ಸಹಪಾಠಿ ಮೇಲೆ ಸಾಮೂಹಿಕ ಅತ್ಯಾಚಾರ: ವಿಡಿಯೋ ಹಂಚಿಕೊಂಡ ತಮಿಳುನಾಡಿನ ಅಪ್ರಾಪ್ತರು
ಚೆನ್ನೈ ಜುಲೈ 9: ತಮ್ಮ ಸಹಪಾಠಿ ಹದಿನೈದು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ 10ನೇ ತರಗತಿಯ ಮೂವರು ವಿದ್ಯಾರ್ಥಿಗಳನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಬಾಲಕರು ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಆಕೆಯೊಂದಿಗೆ ಸಂಬಂಧ ಹೊಂದಿದ್ದ ಮತ್ತೊಬ್ಬ ಹುಡುಗನೊಂದಿಗಿನ ಫೋಟೋ ತೋರಿಸಿ ಆಕೆಗೆ ಬೆದರಿಕೆ ಹಾಕಲಾಗಿದೆ.
ಕಡಲೂರು ಜಿಲ್ಲೆಯ ಎಲ್ಲಾ ಅಪ್ರಾಪ್ತ ಹುಡುಗರು, ವಿದ್ಯಾರ್ಥಿನಿಯನ್ನು ತನ್ನ ಗೆಳೆಯನೊಂದಿಗೆ ತೋರಿಸುವ ಫೋಟೋದೊಂದಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಹುಡುಗಿ ಹಲ್ಲೆ ನಡೆಸಿದ ಹುಡುಗನ ಮನೆಗೆ ಬರುವಂತೆ ಬೆದರಿಕೆ ಹಾಕಿದ್ದಾರೆ. ಘಟನೆ ಬಳಿಕ ಬಂಧಿಸಲಾದ ಹುಡುಗರನ್ನು ವಿಚಾರಣೆ ನಡೆಸಿದ ತಿಟ್ಟಕುಡಿಯ ಪೊಲೀಸ್ ಇನ್ಸ್‌ಪೆಕ್ಟರ್ ಎಂಎಸ್ ಕಿರುಬಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಹುಡುಗಿ ಇತ್ತೀಚೆಗೆ ತನ್ನ ಸ್ನೇಹಿತ, ಹಿರಿಯ ವಿದ್ಯಾರ್ಥಿಯ ಹುಟ್ಟುಹಬ್ಬದ ಆಚರಣೆಗಾಗಿ ಆತನ ಮನೆಗೆ ಭೇಟಿ ನೀಡಿದ್ದಳು ಎಂದು ಪೊಲೀಸರು ಹೇಳುತ್ತಾರೆ. ಆಪಾದಿತ ಅಪರಾಧಿಗಳಲ್ಲಿ ಒಬ್ಬರು, ಹುಡುಗ ಮತ್ತು ಹುಡುಗಿ ಒಟ್ಟಿಗೆ ಇರುವ ಚಿತ್ರವನ್ನು ಹಿಡಿದಿದ್ದಾನೆ. ಅದನ್ನು ಆಕೆಯ ಪೋಷಕರಿಗೆ ತೋರಿಸುವುದಾಗಿ ಹೇಳಿ ಅವಳನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಜೊತೆಗೆ ಆಕೆಗೆ ಶಾಲೆಯ ಹಿಂದಿನ ಮನೆಗೆ ಬರುವಂತೆ ಕೇಳಿದ್ದಾರೆ. ಈ ತಿಂಗಳ ಮೊದಲನೇ ತಾರೀಖಿನಂದು ಭೋಜನ ವಿರಾಮದ ಸಮಯದಲ್ಲಿ ಆಕೆ ಅಲ್ಲಿಗೆ ಹೋದಾಗ, ಒಟ್ಟು ಮೂವರು ಹುಡುಗರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದರಲ್ಲಿ ಒಬ್ಬ ಅಪರಾಧವನ್ನು ವಿಡಿಯೊಗ್ರಾಫ್ ಮಾಡಿದ್ದಾನೆ. ನಂತರ ಅದನ್ನು ಇತರ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾನೆ.

ವಿಡಿಯೋ ಶೇರ್ ಆಗುತ್ತಿದೆ ಎಂದು ತಿಳಿದ ಬಾಲಕಿ ತನ್ನ ತಾಯಿಗೆ ಎಲ್ಲವನ್ನೂ ತಿಳಿಸಿದ್ದಾಳೆ, ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಪೊಲೀಸರು ಆರೋಪಿಯನ್ನು ಅತ್ಯಾಚಾರಕ್ಕಾಗಿ ಬಂಧಿಸಿದ್ದಾರೆ ಮತ್ತು ಪೋಕ್ಸೊ ಕಾಯ್ದೆ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅನ್ನು ಸಹ ಅನ್ವಯಿಸಿದ್ದಾರೆ. ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಅಪ್ರಾಪ್ತ ಬಾಲಕರನ್ನು ಅಬ್ಸರ್ವೇಶನ್ ಹೋಮ್‌ಗೆ ಕಳುಹಿಸಲಾಗಿದೆ.
ಕಡಲೂರು ಪೊಲೀಸ್ ಅಧೀಕ್ಷಕರಾದ ಎಸ್ ಶಕ್ತಿ ಗಣೇಶನ್ ಅವರು, "ಕೇವಲ ಮೂವರು ಹುಡುಗರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ನಾಲ್ಕನೇ ಹುಡುಗನನ್ನು ಹಿಂಬಾಲಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅವನು ಮೊದಲು ಅವಳೊಂದಿಗೆ ಸಂಬಂಧ ಹೊಂದಿದ್ದನು" ಎಂದು ಹೇಳಲಾಗಿದೆ. ಸಂತ್ರಸ್ತ ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications