ತಮಿಳುನಾಡಲ್ಲಿ 40 ಸಾವಿರ ಕೇಸ್, ಶಾಸಕನಿಗೆ ಕೊವಿಡ್ 19

ಚೆನೈ, ಜೂನ್ 14: ತಮಿಳುನಾಡಿನ ವಿಪಕ್ಷ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ನ ಹಿರಿಯ ಶಾಸಕ ಜೆ ಅನ್ಬಳಗನ್ ಅವರು ಕೊರೋನಾ ಸೋಂಕಿನಿಂದ ಮೃತಪಟ್ಟ ಘಟನೆ ಬೆನ್ನಲ್ಲೇ ಆಡಳಿತರೂಢ ಎಐಎಡಿಎಂಕೆ ಶಾಸಕರೊಬ್ಬರಿಗೆ ಕೊವಿಡ್ 19 ಸೋಂಕು ಪಾಸಿಟಿವ್ ಎಂದು ಬಂದಿದೆ. ಶಾಸಕ ಕೆ ಪಳನಿ ಅವರನ್ನು ಎಂಐಒಟಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

Recommended Video

      Pakistan cricketer Shahid Afridi tests positive for COVID19 | Shahid Afridi | Oneindia Kannada

      57 ವರ್ಷ ವಯಸ್ಸಿನ ಪಳನಿ ಅವರಿಗೆ ರೋಗ ಲಕ್ಷಣ ಕಾಣಿಸಿಕೊಂಡಿದ್ದರಿಂದ ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಶಾಸಕರು ಸ್ಪಂದಿಸುತ್ತಿದ್ದು, ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ.

      ಡಿಎಂಕೆ ಶಾಸಕ ಜೆ ಅನ್ಬಳಗನ್ ಅವರು ಕೋವಿಡ್ 19 ಹಾಗೂ ಕಿಡ್ನಿ ವೈಫಲ್ಯದಿಂದ ಇತ್ತೀಚೆಗೆ ಮೃತಪಟ್ಟ ಬಳಿಕ ಪಳನಿ ಅವರು ಸೋಂಕು ತಗುಲಿಸಿಕೊಂಡಿರುವ ಎರಡನೇ ಶಾಸಕರೆನಿಸಿದ್ದಾರೆ.

      AIADMK party MLA K Palani Tests Positive For CoronaVirus

      ಈ ನಡುವೆ ತಮಿಳುನಾಡಿನಲ್ಲಿ ಕೊವಿಡ್ 19 ಪಾಸಿಟಿವ್ ಪ್ರಕರಣಗಳು ಜೂನ್ 14ರ ಬೆಳಗ್ಗೆ ವೇಳೆಗೆ 42,687ಕ್ಕೇರಿದೆ. 18, 878 ಮಂದಿ ಗುಣಮುಖರಾಗಿದ್ದಾರೆ. 397 ಮಂದಿ ಮೃತರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+