ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಒಂದು ಸುರಂಗ: ವಿಶೇಷತೆ?

|
Google Oneindia Kannada News

ತಿರುಪುರ, ಏಪ್ರಿಲ್ 03: ಕೊರೊನಾದಿಂದ ತಪ್ಪಿಸಿಕೊಳ್ಳಲು ಏನೇನೆಲ್ಲಾ ಉಪಾಯಗಳನ್ನು ಮಾಡಲಾಗುತ್ತಿದೆ. ಹಾಗೆಯೇ ತಮಿಳುನಾಡಿನಲ್ಲಿ ಒಂದು ಸುರಂಗವನ್ನೇ ತೆರೆಯಲಾಗಿದೆ.

Recommended Video

250 ದಿನಗೂಲಿ ಕಾರ್ಮಿಕರಿಗೆ ಆಹಾರ ನೀಡ್ತಿದ್ದಾರೆ ಪ್ರಕಾಶ್ ರಾಜ್ | Prakash Raj | Oneindia Kannada

ಈ ಸುರಂಗದಲ್ಲಿ ಹೋಗಿ ನಿಂತುಕೊಂಡರೆ ಇಡೀ ದೇಹಕ್ಕೆ ಸ್ಪ್ರೇ ಮಾಡಲಾಗುತ್ತದೆ. ತಮಿಳುನಾಡಿನ ತಿರುಪುರ್ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿಯೇ ಸೇರುತ್ತಿದೆ. ಜನರ ದಟ್ಟಣೆ ನೋಡಿ ವೆಂಕಟೇಶ್ ಎಂಬ ಶುದ್ಧ ಕುಡಿಯುವ ನೀರಿನ ಘಟಕ ನಡೆಸುತ್ತಿರುವ ವ್ಯಕ್ತಿಗೆ ಕಳವಳ ಉಂಟಾಗಿತ್ತು.

ಆದರೆ ಅವರು ಸುಮ್ಮನೆ ಕೂರದೆ ಟರ್ಕಿಯಲ್ಲಿ ಜನರು ಸುರಂಗದೊಳಗೆ ನುಸುಳಿದರೆ ಅವರಿಗೆ ಸೋಂಕು ಮುಕ್ತ ದ್ರಾವಣ ಸಿಂಪಡಿಸುವ ವ್ಯವಸ್ಥೆಯ ವಿಡಿಯೋ ನೋಡಿ, ಉತ್ತೇಜಿತರಾದರು.

Disinfectant Tunnel In Tirupur

ಅದೇ ಪ್ರಯೋಗ ಇಲ್ಲೂ ಮಾಡಿದರು. ಹಗುರ ಉಕ್ಕಿನ ಚೌಕಟ್ಟು ಬಳಸಿ ಎರಡೇ ದಿನದಲ್ಲಿ ಸುರಂಗ ನಿರ್ಮಿಸಿದರು. ಅದರೊಳಗೆ ಮಂಜಿನ ರೀತಿ ಸೋಡಿಯಂ ಹೈಪೋಕ್ಲೋರೈಡ್ ಎಂಬ ದ್ರಾವಣ ಸಿಂಪಡಣೆಯಾಗುವಂತೆ ಮಾಡಿದರು.

ಬಳಿಕ ಅದನ್ನು ಮಾರುಕಟ್ಟೆಗೆ ತಂದಿಟ್ಟರು. ಅದನ್ನು ಈಗ ಎಲ್ಲರೂ ಬಳಸುತ್ತಿದ್ದಾರೆ. ಮಾರುಕಟ್ಟೆಯಿಂದ ನಿರ್ಗಮಿಸುವವರು ಇದರಿಂದಲೇ ತೆರಳಬೇಕಾಗುತ್ತದೆ. ಇದಕ್ಕೆ ಒಂದು ಲಕ್ಷ ರೂ ವೆಚ್ಚ ಮಾಡಿದ್ದಾರೆ.ದೆಹಲಿಯ ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳುನಾಡಿನ 50 ಮಂದಿಗೆ ಕೊರೊನಾ ಸೋಂಕು ತಗುಲಿದೆ.

15 ದಿನಗಳ ಹಿಂದೆ ದೆಹಲಿಯ ನಿಜಾಮುದ್ದೀನ್​ನ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಅನೇಕ ರಾಜ್ಯಗಳ ಜನರು ಸೇರಿದ್ದರು.

ಈ ಸಭೆಯಲ್ಲಿ ಭಾಗವಹಿಸಿದ್ದ ತೆಲಂಗಾಣದ 6 ಜನರು ಸೇರಿದಂತೆ ಒಟ್ಟು 10 ಸಾವನ್ನಪ್ಪಿದ್ದಾರೆ. 300ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

English summary
People will be sprayed with disinfectants while passing through the tunnel at the Thennampalayam market, flocked by huge crowds even at the time of lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X