ಬೇಸಿಗೆಯಲ್ಲಿ ಶರೀರಕ್ಕೆ ತಂಪು ಕೊಡುವ ಗಸಗಸೆ ಪಾಯಸದ ರೆಸಿಪಿ ಇಲ್ಲಿದೆ

ಗಸಗಸೆ ಬೀಜಗಳನ್ನು ಗಸಗಸೆ ಸಸ್ಯದಿಂದ ಪಡೆಯಲಾಗುತ್ತದೆ. ಇದು ಸಣ್ಣ ಸಣ್ಣಗಾತ್ರದ ಎಣ್ಣೆಕಾಳುಗಳಾಗಿವೆ. ಈ ಬೀಜಗಳನ್ನು ವಿವಿಧ ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಬೀಜಗಳು ವಿಶಿಷ್ಟ ರೀತಿಯ ಸುವಾಸನೆ ಮತ್ತು ಪೌಷ್ಟಿಕಾಂಶಕ್ಕೆ ಹೆಸರುವಾಸಿಯಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ, ಗಸಗಸೆ ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಗಸಗಸೆ ಬೀಜದ ಪ್ರಯೋಜನಗಳು:

ಗಸಗಸೆ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಗುಣವನ್ನು ಹೊಂದಿದೆ. ಇದು ದೇಹವನ್ನು ನೈಸರ್ಗಿಕವಾಗಿ ತಂಪಾಗಿಸುತ್ತದೆ. ದೇಹವನ್ನು ತಂಪಾಗಿಸುವ ಪರಿಣಾಮಗಳನ್ನು ಹೊಂದಿರುವ ಗಸಗಸೆಯನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ಶಾಖದಿಂದ ಪರಿಹಾರವನ್ನು ಪಡೆಯಬಹುದು. ಶಾಖ-ಸಂಬಂಧಿತ ಕಾಯಿಲೆಗಳು ದೇಹನ್ನು ಬಾಧಿಸದಂತೆ ತಡೆಯಬಹುದು.

Gasagase Payasa Recipe

ಗಸಗಸೆ ಬೀಜದ ಆರೋಗ್ಯ ಲಾಭ:

ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಗಸಗಸೆ ಬೀಜಗಳು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫೈಬರ್‌ನಂಥಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಪೋಷಕಾಂಶಗಳು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ವಿಶೇಷವಾಗಿ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಈ ಪುಟ್ಟ ಬೀಜಗಳು ಕೆಲಸ ಮಾಡುತ್ತವೆ.

ಕಲ್ಲಂಗಡಿ ಸಿಪ್ಪೆ ವ್ಯರ್ಥವಲ್ಲ: ಇದನ್ನು ಈ ರೀತಿಯಲ್ಲಿ ಉಪಯೋಗಿಸಿ
ಕಲ್ಲಂಗಡಿ ಸಿಪ್ಪೆ ವ್ಯರ್ಥವಲ್ಲ: ಇದನ್ನು ಈ ರೀತಿಯಲ್ಲಿ ಉಪಯೋಗಿಸಿ

ಗಸಗಸೆ ಪಾಯಸ:

ಗಸಗಸೆ ಎಂದಾಕ್ಷಣ ನೆನಪಿಗೆ ಬರುವುದು ರುಚಿರುಚಿಯಾದ ಪಾಯಸ. ಗಸಗಸೆ ಪಾಯಸ ಇಷ್ಟಪಡದವರು ಸಾಮಾನ್ಯವಾಗಿ ಯಾರೂ ಇರಲಿಕ್ಕಿಲ್ಲ. ಬೇಸಿಗೆಯ ಬಿಸಿಯಿಂದ ದೇಹವನ್ನು ಕಾಪಾಡಬೇಕಾದರೆ ಗಸಗಸೆ ಪಾಯಸ ಮಾಡಿ ಕುಡಿಯುವುದು ಒಳ್ಳೆಯ ಉಪಾಯ. ಇದು ಬಾಯಿ ರುಚಿಯನ್ನು ನೀಡುವುದರೊಂದಿಗೆ ದೇಹವನ್ನು ತಂಪಾಗಿಸುವುದು.

ಗಸಗಸೆ ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು:

150 ಗ್ರಾಂ ಗಸಗಸೆ ಬೀಜಗಳು
200 ಗ್ರಾಂ ಅಕ್ಕಿ
30 ಗ್ರಾಂ ತಾಜಾ ತೆಂಗಿನಕಾಯಿ
¾ ಕಪ್ ಬೆಲ್ಲ
ಅರ್ಧ ಲೀ. ಹಾಲು
5 ಗ್ರಾಂ ಏಲಕ್ಕಿ
20 ಮಿ.ಲೀ. ತುಪ್ಪ
5 ಗ್ರಾಂ ಹುರಿದ ಗೋಡಂಬಿ,
10 ಗ್ರಾಂ ಒಣದ್ರಾಕ್ಷಿ,
5 ಗ್ರಾಂ ಹುರಿದ ಮಿಶ್ರ ಒಣ ಬೀಜಗಳು

ಮರೆತು ಹೋಗಿರುವ 7 ಭಾರತೀಯ ಬೇಸಿಗೆ ಹಣ್ಣುಗಳು: ಆರೋಗ್ಯ ಲಾಭಗಳು ಮತ್ತು ಸಂಪೂರ್ಣ ಮಾಹಿತಿ
ಮರೆತು ಹೋಗಿರುವ 7 ಭಾರತೀಯ ಬೇಸಿಗೆ ಹಣ್ಣುಗಳು: ಆರೋಗ್ಯ ಲಾಭಗಳು ಮತ್ತು ಸಂಪೂರ್ಣ ಮಾಹಿತಿ

ಗಸಗಸೆ ಪಾಯಸ ಮಾಡುವ ವಿಧಾನ:

* ಮೊದಲಿಗೆ ಅಕ್ಕಿ ಮತ್ತು ಗಸಗೆಯನ್ನು ಚಿನ್ನದ ಕಂದು ಬಣ್ಣಕ್ಕೆ ಬರುವವರಗೆ ಚೆನ್ನಾಗಿ ಹುರಿಯಿರಿ.

* ಈಗ ಈ ಮಿಶ್ರಣವನ್ನು ತರಿತರಿಯಾಗಿ ಪುಡಿಮಾಡಿ.

* ಇದೇ ಮಿಶ್ರಣಕ್ಕೆ ತೆಂಗಿನಕಾಯಿ ತುರಿ ಮತ್ತು ನೀರನ್ನು ಸೇರಿಸಿ ಮತ್ತೆ ನಯವಾಗಿ ರುಬ್ಬಿಕೊಳ್ಳಿ.

* ಇಷ್ಟಾದ ಮೇಲೆ ಒಂದು ಸಾಸ್ ಪ್ಯಾನ್‌ ತೆಗೆದುಕೊಂಡು ಹಾಲು ಬಿಸಿ ಮಾಡಿ.

* ಹಾಲು ಬಿಸಿಯಾದ ಮೇಲೆ ಅದಕ್ಕೆ ರುಬ್ಬಿದ ಅಕ್ಕಿ, ಗಸಗಸೆ ಮತ್ತು ತೆಂಗಿನಕಾಯಿ ಮಿಶ್ರಣ, ಏಲಕ್ಕಿ ಬೀಜಗಳು, ಬೆಲ್ಲ ಸೇರಿಸಿ ಕುದಿಸಿ.

* ನಂತರ ತುಪ್ಪ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಮಿಶ್ರಣವನ್ನು ದಪ್ಪ ಸ್ಥಿರತೆಗೆ ತನ್ನಿ.

* ಈಗ ಉಳಿದಿರುವ ಮಿಶ್ರ ಒಣಹಣ್ಣುಗಳನ್ನು ಹಾಕಿ ಅಲಂಕರಿಸಿ.

* ಬಿಸಿ ಇರುವಾಗಲೇ ಸವಿದರೆ ರುಚಿಯಾಗಿರುತ್ತದೆ. ಬಿಸಿ ತಿನ್ನಲು ಇಷ್ಟವಿಲ್ಲ ಎನ್ನುವವರು ತಣ್ಣಗಾದ ಮೇಲೆ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಟ್ಟು ಸೇವಿಸಿದರೆ ಬೇಸಿಗೆ ಕಾಲದಲ್ಲಿ ಮತ್ತಷ್ಟು ಮಜಾ ಕೊಡುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+