ಪಕ್ಕದ ಮನೆಯಲ್ಲಿ ಟಿವಿ ಆನ್ ಮಾಡಿ ಎಂದು ಕೇಳಿದ್ದಕ್ಕೆ, ಬಾಲಕಿಯ ಕೊಲೆ
ಚೆನ್ನೈ, ಜುಲೈ 16: ಪಕ್ಕದ ಮನೆಗೆ ಹೋಗಿ ಟಿವಿ ಆನ್ ಮಾಡಿ ಎಂದು ಬಾಲಕಿ ಜೀವಕ್ಕೇ ಕುತ್ತು ತಂದುಕೊಂಡಿದ್ದಾಳೆ.
ತಾಯಿಯ ಜೊತೆ ವಾಸಿಸುತ್ತಿದ್ದ ಮೂರನೇ ತರಗತಿ ಬಾಲಕಿ ಮನೆಯಲ್ಲಿ ಬೇಸರವರಾಗುತ್ತಿದೆ ಶಾಲೆಯೂ ಇಲ್ಲ ಎಂದು ಪಕ್ಕದ ಮನೆಗೆ ಆಟವಾಡಲು ತೆರಳಿದ್ದಳು, ಆ ಸಂದರ್ಭದಲ್ಲಿ ಅಲ್ಲಿದ್ದ ಬಾಲಕ ಹಾಗೂ ಆತನ ತಂದೆ ನಡುವೆ ವಾಗ್ವಾದ ನಡೆಯುತ್ತಿತ್ತು.
ಅದೇ ಸಂದರ್ಭದಲ್ಲಿ ಬಾಲಕಿ ಟಿವಿ ಆನ್ ಮಾಡುವಂತೆ ಕೇಳಿದ್ದಾಳೆ ಅದಕ್ಕೆ ಕೋಪಗೊಂಡು ವ್ಯಕ್ತಿ ಆಕೆಯನ್ನು ಪ್ಲಾಸ್ಟಿಕ್ ಡ್ರಮ್ ಒಳಗೆ ಹಾಕಿ ಬಾಗಿಲು ಮುಚ್ಚಿ ಹೊರಗೆ ಹೋಗಿದ್ದಾನೆ.

ಬಳಿಕ ಅಲ್ಲಿಯೇ ಹತ್ತಿರವಿರುವ ಬ್ರಿಡ್ಜ್ ಬಳಿ ಹೋಗಿ ಮಗನನ್ನು ನಾಲೆಗೆ ತಳ್ಳಿದ್ದಾನೆ. ಇದನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ ಡ್ರಮ್‌ನಲ್ಲಿದ್ದ ಬಾಲಕಿಯನ್ನು ಡ್ರಮ್ ಸಮೇತವಾಗಿ ನಾಲೆಗೆ ನೂಕಲು ಯತ್ನಿಸುತ್ತಿದ್ದ ವ್ಯಕ್ತಿ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೇನಾದರೂ ನಡೆದಿತ್ತೇ ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿದುಬರಲಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿಯ ತಾಯಿ ಕೂಲಿ ಕೆಲಸ ಮಾಡುತ್ತಿದ್ದರು, ಆಕೆಯ ತಂದೆ ಇರಲಿಲ್ಲ.












Click it and Unblock the Notifications