ಹಿಂದೂ 'ಉಗ್ರ' ಪದಬಳಕೆ ಮಾಡಿಲ್ಲ: ಕಮಲ್ ಹಾಸನ್

Subscribe to Oneindia Kannada

ಚೆನ್ನೈ, ನವೆಂಬರ್ 7: ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖ್ಯಾತ ನಟ ಕಮಲ್ ಹಾಸನ್, ಹಿಂದೂಗಳನ್ನು ನೋಯಿಸುವ ಉದ್ದೇಶ ನನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂದೂಗಳಲ್ಲಿ ಉಗ್ರವಾದ, ಭಯೋತ್ಪಾದನೆ ಇದೆ : ಕಮಲ್

ಕಮಲ್ ಹಾಸನ್ ಹಿಂದೂ ಉಗ್ರ ಪದಬಳಕೆ ಮಾಡಿದ್ದರು ಎಂಬುದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ನಾನು ಹಿಂದೂ ಉಗ್ರ ಪದ ಬಳಕೆ ಮಾಡಿಲ್ಲ ಎಂದಿದ್ದಾರೆ ಮಾತ್ರವಲ್ಲ ಧರ್ಮದ ಹೆಸರಿನಲ್ಲಿ ಹಿಂಸೆ ನಡೆಸುವುದು ಸರಿಯಲ್ಲ ಎಂಬುದಾಗಿ ಇಂದು 63ನೇ ವರ್ಷಕ್ಕೆ ಕಾಲಿಟ್ಟ ನಟ ಕಮಲ್ ಅಭಿಪ್ರಾಯಪಟ್ಟಿದ್ದಾರೆ.

Haasan says never intended to hurt Hindus

"ಹಿಂದೂಗಳ ಭಾವನೆಯನ್ನು ನೋಯಿಸುವ ಉದ್ದೇಶ ನನ್ನದಲ್ಲ. ನಾನೂ ಓರ್ವ ಹಿಂದೂವಾಗಿ ಹುಟ್ಟಿದವನು. ನಂತರ ನನ್ನ ದಾರಿ ಬದಲಿಸಿಕೊಂಡೆ ಅಷ್ಟೇ," ಎಂದು ಕಮಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆ್ಯಪ್ ಬಿಡುಗಡೆ ಮಾಡಿ ಪಕ್ಷ ಸ್ಥಾಪನೆಗೆ ಅಡಿಗಲ್ಲು ಹಾಕಿದ ಕಮಲ್

ತಾವು ಭಯೋತ್ಪಾದನೆ ಪದ ಬಳಸಿಲ್ಲ ಎಂದು ಕಮಲ್ ಹಾಸನ್ ಖಂಡಾತುಂಡವಾಗಿ ಹೇಳಿದ್ದು, ನಾನು ಕೇವಲ ತೀವ್ರವಾದಿ ಪದ ಬಳಸಿದ್ದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Facing flak over his comments on right wing extremism, veteran actor Kamal Haasan today said he never intended to hurt Hindus and opposed violence in the name of any religion.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ