ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಕಾರ್ಪೋರೇಶನ್ ಚುನಾವಣೆ: ಗೆದ್ದ ಬಿಜೆಪಿ ಅಭ್ಯರ್ಥಿ ಗೋಡ್ಸೆ ಅನುಯಾಯಿ

|
Google Oneindia Kannada News

ಚೆನ್ನೈ, ಫೆ 23: ತಮಿಳುನಾಡಿನ ವಿವಿಧ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಮಂಗಳವಾರದಂದು (ಫೆ 22) ಹೊರಬಿದ್ದಿದೆ. ನಿರೀಕ್ಷೆಯಂತೆ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಭರ್ಜರಿ ಜಯಭೇರಿ ಸಾಧಿಸಿದೆ. ಎಐಎಡಿಎಂಕೆ ಎರಡನೇ ಸ್ಥಾನದಲ್ಲಿದೆ.

ತಮಿಳುನಾಡಿನಲ್ಲಿ ಅಕೌಂಟ್ ಓಪನ್ ಮಾಡಲು ತಿಣುಕಾಡುತ್ತಿರುವ ಬಿಜೆಪಿ ನಿರೀಕ್ಷೆಗಿಂತ ಹೆಚ್ಚು ಸ್ಥಾನವನ್ನು ಗೆಲ್ಲುವ ಮೂಲಕ ಪ್ರಾದೇಶಿಕ ಪಕ್ಷಗಳಿಗೆ ಎಚ್ಚರಿಕೆಯ ಸೈರನ್ ಹೊಡೆದಿದೆ. ಬಿಜೆಪಿ ಸೀಟು ಹಂಚಿಕೆಯಲ್ಲಿ ಎಐಎಡಿಎಂಕೆ ಜೊತೆ ಹೊಂದಾಣಿಕೆ ಆಗದ ಕಾರಣ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು.

Recommended Video

Darling Krishna | ಲವ್ ಮಾಕ್ಟೇಲ್ 2 ಬಗ್ಗೆ ನಟ ಡಾರ್ಲಿಂಗ್ ಕೃಷ್ಣ ಮಾತು | Love mocktail 2

ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆ: 21 ಪಾಲಿಕೆಗಳಲ್ಲಿ ಡಿಎಂಕೆ ಜಯಭೇರಿತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆ: 21 ಪಾಲಿಕೆಗಳಲ್ಲಿ ಡಿಎಂಕೆ ಜಯಭೇರಿ

ಗ್ರೇಟರ್ ಚೆನ್ನೈ ಕಾರ್ಪೋರೇಶನ್ ಚುನಾವಣೆಯಲ್ಲಿ ಡಿಎಂಕೆ ಅಭೂತಪೂರ್ವ ಜಯವನ್ನು ಸಾಧಿಸಿದೆ. ಬಹುತೇಕ ವಾರ್ಡ್‌ಗಳಲ್ಲಿ ಡಿಎಂಕೆ ಗೆದ್ದಿದ್ದು, ಎಐಎಡಿಎಂಕೆ ಎರಡನೇ ಸ್ಥಾನದಲ್ಲಿದೆ. ಫೆಬ್ರವರಿ ಹತ್ತೊಂಬತ್ತಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು.

ಚೆನ್ನೈ ಚುನಾವಣೆಯಲ್ಲಿ ಬಿಜೆಪಿಯ ಒಬ್ಬ ಅಭ್ಯರ್ಥಿ ಗೆಲ್ಲುವ ಮೂಲಕ ಕೌನ್ಸಿಲಿಗೆ ಪ್ರವೇಶ ಪಡೆದಿದ್ದಾರೆ. ಆ ಅಭ್ಯರ್ಥಿ ಗೆದ್ದ ಕೂಡಲೇ ಈ ಹಿಂದೆ ಸಂದರ್ಶನವೊಂದರಲ್ಲಿ ನಾಥೂರಾಂ ಗೋಡ್ಸೆ ಪರವಾಗಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ.

ತಮಿಳುನಾಡಿನ ಚಿದಂಬರಂ ದೇವಾಲಯದ 20 ಅರ್ಚಕರ ವಿರುದ್ದ ಪ್ರಕರಣ ದಾಖಲುತಮಿಳುನಾಡಿನ ಚಿದಂಬರಂ ದೇವಾಲಯದ 20 ಅರ್ಚಕರ ವಿರುದ್ದ ಪ್ರಕರಣ ದಾಖಲು

 ಡಿಎಂಕೆಯ ರಾಜ್ಯಭಾರ ಚೆನ್ನೈ ಕಾರ್ಪೋರೇಶನ್ ನಲ್ಲಿ ಆರಂಭ

ಡಿಎಂಕೆಯ ರಾಜ್ಯಭಾರ ಚೆನ್ನೈ ಕಾರ್ಪೋರೇಶನ್ ನಲ್ಲಿ ಆರಂಭ

ಇನ್ನೂರು ಸದಸ್ಯ ಬಲದ ಚೆನ್ನೈ ಕಾರ್ಪೋರೇಶನ್ ನಲ್ಲಿ ಡಿಎಂಕೆ 153, ಎಐಎಡಿಎಂಕೆ 15, ಕಾಂಗ್ರೆಸ್ 13 ವಾರ್ಡುಗಳಲ್ಲಿ ಜಯ ಸಾಧಿಸಿದೆ. ಇನ್ನು, ಸಿಪಿಐ(ಎಂ) ನಾಲ್ಕು, ಪಕ್ಷೇತರರು ಐದು, ವಿಸಿಕೆ ನಾಲ್ಕು, ಎಂಡಿಎಂಕೆ ಎರಡು, ಬಿಜೆಪಿ, ಸಿಪಿಐ, ಐಯುಎಂಎಲ್ ಮತ್ತು ಎಎಂಎಂಕೆ ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ, ಮೂರನೇ ಎರಡು ಬಹುಮತದೊಂದಿಗೆ ಡಿಎಂಕೆಯ ರಾಜ್ಯಭಾರ ಚೆನ್ನೈ ಕಾರ್ಪೋರೇಶನ್ ನಲ್ಲಿ ಆರಂಭವಾಗಲಿದೆ.

 ವರ್ಷಧಾರೆಗೆ ಈ ವಾರ್ಡಿನ ಭಾಗಗಳಲ್ಲಿ ಹೆಚ್ಚಿನ ಹಾನಿ

ವರ್ಷಧಾರೆಗೆ ಈ ವಾರ್ಡಿನ ಭಾಗಗಳಲ್ಲಿ ಹೆಚ್ಚಿನ ಹಾನಿ

ವಾರ್ಡ್ ನಂಬರ್ 134, ಪಶ್ಚಿಮ ಮಾಂಬಲಂ ಕ್ಷೇತ್ರದಲ್ಲಿ ಬಿಜೆಪಿಯ ಉಮಾ ಆನಂದನ್ ಜಯಶೀಲರಾಗಿದ್ದಾರೆ. ಚೆನ್ನೈ ಕಾರ್ಪೋರೇಶನ್‌ನಲ್ಲಿ ಬಿಜೆಪಿಯ ಏಕಮೇವ ಕೌನ್ಸಿಲರ್ ಇವರಾಗಿದ್ದಾರೆ. ಈಕೆಯ ಗೆಲುವಿಗೆ ಆಡಳಿತ ವಿರೋಧಿ ಅಲೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹೋದ ವರ್ಷದ ಭಾರೀ ವರ್ಷಧಾರೆಗೆ ಈ ವಾರ್ಡಿನ ಭಾಗಗಳಲ್ಲಿ ಹೆಚ್ಚಿನ ಹಾನಿಗಳಾಗಿದ್ದವು. ಸರಕಾರ ಇಲ್ಲಿನ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ಇದ್ದಿದ್ದೇ ಉಮಾ ಆನಂದನ್ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

 ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆ

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆ

ಚುನಾವಣಾ ಪ್ರಚಾರದ ವೇಳೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು ಉಮಾ ಆನಂದನ್ ಹೊಗಳಿದ್ದರು. ಇದರ ಜೊತೆಗೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ವಿರುದ್ದವೂ ಮಾತನಾಡಿದ್ದರು. ಗನ್ ಮತ್ತು ಕತ್ತಿ ಹಿಡಿಯುವ ಹೆಚ್ಚಿನವರು ಅಲ್ಪಸಂಖ್ಯಾತ ಸಮುದಾಯದವರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉಮಾ ಹೌದು ಎಂದು ಉತ್ತರಿಸಿದ್ದರು. ಉಮಾ ಅವರ ಸಂದರ್ಶನದ ವಿಡಿಯೋ ಅವರ ಗೆಲುವಿನ ನಂತರ ವೈರಲ್ ಆಗಿದೆ.

 ಉಮಾ ಆನಂದನ್ ಚೆನ್ನೈ ಕಾರ್ಪೋರೇಶನ್ ನಲ್ಲಿ ಬಿಜೆಪಿಯ ಏಕಮೇವ ಕೌನ್ಸಿಲರ್

ಉಮಾ ಆನಂದನ್ ಚೆನ್ನೈ ಕಾರ್ಪೋರೇಶನ್ ನಲ್ಲಿ ಬಿಜೆಪಿಯ ಏಕಮೇವ ಕೌನ್ಸಿಲರ್

ಮಹಾತ್ಮ ಗಾಂಧಿಯವರನ್ನು ಗೋಡ್ಸೆ ಕೊಂದಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ ಉಮಾ ಆನಂದನ್, "ಗೋಡ್ಸೆ ಯಾತಕ್ಕಾಗಿ ಗಾಂಧಿಯವರನ್ನು ಕೊಂದ ಎನ್ನುವುದಿಲ್ಲಿ ಪ್ರಶ್ನೆ. ಆತ ಹಿಂದೂ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಗಾಂಧಿಯವರನ್ನು ಕೊಲ್ಲಲು ಅವನಿಗೆ ಅವನದ್ದೇ ಆದ ಕಾರಣವಿದ್ದಿರಬಹುದು. ಈ ವಿಚಾರದಲ್ಲಿ ನನಗೆ ಯಾವುದೇ ರೀತಿಯ ವಿಷಾದವಿಲ್ಲ. ನಾನು ನಾಥೂರಾಂ ಗೋಡ್ಸೆಯ ಬೆಂಬಲಿಗ"ಎಂದು ಉಮಾ ಸಂದರ್ಶನದಲ್ಲಿ ಹೇಳಿದ್ದರು.

English summary
BJP’s sole winner in Greater Chennai Corporation Election is a Nathuram Godse supporter. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X