ಪೇಪರ್ ಓದುವಾಗ ಹೃದಯಾಘಾತವಾಗಿ ಶಾಸಕ ಆರ್. ಕನಕರಾಜ್ ನಿಧನ
ತಮಿಳುನಾಡಿನ ಎಐಎಡಿಎಂಕೆ ಶಾಸಕ ಆರ್ ಕನಕರಾಜ್ ಅವರು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ಅಕಾಲಿಕ ಮರಣವನ್ನಪ್ಪಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ತಮಿಳುನಾಡಿನ ಸುಳೂರ್ ಕ್ಷೇತ್ರದ ಎಐಎಡಿಎಂಕೆ ಶಾಸಕರಾಗಿದ್ದ ಅವರು ಬೆಳಿಗ್ಗೆ ವೃತ್ತಪತ್ರಿಕೆ ಓದುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಕನಕರಾಜ್ ಅವರ ನಿಧನಕ್ಕೆ ಮುಖ್ಯಮಂತ್ರಿ ಇ ಪಳನೀಸ್ವಾಮಿ ಸೇರಿದಂತೆ ಸರ್ಕಾರದ ಎಲ್ಲ ಸಚಿವರು, ಶಾಸಕರು ಕಂಬನಿ ಮಿಡಿದಿದ್ದಾರೆ. ಪ್ರತಿಪಕ್ಷ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಸಹ ತಮ್ಮ ಸಂತಾಪ ಸೂಚಿಸಿದ್ದಾರೆ.
ಕನಕರಾಜ್ ಅವರು ಪತ್ನಿ, ಓರ್ವ ಮಗ ಮತ್ತು ಮಗಳನ್ನು ಅಗಲಿದ್ದಾರೆ.












Click it and Unblock the Notifications