Bengaluru Rain: ದುರಂತ ಬಳಿಕ ಬೌರಿಂಗ್ ಆಸ್ಪತ್ರೆಗೆ ಸಿದ್ದರಾಮಯ್ಯ ಭೇಟಿ: ಮೃತರಿಗೆ 5 ಲಕ್ಷ ರೂ ಪರಿಹಾರ ಘೋಷಣೆ

ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಬೌರಿಂಗ್ ಆಸ್ಪತ್ರೆಯ ತುರ್ತು ವಿಭಾಗದ ಬಳಿ ಕಾಂಪೌಂಡ್ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟಿವರಿಗೆ 05 ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೆರವು ನೀಡುವುದಾಗಿ ಭರವಸೆ ನೀಡಿದರು.

ಗಾಯಾಳುಗಳನ್ನು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದಾರೆ.

Bengaluru Rain

ಮುಖ್ಯಮಂತ್ರಿಗಳು ಮಳೆಗೆ ಕುಸಿದು ಬಿದ್ದ ಗೋಡೆ ಸ್ಥಳಕ್ಕೆ ಮೊದಲು ತೆರಳಿ ಘಟನೆ ಸಂಭವಿಸಿದ್ದರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಪರಿಹಾರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಂತರ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಗಾಯಾಳುಗಳಿಗೆ ಎಲ್ಲ ರೀತಿಯ ಸಹಾಯವನ್ನು ನೀಡಲಾಗುವುದು. ಸರ್ಕಾರದಿಂದ ಗಾಯಾಳುಗಳಿಗೆ ಅಗತ್ಯ ಎಲ್ಲ ನೆರವು ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಇದೇ ವೇಳೇ ಅವರು ಮೃತರಿಗೆ ಆರ್ಥಿಕ ನೆರವು ಸಹ ನೀಡುವುದಾಗಿ ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು 07 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಒಟ್ಟು ಸುಮಾರು ಏಳು ಮಂದಿ ಗಾಯಗೊಂಡಿದ್ದಾರೆಂದು ಎಂದು ಮಾಹಿತಿ ನೀಡಿದರು.

ಪ್ರಕರಣ ತನಿಖೆ: ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಭರವಸೆ

ಬೆಂಗಳೂರಿನಲ್ಲಿ ಇಂತಹ ಜೋರು ಮಳೆ ಬರುತ್ತದೆ ಎಂದುಕೊಂಡಿರಲಿಲ್ಲ. ಇದೀಗ ಇಂಥಹ ಘಟನೆ ನಡೆದಿದೆ. ಇದು ಹೇಗಾಯಿತು ಎಂದೆಲ್ಲ ತನಿಖೆ ನಡೆಸಲಾಗುವುದು. ಯಾರದ್ದೇ ತಪ್ಪಿದ್ದರು ಅವರ ಮೇಲೆ ಕ್ರಮ ಕೈಗೊಳ್ಳಲ್ಲಾಗುತ್ತದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಇದು ಗಟ್ಟಿಯಾಗಿದ್ದ ಗೋಡೆ. ಆದರೆ ಮಳೆ ಬರುತ್ತಿದ್ದಂತೆ ದಿಢೀರನೇ ಕುಸಿತು ಬಿದ್ದ ಪರಿಣಾಮ ಇಂತಹ ಘಟನೆ ನಡೆದಿದೆ. ಗೋಡೆ ಪಕ್ಕ ಜನರು ಇದ್ದರು. ಮಳೆ ಬರುವ ಹೊತ್ತಿನಲ್ಲಿ ಸುಮಾರು 30 ಜನ ಅದೇ ಸ್ಥಳದಲ್ಲಿದ್ದರು. ಏಳು ಮಂದಿ ಸಾವಾಗಿದೆ. ಅನೇಕ ಮಂದಿಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ಇಲ್ಲಿದ್ದವರು ಬಟ್ಟೆ, ಬ್ಯಾಗ್ ಇನ್ನಿತರ ವ್ಯಾಪಾರ ಮಾಡಿಕೊಂಡಿದ್ದವರು. ಸುಮಾರು ಇಪ್ಪತ್ತು ವರ್ಷಗಳಿಂದ ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದರು. ಅವರೀಗ ತೊಂದರೆ ಅನುಭವಿಸುವಂತಾಗಿದೆ. ನನ್ನ ತಮ್ಮ ಸಹ ತುರ್ತು ಚಿಕಿತ್ಸಾ ವಾರ್ಡಿನಲ್ಲಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಸುದ್ದಿವಾಹಿನಿಗೆ ಪ್ರತ್ಯಕ್ಸದರ್ಶಿ ಮತ್ತು ಗಾಯಾಳು ಸಹೋದರ ತಿಳಿಸಿದರು.

ಏಳು ಮಂದಿ ಮೃತರ ಗುರುತು ಪತ್ತೆ

ಮಾಯಾ (51 ವರ್ಷ)

ಸಾಜಿದ್ (20 ವರ್ಷ)

ಅಜಗರ್ (35 ವರ್ಷ)

ತಬೀನ್ ತಾಜ್ (4 ವರ್ಷ)

ಮುಬೀನ್ ತಾಜ್ (4 ವರ್ಷ)

ಪ್ರೀತಿ (51 ವರ್ಷ)

ಸಿಜಿ (47 ವರ್ಷ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+