ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಸಾವಿನ ಸುದ್ದಿ ತಿಳಿಯದೇ ವಿಧಿವಶರಾದ ಚೋ

ಜಯಲಲಿತಾ ಹಾಗೂ ಚೋ ಅವರಿಬ್ಬರು ಅಪೋಲೋ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಆದರೆ, ಜಯಾ ಸಾವಿನ ಸುದ್ದಿ ಬಗ್ಗೆ ತಿಳಿಯದೆ ಚೋ ಅವರು ಅವರನ್ನು ಹಿಂಬಾಲಿಸಿದ್ದಾರೆ.

By Mahesh
|
Google Oneindia Kannada News

ಚೆನ್ನೈ, ಡಿಸೆಂಬರ್ 07: ಖ್ಯಾತ ಅಂಕಣಕಾರ, ರಾಜಕೀಯ ವಿಶ್ಲೇಷಕ, ಪತ್ರಕರ್ತ, ನಟ, ಸಂಭಾಷಣಕಾರ, ಸಿನೆಮಾ ನಿರ್ದೇಶಕ ಶ್ರೀನಿವಾಸ ಅಯ್ಯರ್ ರಾಮಸ್ವಾಮಿ ಅಲಿಯಾಸ್ ಚೋ ರಾಮಸ್ವಾಮಿ ಅವರು ಅಪೋಲೋ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಜಯಲಲಿತಾ ಹಾಗೂ ಚೋ ಅವರಿಬ್ಬರು ಅಪೋಲೋ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಆದರೆ, ಜಯಾ ಸಾವಿನ ಸುದ್ದಿ ಬಗ್ಗೆ ತಿಳಿಯದೆ ಚೋ ಅವರು ಅವರನ್ನು ಹಿಂಬಾಲಿಸಿದ್ದಾರೆ.[ಜಯಲಲಿತಾ ಅಪರೂಪದ ಚಿತ್ರಗಳು]

ಜಯಲಲಿತಾ ಅವರ ಹಿತೈಷಿಯಾಗಿದ್ದ ಚೋ ಅವರಿಗೆ 82 ವರ್ಷ ವಯಸ್ಸಾಗಿತ್ತು. ನವೆಂಬರ್ 29ರಂದು Chronic Obstructive Pulmonary ಸಮಸ್ಯೆಯಿಂದಾಗಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. [ಮೋದಿಯನ್ನು 'ಮರ್ಚಂಟ್ ಆಫ್ ಡೆತ್' ಎಂದಿದ್ದ ಚೋ!]

ಜಯಲಲಿತಾ ಅವರು ಕೂಡಾ ಜ್ವರ, ಜಲಸಂಬಂಧಿ ಸಮಸ್ಯೆಯಿಂದ ಇದೇ ಆಸ್ಪತ್ರೆಯ ಬೇರೊಂದು ಮಹಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ವೈಫಲ್ಯ, ಹೃದಯಾಘಾತಕ್ಕೆ ಒಳಗಾದ ಜಯಾ ಅವರು ಡಿಸೆಂಬರ್ 5ರ ರಾತ್ರಿ 11.30ಕ್ಕೆ ಕೊನೆಯುಸಿರೆಳೆದರು.[ಮೋದಿಯನ್ನು 'ಮರ್ಚಂಟ್ ಆಫ್ ಡೆತ್' ಎಂದಿದ್ದ ಚೋ!]

ಫ್ಲಾಶ್ ಬ್ಯಾಕ್: 2015ರಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ಅವರು ದಾಖಲಾಗಿದ್ದಾಗ, "ನಿಮ್ಮಂಥ ಮಾರ್ಗದರ್ಶಿ, ಸ್ನೇಹಿತ, ತತ್ತ್ವಜ್ಞಾನಿಯ ಅಗತ್ಯ ನನಗಿದೆ. ಆರೋಗ್ಯವಂತರಾಗಿ ಆದಷ್ಟು ಬೇಗ ಬನ್ನಿ" ಎಂದು ಜಯಲಲಿತಾ ಹಾರೈಸಿದ್ದರು. ಈಗ ಕಾಕತಾಳೀಯವೆಂಬಂತೆ, ಜಯಲಲಿತಾ ಅವರನ್ನು ಚೋ ರಾಮಸ್ವಾಮಿ ಹಿಂಬಾಲಿಸಿದ್ದಾರೆ.

Critical in the same hospital, Cho didn't know of Jaya's death

'ತುಘಲಕ್' ಪತ್ರಿಕೆಯ ಸಂಪಾದಕರಾಗಿದ್ದ ಚೋ ಅವರು ಇಂದಿರಾಗಾಂಧಿ, ವಾಜಪೇಯಿ, ಕರುಣಾನಿಧಿ, ಜಯಲಲಿತಾ, ಜೆಬಿ ಕೃಪಲಾನಿ, ಎಂಜಿ ರಾಮಚಂದ್ರನ್, ರಾಮಕೃಷ್ಣ ಹೆಗಡೆ, ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಟಿಪ್ಪಣಿ ಬರೆದಿದ್ದರು. ಮೋದಿಯನ್ನು 'ಮರ್ಚಂಟ್ ಆಫ್ ಡೆತ್' ಎಂದು ಹಾಸ್ಯಭರಿತವಾಗಿ ಹೊಗಳಿದ್ದರು.

ರಾಜಕೀಯವಾಗಿ ಎಲ್ಲರೊಡನೆ ದ್ವೇಷ ಕಟ್ಟಿಕೊಟ್ಟಿದ್ದ ಜಯಾ ಅವರಿಗೆ ಫ್ರೆಂಡ್, ಫಿಲಾಸಫರ್ ಹಾಗೂ ಗೈಡ್ ಆಗಿ ಚೋ ಸದಾ ಅವರ ಹಿತ ಬಯಸುತ್ತಿದ್ದರು.ಡಿಎಂಕೆಯ ಕುಟುಂಬ ರಾಜಕೀಯವನ್ನು ಕಟುವಾಗಿ ವಿರೋಧಿಸಿದ್ದರು.

ಎಂಜಿಆರ್, ಶಿವಾಜಿ ಗಣೇಶನ್, ಕಮಲ ಹಾಸನ್, ರಜನಿಕಾಂತ್ ಸೇರಿದಂತೆ ಹಲವರು ದಿಗ್ಗಜರ ಜತೆ ನಟಿಸಿದ್ದ ಚೋ ಅವರು 14 ನಾಟಕಗಳನ್ನು ರಚಿಸಿದ್ದು, ನಾಟಕಗಳು 5 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ಚೋ ಅವರ 'The Whole Truth' ನಾಟಕದ ರಿಹರ್ಸಲ್ ನಲ್ಲಿ ವಿಲನ್ ಪಾತ್ರವಹಿಸಿದ್ದರು, ಜಯಾ ಅವರ ಜತೆ ನಾಟಕ ಅಭ್ಯಾಸದ ಬಗ್ಗೆ ಚೋ ಟೈಮ್ಸ್ ನಲ್ಲಿ ಬರೆದಿದ್ದಾರೆ.

ಚೋ ಅವರು ಬಹು ಮುಖ ಪ್ರತಿಭೆಯುಳ್ಳವರಾಗಿದ್ದರು. ಅಂದಿನ ಮದ್ರಾಸ್ ಕ್ರಿಕೆಟ್ ಅಸೋಸಿಯೇಷನ್ ನ ಎರಡನೇ ಡಿವಿಜನ್ ನಲ್ಲಿ ಕ್ರಿಕೆಟರ್ ಆಗಿದ್ದಾರು, ಮದ್ರಾಸ್ ಹೈಕೋರ್ಟಿನಲ್ಲಿ ಕಾನೂನು ವ್ಯಾಸಂಗ ಮಾಡಿದರು, ಟಿಟಿಕೆ ಕಂಪನಿಗೆ ಹಲವು ವರ್ಷಗಳ ಕಾಲ ಕಾನೂನು ಸಲಹೆಗಾರರಾಗಿದ್ದರು.

English summary
Despite being in the same hospital, Cho Ramaswamy wasn't aware of Jayalalithaa's death. On Saturday he complained of Chest pain and was moved to the ICU. On Sunday, Jayalalithaa suffered a massive cardiac arrest and shifted to the CCU. She passed away on Monday and he a little after a day. Both died of cardiac arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X