ಕೊಯಮತ್ತೂರು: ಚೆಟ್ಟಿ ಸ್ಟ್ರೀಟ್ ಕಟ್ಟಡ ಕುಸಿತ, ಇಬ್ಬರು ಮೃತ

ಕೊಯಮತ್ತೂರು, ಸೆ. 6: ಇಲ್ಲಿನ ಚೆಟ್ಟಿ ಸ್ಟ್ರೀಟ್ ಬಳಿಯ ಕೆಸಿ ತೋಟ್ಟಮ್ ಎಂಬಲ್ಲಿ ಎರಡು ಮಹಡಿ ಕಟ್ಟಡವೊಂದು ಭಾನುವಾರ ತಡರಾತ್ರಿ ಕುಸಿದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವುದು ಇಂದು ದೃಢಪಟ್ಟಿದೆ. ರಾತ್ರಿಯಿಡಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 6 ಮಂದಿಯನ್ನು ರಕ್ಷಿಸಲಾಗಿದೆ.

Recommended Video

      ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಸಿದ್ರಾ? ಹಂಗಾದ್ರೆ.. ಗೋವಿಂದ | Oneindia Kannada

      ತೀವ್ರ ಮಳೆಯಿಂದಾಗಿ ಶಿಥಿಲಗೊಂಡಿದ್ದ ಕಟ್ಟಡ ಕುಸಿದಿದ್ದು, ಘಟನಾ ಸ್ಥಳಕ್ಕೆ ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಆದರೆ, ಇಬ್ಬರು ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

      ಮೃತರ ಪೈಕಿ ಒಬ್ಬರನ್ನು 27 ವರ್ಷ ವಯಸ್ಸಿನ ಶ್ವೇತಾ ಎಂದು ಗುರುತಿಸಲಾಗಿದೆ. ಆಕೆಯ ಪುತ್ರ 5 ವರ್ಷದ ಮಗು ರಕ್ಷಿಸಿರುವ ಸಿಬ್ಬಂದಿ, ತಕ್ಷಣವೇ ಕೊಯಮತ್ತೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಾಯಗೊಂಡಿರುವ ಶ್ವೇತಾ ಅವರ ಅತ್ತೆ, ಅತ್ತಿಗೆಗೆ ಕೂಡಾ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

      Coimbatore: 2 Dead After Building Collapses, 6 Rescued

      ಈ ಕಟ್ಟಡದಲ್ಲಿ ಕನಿಷ್ಠ ಎರಡು ಕುಟುಂಬ ವಾಸವಾಗಿತ್ತು, ಇನ್ನೂ ಕೆಲವರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಘಟನಾ ಸ್ಥಳಕ್ಕೆ ಡಿಸಿ ರಾಜಮಣಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+