ಮುದ್ದೇನಹಳ್ಳಿ ಉಚಿತ ವೈದ್ಯಕೀಯ ಕಾಲೇಜಿಗೆ NABH ಮಾನ್ಯತೆ: ದೇಶದ ಗಮನ ಸೆಳೆದ ಸಾಧನೆ

ಮುದ್ದೇನಹಳ್ಳಿ: ಇಲ್ಲಿನ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (SMSIMSR)ಗೆ ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಮಾನ್ಯತಾ ಮಂಡಳಿ (NABH) ಆರಂಭಿಕ ಹಂತದ ಮಾನ್ಯತೆಯನ್ನು ನೀಡಿದೆ. ಇದರೊಂದಿಗೆ ಗ್ರಾಮೀಣ ಆರೋಗ್ಯ ಸೇವೆಗೆ ಹೊಸ ಬಲ ಸಿಕ್ಕಿದೆ.

ಈ ಪ್ರತಿಷ್ಠಿತ ಮಾನ್ಯತೆಯಿಂದಾಗಿ ಸಂಸ್ಥೆಯು ರೋಗಿಯ ಸುರಕ್ಷತೆ, ಗುಣಮಟ್ಟದ ಚಿಕಿತ್ಸೆ ಹಾಗೂ ಆಸ್ಪತ್ರೆ ನಿರ್ವಹಣೆಯ ರಾಷ್ಟ್ರೀಯ ಮಾನದಂಡಗಳನ್ನು ಸಮರ್ಥವಾಗಿ ಪಾಲಿಸುತ್ತಿದೆ ಎಂಬುದು ದೃಢಪಟ್ಟಿದೆ. ಸಂಪೂರ್ಣ ಉಚಿತ ಸೇವೆಗಳನ್ನು ನೀಡುವ ದೇಶದ ವಿರಳ ಗ್ರಾಮೀಣ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾದ ಈ ಸಂಸ್ಥೆಗೆ ಹೊಸ ಗರಿಮೆ ಸಿಕ್ಕಿದಂತಾಗಿದೆ.

SMSIMSR Achieves National Quality

(ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ)

ಒಂದು ವರ್ಷದ ನಿರಂತರ ಪರಿಶ್ರಮ

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನದಲ್ಲಿ 2025ರ ಜನವರಿಯಲ್ಲಿ ಆರಂಭವಾದ ಗುಣಮಟ್ಟ ಸುಧಾರಣಾ ಪ್ರಕ್ರಿಯೆ, ಒಂದು ವರ್ಷದ ನಿರಂತರ ಪರಿಶ್ರಮ, ಶಿಸ್ತು ಮತ್ತು ತಂಡದ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ. ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ವರ್ಗದವರೆಲ್ಲ ಪ್ರಯತ್ನಗಳಿಂದ ಕ್ಲಿನಿಕಲ್ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳು ರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಂಡು ಜಾರಿಗೊಂಡಿವೆ.

ಚಿಕ್ಕಬಳ್ಳಾಪುರ 'ಸ್ಕೋರ್-2026': ಕಾರ್ಡಿಯೊಥೊರಾಸಿಕ್ ಯುವ ಶಸ್ತ್ರವೈದ್ಯರಿಗೆ ಜಾಗತಿಕ ತಜ್ಞರ ಮಾರ್ಗದರ್ಶನ
ಚಿಕ್ಕಬಳ್ಳಾಪುರ 'ಸ್ಕೋರ್-2026': ಕಾರ್ಡಿಯೊಥೊರಾಸಿಕ್ ಯುವ ಶಸ್ತ್ರವೈದ್ಯರಿಗೆ ಜಾಗತಿಕ ತಜ್ಞರ ಮಾರ್ಗದರ್ಶನ

ಆರಂಭಿಕ ಹಂತದ ಮಾನ್ಯತೆ

ಈ ಅವಧಿಯಲ್ಲಿ ಆಂತರಿಕ ಹಾಗೂ ಬಾಹ್ಯ ಲೆಕ್ಕಪರಿಶೋಧನೆಗಳನ್ನು ಹಲವು ಹಂತಗಳಲ್ಲಿ ನಡೆಸಿ, ಕಾರ್ಯವಿಧಾನಗಳನ್ನು ಪರಿಶೀಲಿಸಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. 2026ರ ಜನವರಿ 12ರಂದು ನಡೆದ NABH ಪರಿಶೀಲನೆಯಲ್ಲಿ ಸಂಸ್ಥೆ ಯಶಸ್ವಿಯಾಗಿ ಉತ್ತೀರ್ಣವಾಗಿದೆ.

"ದೇಶದಲ್ಲಿರುವ ಸುಮಾರು 80,000 ರಿಂದ 90,000 ಆಸ್ಪತ್ರೆಗಳ ಪೈಕಿ ಕೇವಲ 1.4 ಶೇಕಡಾ ಆಸ್ಪತ್ರೆಗಳು ಮಾತ್ರ ಸಂಪೂರ್ಣ ಮಾನ್ಯತೆ (Full Accreditation) ಪಡೆದಿವೆ. ಸುಮಾರು 3 ಶೇಕಡಾ ಆಸ್ಪತ್ರೆಗಳು ಮಾತ್ರ ಆರಂಭಿಕ ಹಂತದ (Entry-Level) ಮಾನ್ಯತೆ ಹೊಂದಿವೆ. ಸಂಪೂರ್ಣ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುವ ಆಸ್ಪತ್ರೆಗಳ ಸಂಖ್ಯೆ ತೀರಾ ಕಡಿಮೆ. ನಮ್ಮ ಸಂಸ್ಥೆಗೆ ಮಾನ್ಯತೆ ದೊರಕಿರುವುದು ಮೊದಲ ಹೆಜ್ಜೆಯಾಗಿದೆ. ಶೀಘ್ರದಲ್ಲೇ ಸಂಪೂರ್ಣ NABH ಮಾನ್ಯತೆ ಪಡೆಯುವ ವಿಶ್ವಾಸವೂ ನಮಗಿದೆ," ಎಂದು ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ. ಪದ್ಮಶ್ರೀ ಹೇಳಿದರು.

ಈ ಸಾಧನೆಯೊಂದಿಗೆ SMSIMSR ಸಂಪೂರ್ಣ ಉಚಿತ ಸೇವೆಗಳನ್ನು ನೀಡುವ ಖಾಸಗಿ ಗ್ರಾಮೀಣ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿಯೇ ಉಚಿತ ಸೇವೆಗಳೊಂದಿಗೆ ಗುಣಮಟ್ಟದ ಚಿಕಿತ್ಸೆ ನೀಡಬಹುದು ಎಂಬುದನ್ನು ಈ ಸಂಸ್ಥೆ ಸಾಬೀತುಪಡಿಸಿದೆ.

ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ

ಉಚಿತ ಗ್ರಾಮೀಣ ಆರೋಗ್ಯ ಸೇವೆಗೆ ಹೊಸ ದಿಕ್ಕು

ಆರೋಗ್ಯ ಸೇವೆ ತಲುಪದ ಜನರಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ಮೂಲಕ ಸಂಸ್ಥೆ ಆರೋಗ್ಯ ಕ್ಷೇತ್ರದಲ್ಲಿ ಮಾದರಿಯಾಗಿದೆ. NABH ಮಾನ್ಯತೆಯೊಂದಿಗೆ ಸುರಕ್ಷಿತ, ಕ್ರಮಬದ್ಧ ಹಾಗೂ ಪಾರದರ್ಶಕ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಪಟ್ಟಿಯಲ್ಲಿ ಇದು ಸ್ಥಾನ ಪಡೆದಿದೆ.

ಸಾಮಾನ್ಯವಾಗಿ ಗ್ರಾಮೀಣ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಕನಸಿನ ಮಾತು. ಆದರೆ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆ ಇದಕ್ಕೆ ಅಪವಾದ ವಾಗಿದ್ದು, ಉಚಿತ ಚಿಕಿತ್ಸೆ, ಉತ್ತಮ ಆರೈಕೆ ಹಾಗೂ ಗುಣಮಟ್ಟದ ಚಿಕಿತ್ಸೆ ಗಳನ್ನು ಏಕಕಾಲಕ್ಕೆ ನೀಡಬಹುದು ಎಂಬುದನ್ನು ಸಾಬೀತುಪಡಿಸಿದೆ.

ಮಾನ್ಯತೆ ಪಡೆಯಲು ಕಾರಣವಾದ ಅಂಶಗಳು

ರೋಗಿಯ ಸುರಕ್ಷತೆಗೆ ಆದ್ಯತೆ, ಪರಿಣಾಮಕಾರಿ ಸೋಂಕು ನಿಯಂತ್ರಣ, ಪ್ರಮಾಣಿತ ವೈದ್ಯಕೀಯ ಹಾಗೂ ಆಡಳಿತಾತ್ಮಕ ಕ್ರಮಗಳು, ನೈತಿಕ ಮತ್ತು ಪಾರದರ್ಶಕ ಚಿಕಿತ್ಸಾ ವಿಧಾನಗಳು ಹಾಗೂ ಸಮಗ್ರ ದಾಖಲೆ ನಿರ್ವಹಣೆ ಇವುಗಳ ಸಮರ್ಪಕ ಅನುಷ್ಠಾನದಿಂದ ಈ ಮಾನ್ಯತೆ ಲಭಿಸಿದೆ. ಈ ವ್ಯವಸ್ಥೆಗಳು ಪ್ರತಿಯೊಬ್ಬ ರೋಗಿಗೂ ಸುರಕ್ಷಿತ ಹಾಗೂ ಜವಾಬ್ದಾರಿಯುತ ಚಿಕಿತ್ಸೆ ದೊರಕುವುದನ್ನು ಖಚಿತಪಡಿಸುತ್ತವೆ. ಈ ಮಾನ್ಯತೆಯಿಂದ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ವಿಶ್ವಾಸಾರ್ಹ ಆರೋಗ್ಯ ಸೇವೆ ಲಭ್ಯವಾಗಲಿದೆ.

'ಒನ್ ವರ್ಲ್ಡ್, ಒನ್ ಫ್ಯಾಮಿಲಿ' ಧ್ಯೇಯೋದ್ದೇಶಕ್ಕೆ ಬಲ

ಆರ್ಥಿಕ ಸ್ಥಿತಿ ಯಾವುದಾದರೂ ಇರಲಿ, ಎಲ್ಲರಿಗೂ ಸಮಾನ ಆರೋಗ್ಯ ಸೇವೆ ನೀಡಬೇಕು ಎಂಬ ಮಾನವೀಯ ಮೌಲ್ಯವನ್ನು ಈ ಸಾಧನೆ ಪ್ರತಿಬಿಂಬಿಸುತ್ತದೆ. ಉಚಿತ ಸೇವೆಗಳೊಂದಿಗೆ ರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ ಈ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ಮಾದರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+