ಚೆನ್ನೈನಲ್ಲಿ ಕದ್ದ ವ್ಯಾನ್ ತಳ್ಳಲು ಪೊಲೀಸರನ್ನು ಕರೆದು ಸಿಕ್ಕಿಬಿದ್ದ ಕಳ್ಳ

ಚೆನ್ನೈ, ನವೆಂಬರ್ 30: ಕಳ್ಳ ಆಗ ತಾನೆ ವ್ಯಾನ್‌ನ್ನು ಅಪಹರಿಸಿಕೊಂಡು ಬಂದಿದ್ದ , ಆದರೆ ಆತನ ದುರಾದೃಷ್ಟ ಅರ್ಧದಾರಿಯಲ್ಲೇ ಗಾಡಿ ಕೈಕೊಟ್ಟಿದೆ, ಕೊನೆಗೆ ಆತನ ಸಹಾಯ ತೆಗೆದುಕೊಂಡಿದ್ದು ಯಾರಿಂದ ಅಂತೀರಾ ಪೊಲೀಸರಿಂದ....

ಕೆಟ್ಟು ನಿಂದ ಕದ್ದ ಗಾಡಿಯನ್ನು ಪೊಲೀಸರಿಗೆ ತಳ್ಳಲು ಹೇಳಿ ಕಳ್ಳ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದು ಜೈಲು ಸೇರಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈನ ಪುಜಾಲ್‌ನಲ್ಲಿ ಈ ಘಟನೆ ನಡೆಇದೆ. ಬಾಲಾಜಿ ಅಲಿಯಾದ್ ಬಾಲಕೃಷ್ಣನ್ ಬಂಧಿತ ಕಳ್ಳ.

ವ್ಯಾನ್‌ ಕದ್ದು ಓಡಿಸಿಕೊಂಡು ಬಂದಿದ್ದ ಆದರೆ ವ್ಯಾನ್ ಮಧ್ಯ ರಸ್ತೆಯಲ್ಲೇ ಕೈಕೊಟ್ಟಿದೆ, ಗಾಡಿಯನ್ನು ತಳ್ಳಲು ಯಾರಾದರೂ ಇದ್ದಾರಾ ಎಂದು ಹುಡುಕಿದಾಗ ಪೊಲೀಸ್ ಪೇದೆಗಳಾದ ಆರ್ ಸೆಲ್ವಮಣಿಕಮ್ ಮತ್ತು ಮದನ್ ಕುಮಾರ್ ಚಹಾ ಕುಡುಯಲೆಂದು ಚಹಾದ ಅಂಗಡಿ ಬಳಿ ನಿಂತಿದ್ದರು ಅವರು ಪೊಲೀಸರೆಂದು ತಿಳಿಯದೇ ಅವರ ಬಳಿ ಸಹಾಯ ಕೇಳಿದ್ದಾನೆ.

In Tamil Nadu, man calls cops to help push stolen van, lands in jail

ಪೊಲೀಸರು ಗಾಡಿಯನ್ನು ತಳ್ಳುವಾಗ ಗಾಡಿಯಲ್ಲಿ ಕೀ ಇಲ್ಲದಿರುವುದು ಜೊತೆಗೆ ಗಾಜು ಒಡೆದಿರುವುದು ಕಣ್ಣಿಗೆ ಬಿದ್ದಿದೆ ಆದರೂ ಆತನ ಮೇಲೆ ಮೊದಲು ಅನುಮಾನ ಪಟ್ಟಿರಲಿಲ್ಲ, ಬಳಿಕ ವ್ಯಾನ್ ಹಿಂದೆ ಬರೆದ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ಅದು ರೆಹಮಾನ್ ಎಂಬುವವರಿಗೆ ಸೇರಿದೆ ಎಂದು ತಿಳಿದುಬಂದಿದೆ. ತಕ್ಷಣ ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಕದ್ದ ಗಾಡಿಗೆ ಪೊಲೀಸರ ಸಹಾಯ ಕೇಳಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+