ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆ: 21 ಪಾಲಿಕೆಗಳಲ್ಲಿ ಡಿಎಂಕೆ ಜಯಭೇರಿ

|
Google Oneindia Kannada News

ಚೆನ್ನೈ, ಫೆಬ್ರವರಿ 23:ತಮಿಳುನಾಡಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 21 ಪಾಲಿಕೆಗಳಲ್ಲಿ ಡಿಎಂಕೆ ಜಯಗಳಿಸಿದೆ.

ಮೈತ್ರಿಕೂಟವು 130 ಪುರಸಭೆಗಳು ಮತ್ತು 350 ಪಟ್ಟಣ ಪಂಚಾಯಿತಿಗಳಲ್ಲಿ 50ರಷ್ಟು ವಾರ್ಡ್ ಸದಸ್ಯ ಸ್ಥಾನಗಳ ಸರಳ ಬಹುಮತದ ಗಡಿಯನ್ನು ದಾಟಿದೆ.

7,621 ವಾರ್ಡ್‌ ಸದಸ್ಯರ ಪೈಕಿ 5,009 ಶೇಕಡ 65ರಷ್ಟು ವಾರ್ಡ್‌ ಸದಸ್ಯ ಸ್ಥಾನಗಳನ್ನು ಮೈತ್ರಿಕೂಟದ ಅಭ್ಯರ್ಥಿಗಳು ಗೆದ್ದಿದ್ದಾರೆ. ಎಐಎಡಿಎಂಕೆ 368 ಮತ್ತು 1,206 ವಾರ್ಡ್‌ಗಳಲ್ಲಿ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಿದೆ.

DMK-Led Secular Progressive Alliance Wins 21 Corporations In Sweep Of Urban Civic Polls

16 ಪಾಲಿಕೆ ವಾರ್ಡ್‌ಗಳು, 56 ಪುರಸಭೆ ವಾರ್ಡ್‌ಗಳು ಮತ್ತು 230 ಪಟ್ಟಣ ಪಂಚಾಯಿತಿ ವಾರ್ಡ್‌ಗಳಲ್ಲಿ ಸ್ವಂತ ಬಲದಿಂದ ಸ್ಪರ್ಧಿಸಿದ್ದ ಬಿಜೆಪಿ ಗೆಲುವು ಸಾಧಿಸಿದೆ. ಅದೇ ರೀತಿ ನಗರಸಭೆಯಲ್ಲಿ 12 ಹಾಗೂ ಪಟ್ಟಣ ಪಂಚಾಯಿತಿಯಲ್ಲಿ 23 ವಾರ್ಡ್‌ ಸದಸ್ಯ ಸ್ಥಾನಗಳನ್ನು ಡಿಎಂಡಿಕೆ ಗೆದ್ದುಕೊಂಡಿದೆ. ಎನ್‌ಟಿಕೆ 6 ಪಟ್ಟಣ ಪಂಚಾಯಿತಿ ವಾರ್ಡ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಟ ಕಮಲ್ ಹಾಸನ್ ಅವರ ಎಂಎನ್‌ಎಂ ಯಾವುದೇ ವಾರ್ಡ್‌ನಲ್ಲಿ ಗೆಲ್ಲಲು ವಿಫಲವಾಗಿದೆ.

138 ಪುರಸಭೆಗಳು, 489 ಪಟ್ಟಣ ಪಂಚಾಯಿತಿಗಳು, 21 ಪಾಲಿಕೆಗಳಿಗೆ ಫೆಬ್ರವರಿ 19 ರಂದು ಚುನಾವಣೆ ನಡೆದಿತ್ತು. 2011ರಲ್ಲಿ ನಡೆದ ನಗರ ನಾಗರಿಕ ಚುನಾವಣೆಯಲ್ಲಿ ಆಗಿನ ಆಡಳಿತಾರೂಢ ಎಐಎಡಿಎಂಕೆ ಎಲ್ಲಾ 10 ನಿಗಮಗಳಲ್ಲಿ ಜಯಗಳಿಸಿತ್ತು.

21 ಪಾಲಿಕೆಗಳ 1,373 ವಾರ್ಡ್‌ಗಳ ಪೈಕಿ ಡಿಎಂಐ ಮೈತ್ರಿಕೂಟ 1,100 ವಾರ್ಡ್‌ಗಳಲ್ಲಿ ಜಯಗಳಿಸಿದರೆ, ಎಐಎಡಿಎಂಕೆ 164 ರಲ್ಲಿ ಗೆದ್ದಿದೆ. 138 ಪುರಸಭೆಗಳಾದ್ಯಂತ 3824 ವಾರ್ಡ್‌ಗಳಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು 2,666 ಅಥವಾ ಶೇಕಡಾ 70ರಷ್ಟು ವಾರ್ಡ್‌ಗಳನ್ನು ಪಡೆದುಕೊಂಡಿದೆ. 110 ರಿಂದ 120 ಅಧ್ಯಕ್ಷ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯು ಮೂರನೇ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಟ್ವೀಟ್​ಮಾಡಿದ್ದಾರೆ.

@ಬಿಜೆಪಿ 4 ತಮಿಳುನಾಡು ಈ ಹಿಂದೆ ಜನಪ್ರತಿನಿಧಿಗಳಿಲ್ಲದ ಕ್ಷೇತ್ರಗಳಲ್ಲಿ ಇಂದು ಗೆಲುವು ಸಾಧಿಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಂತರ ನಾವು ಅಧಿಕೃತವಾಗಿ 3ನೇ ದೊಡ್ಡ ಪಕ್ಷವಾಗಿದ್ದೇವೆ. ನಮ್ಮ ಕೆಚ್ಚೆದೆಯ ಮತ್ತು ಶ್ರಮಜೀವಿಗಳ ಕಾರ್ಯಕರ್ತರಿಗೆ ಅವರ ನೆಲದ ಕೆಲಸಕ್ಕಾಗಿ ಮತ್ತು ಅವರ ಸ್ಫೂರ್ತಿಗಾಗಿ ನಮ್ಮ ಎಲ್ಲ ನಾಯಕರಿಗೆ ಪ್ರಾಮಾಣಿಕವಾಗಿ ಧನ್ಯವಾದಗಳು" ಎಂದು ಅಣ್ಣಾಮಲೈ ಟ್ವೀಟ್​ ಮಾಡಿದ್ದಾರೆ.

ಚೆನ್ನೈನಲ್ಲಿ ಬಿಜೆಪಿ ಒಂದು ವಾರ್ಡ್ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಉಮಾ ಆನಂದನ್ ವಾರ್ಡ್ 134 ರಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೊದಲು, ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಇದುವರೆಗೆ ಮೂರು ವಾರ್ಡ್‌ಗಳನ್ನು ಗೆದ್ದಿದೆ.

ಇದರಲ್ಲಿ ತಿರುಪ್ಪೂರ್‌ನ ವಾರ್ಡ್ 9 ಸೇರಿದ್ದು, ಬಿಜೆಪಿ ಅಭ್ಯರ್ಥಿ 230 ಮತಗಳನ್ನು ಪಡೆದರೆ, ಡಿಎಂಕೆ ಅಭ್ಯರ್ಥಿ ಕೇವಲ 30 ಮತಗಳನ್ನು ಪಡೆಯುವ ಮೂಲಕ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ. ಕರೂರು ಜಿಲ್ಲೆಯಲ್ಲಿ ವಾರ್ಡ್ 3ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

1373 ಮುನ್ಸಿಪಲ್ ಕಾರ್ಪೊರೇಷನ್ ಸ್ಥಾನಗಳಲ್ಲಿ, ಇದುವರೆಗೆ 1,347 ಸ್ಥಾನಗಳಿಗೆ ಫಲಿತಾಂಶ ಹೊರಬಿದ್ದಿದ್ದು, ಡಿಎಂಕೆ ಪ್ಲಸ್ - 1,090 ಸ್ಥಾನಗಳು, ಎಐಎಡಿಎಂಕೆ-ಪ್ಲಸ್ -158, ಬಿಜೆಪಿ 22, ಪಿಎಂಕೆ 5 ಮತ್ತು 72 ವಾರ್ಡ್‌ಗಳಲ್ಲಿ ಸ್ವತಂತ್ರ ಮತ್ತು ಇತರರು ಗೆದ್ದಿದ್ದಾರೆ.

3842 ಮುನ್ಸಿಪಲ್ ಕೌನ್ಸಿಲ್ ಸ್ಥಾನಗಳ ಪೈಕಿ 3,832 ಸ್ಥಾನಗಳಿಗೆ ಫಲಿತಾಂಶ ಹೊರಬಿದ್ದಿದೆ. ಡಿಎಂಕೆ-ಪ್ಲಸ್ ಇದುವರೆಗೆ 2,638, ಎಐಎಡಿಎಂಕೆ-ಪ್ಲಸ್ 641, ಬಿಜೆಪಿ 58, ಪಿಎಂಕೆ 43 ಮತ್ತು ಸ್ವತಂತ್ರ ಮತ್ತು ಇತರರು 452 ವಾರ್ಡ್‌ಗಳನ್ನು ಗೆದ್ದಿದ್ದಾರೆ.

7621 ಪಟ್ಟಣ ಪಂಚಾಯಿತಿ ಸ್ಥಾನಗಳ ಪೈಕಿ 7,603 ಸ್ಥಾನಗಳಿಗೆ ಫಲಿತಾಂಶ ಹೊರಬಿದ್ದಿದೆ. ಡಿಎಂಕೆ-ಪ್ಲಸ್ ಇದುವರೆಗೆ 4,960, ಎಐಎಡಿಎಂಕೆ-ಪ್ಲಸ್ 1,214, ಬಿಜೆಪಿ 233, ಪಿಎಂಕೆ 63 ಮತ್ತು ಸ್ವತಂತ್ರ ಮತ್ತು ಇತರರು 1133 ವಾರ್ಡ್‌ಗಳನ್ನು ಗೆದ್ದಿದ್ದಾರೆ.

15 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆದ್ದುಕೊಂಡಿರುವ ಈರೇನಿಯಲ್ ಪಟ್ಟಣ ಪಂಚಾಯಿತಿಯನ್ನು ಬಿಜೆಪಿ ವಶಪಡಿಸಿಕೊಳ್ಳುವ ಮೂಲಕ ಇತರ ಪಕ್ಷಗಳಿಗೆ ಅಚ್ಚರಿ ಮೂಡಿಸಿದೆ.

Recommended Video

11 ವರ್ಷದ ಮಗುವಿನ ಜೀವ ಉಳಿಸಿದ ಕನ್ನಡಿಗ ಕೆಎಲ್ ರಾಹುಲ್ | Oneindia Kannada

English summary
The DMK-led Secular Progressive Alliance registered a landslide victory in the urban local bodies election on Tuesday, emerging victorious in all 21 corporations. The alliance has crossed the simple majority mark of 50 per cent of ward member posts in 130 municipalities as well as 350 town panchayats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X