರಹಿಸುತ್ತಾ ಚಂದ್ರನನ್ನು ಸುತ್ತುತ್ತಿದೆ. ಆದಾಗ್ಯೂ, ಈ ಆರ್ಬಿಟರ್ ಭಾರತಕ್ಕೆ ಅತಿ ಪ್ರಮುಖ ಪಾತ್ರ ವಹಿಸಲಿದೆ.

ಏಕೆಂದರೆ ಇದನ್ನು ಚಂದ್ರಯಾನ -3 ಮಿಷನ್‌ನೊಂದಿಗೆ ಬಳಸಲಾಗುತ್ತದೆ. ಇಸ್ರೋ 2022 ರ ಮೂರನೇ ತ್ರೈಮಾಸಿಕದಲ್ಲಿ ಬಹು ನಿರೀಕ್ಷಿತ ಚಂದ್ರಯಾನ-3 ಮಿಷನ್ ಅನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಹೊಸ ಟೈಮ್‌ಲೈನ್ ಬಗ್ಗೆ ಈ ವರ್ಷದ ಆರಂಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದರು.

English summary
For the first time in its space exploration mission, an evasive measure was carried out recently to avoid the collision between Chandrayaan-2 Orbiter and US' Lunar Reconnaissance Orbiter (LRO), Indian Space Research Organisation (ISRO) said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X