ಎಂ.ಕರುಣಾನಿಧಿ ಕುಟುಂಬ ವೃತ್ತಾಂತ: ಇಲ್ಲಿದೆ ವಂಶವೃಕ್ಷ
ಚೆನ್ನೈ, ಆಗಸ್ಟ್ 08: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರದು ತುಂಬು ಕುಟುಂಬ. 5 ದಶಕಗಳ ಕಾಲ ಡಿಎಂಕೆಯ ಅನಭಿಷಿಕ್ತ ದೊರೆಯಾಗಿ ಆಳಿದ ಮುತ್ತುವೇಲ್ ಕರುಣಾನಿಧಿ(94) ಇನ್ನಿಲ್ಲ. ಅವರ ಅಗಲಿಕೆ ತಮಿಳು ರಾಜಕೀಯದಲ್ಲಿ, ಅವರ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಮತ್ತು ಅವರ ಪ್ರೀತಿಯ ಕುಟುಂಬದಲ್ಲಿ ನಿರ್ವಾತ ಸೃಷ್ಟಿಸಿದೆ.
ತಮಿಳು ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅಲ್ಲಿನ ಪಕ್ಷಗಳ ಮುಖಂಡರ ವಂಶವೃಕ್ಷವನ್ನು ಅರ್ಥಮಾಡಿಕೊಳ್ಳಲೇಬೇಕು. ಒಂದೇ ಕುಟುಂಬದ ಹಲವರು ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿರುವುದರಿಂದ ವಂಶವೃಕ್ಷದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
ಎಂ.ಕರುಣಾನಿಧಿ ಅವರಿಗೆ ಮೂವರು ಪತ್ನಿಯರು. ಒಟ್ಟು ಆರು ಜನ ಮಕ್ಕಳು. ಮೊದಲ ಪತ್ನಿಯಿಂದ ಓರ್ವ ಮಗ, ಎರಡನೇ ಪತ್ನಿಯಿಂದ ನಾಲ್ವರು ಮಕ್ಕಳು, ಕೊನೆಯ ಪತ್ನಿಯಿಂದ ಓರ್ವ ಪುತ್ರಿಯನ್ನು ಪಡೆದ ಕರುಣಾನಿಧಿ ಅವರದು ತುಂಬು ಕುಟುಂಬವೇ.
ಅವರ ವಂಶವೃಕ್ಷವನ್ನು ಪರಿಚಯಿಸುವುದು ಈಗ ಸಂದರ್ಭೋಚಿತವೂ ಹೌದು.

ಮೊದಲ ಪತ್ನಿ ಪದ್ಮಾವತಿ
ಎಂ.ಕರುಣಾನಿಧಿ ಅವರಿಗೆ ಮೂವರು ಪತ್ನಿಯರು. ಮೊದಲ ಪತ್ನಿ ಪದ್ಮಾವತಿ. ಪದ್ಮಾವತಿ ಅವರ ಪುತ್ರ ಎಂ ಕೆ ಮುತ್ತು. ಎಂದಿಗೂ ರಾಜಕೀಯದ ಬಗ್ಗೆ ಆಸಕ್ತಿ ತಳೆಯದ ಮುತ್ತು ಅವರು ಸಿನೆಮಾ ಕ್ಷೇತ್ರವನ್ನು ನೆಚ್ಚಿಕೊಂಡರು. ಅವರು ಸುಮಾರು ಏಳು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಕೆಲವು ಚಿತ್ರಗಳಿಗೆ ಕರುಣಾನಿಧಿ ಅವರೇ ಕತೆ ಬರೆದಿದ್ದರಂತೆ! ಆದರೆ ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣ ಅವರು ಎಐಎಡಿಎಂಕೆ ಪಕ್ಷದೊಂದಿಗೆ ಕೈಜೋಡಿಸಿದರು.

ಎರಡನೇ ಪತ್ನಿ ದಯಾಳು ಅಮ್ಮಾಳ್
ದಯಾಳು ಅಮ್ಮಾಳ್ ಅವರು ಕರುಣಾನಿಧಿ ಅವರ ಎರಡನೇ ಪತ್ನಿ. ಎಂ ಕೆ ಅಳಗಿರಿ, ಎಂಕೆ ಸ್ಟಾಲಿನ್, ತಮಿಳರಸು, ಸೆಲ್ವಿ ಇವರು ನಾಲ್ಕು ಜನ ಎರಡನೇ ಪತ್ನಿ ದಯಾಳು ಅಮ್ಮಾಳ್ ಅವರ ಮಕ್ಕಳು. ಎಂ.ಕೆ.ಅಳಗಿರಿ ಮತ್ತು ತಂದೆ ಎಂ ಕರುಣಾನಿಧಿ ಮತ್ತು ಸಹೋದರ ಎಂಕೆ ಸ್ಟಾಲಿನ್ ನಡುವೆ ಅಧಿಕಾರ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಎದ್ದ ವಿವಾದದಿಂದಾಗಿ ದಕ್ಷಿಣ ತಮಿಳುನಾಡಿನ ಡಿಎಂಕೆ ಪಕ್ಷದ ಜವಾಬ್ದಾರಿಯನ್ನು ಅಳಗಿರಿ ಅವರಿಗೇ ನೀಡುವಂತಾಯಿತು. ಈ ಸಂದರ್ಭದಲ್ಲಿ ಸ್ಟಾಲಿನ್ ಮತ್ತು ಅಳಗಿರಿ ನಡುವೆ ಎದ್ದ ಜಗಳ ಕೈ ಮಿಸಲಾಯಿಸುವ ಹಂತಕ್ಕೂ ತಲುಪಿತ್ತು.

ಮುದ್ದಿನ ಪುತ್ರ ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್, ಎಂ ಕರುಣಾನಿಧಿ ಮತ್ತು ದಯಾಳು ಅಮ್ಮಾಳ್ ಅವರ ಎರಡನೇ ಪುತ್ರ. ಸ್ಟಾಲಿನ್ ಕರುಣಾನಿಧಿ ಅವರ ಅತ್ಯಂತ ಮುದ್ದಿನ, ಅಕ್ಕರೆಯ ಪುತ್ರರಲ್ಲೊಬ್ಬರು. ಕರುಣಾನಿಧಿ ಅವರೊಂದಿಗೆ ಕೊನೆಯ ದಿನದವರೆಗೂ ಜೊತೆಗಿದ್ದ ಸ್ಟಾಲಿನ್, ಅವರು ಅನಾರೋಗ್ಯ ಪೀಡಿತರಾದಾಗಿನಿಂದಲೂ ಅವರದೇ ತತ್ತ್ವಗಳ ಮೂಲಕ ಡಿಎಂಕೆಯನ್ನು ಮುನ್ನಡೆಸುತ್ತಿದ್ದಾರೆ. ಸದ್ಯಕ್ಕೆ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷ ನಾಯಕರೂ ಆಗಿರುವ ಸ್ಟಾಲಿನ್, ತಂದೆಯ ಅಗಲಿಕೆಯಿಂದ ವಿಚಲಿತರಾಗಿದ್ದಾರೆ.

ಮೂರನೇ ಪತ್ನಿ ರಜತಿ ಅಮ್ಮಾಳ್
ರಜತಿ ಅಮ್ಮಾಳ್ ಅವರು ಕರುಣಾನಿಧಿ ಅವರ ಮೂರನೇ ಪತ್ನಿ. ಅವರ ಪುತ್ರಿಯೇ ಕನ್ನಿಮೋಳಿ. ಟು ಜಿ ತರಂಗಗುಚ್ಚ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ ಕನ್ನಿಮೋಳಿ ರಾಜ್ಯಸಭಾ ಸದಸ್ಯರೂ ಹೌದು. ಅವರಿಗೆ ಪ್ರಾರಂಭದಲ್ಲಿ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಕರುಣಾನಿಧಿ ಅವರ ಸಾಹಿತ್ಯದ ಉತ್ತರಾಧಿಕಾರಿ ಎನ್ನಿಸಿದ್ದ ಕನ್ನಿಮೋಳಿ ದಿ ಹಿಂದು ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications