Tamilnadu Election Exit Polls: ತಮಿಳುನಾಡು ಅಖಾಡ: ಸ್ಟಾಲಿನ್ vs ಪಳನಿಸ್ವಾಮಿ vs ವಿಜಯ್ ಜಿದ್ದಾಜಿದ್ದಿ - ಗೆಲುವು ಯಾರಿಗೆ
Tamilnadu Election Exit Polls Result: ತಮಿಳುನಾಡಿನಲ್ಲಿ 2026ನೇ ಸಾಲಿನಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎನ್ನುವ ಬಗ್ಗೆ ಎಕ್ಸಿಟ್ ಪೋಲ್ ಫಲಿತಾಂಶ ಬಿಡುಗಡೆಯಾಗಿದೆ. ತಮಿಳುನಾಡಿನ ವಿಧಾನಸಭೆ ಚುನಾವಣೆಯು ಈ ಬಾರಿ ಹಲವು ಕಾರಣಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿತ್ತು. ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ನಟ ವಿಜಯ್ ಅವರ ಎಂಟ್ರಿಯು ಹೊಸ ಜೋಶ್ ತಂದುಕೊಟ್ಟಿತ್ತು. ತಮಿಳುನಾಡಿನ ವಿಧಾನಸಭೆಯಲ್ಲಿ ಒಟ್ಟು 234 ವಿಧಾನಸಭಾ ಕ್ಷೇತ್ರಗಳಿದ್ದು, ಮ್ಯಾಜಿಕ್ ನಂಬರ್ 118 ಆಗಿದೆ.
ಈ ಬಾರಿ ಬಹುತೇಕ ತಮಿಳಗ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಗಳ ನಡುವೆ ನೇರ ಹಣಾಹಣೆ ಏರ್ಪಟ್ಟಿತ್ತು. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಡುಗಡೆಯಾಗಿದ್ದು, ಬಹುತೇಕ ಎಕ್ಸಿಟ್ ಪೋಲ್ ಸಮೀಕ್ಷೆಗಳು ಈ ಬಾರಿಯೂ ತಮಿಳುನಾಡಿನಲ್ಲಿ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ - ಡಿಎಂಕೆ ಪಕ್ಷವೇ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ. ಹಲವು ಪೈಪೋಟಿಗಳ ನಡುವೆಯೂ ಡಿಎಂಕೆ ಈ ಬಾರಿಯೂ ಮೈಲುಗೈ ಸಾಧಿಸಿದೆ.

ಡಿಎಂಕೆಗೆ ಬಹುಮತ ಎಂದ ಪೀಪಲ್ಸ್ ಪಲ್ಸ್
ತಮಿಳುನಾಡು ವಿಧಾನಸಭೆ ಚುನಾವಣೆ 2026 ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ ಪಕ್ಷವೇ ಅಧಿಕಾರಕ್ಕೇರಲಿವೆ ಎಂದು ಬಹುತೇಕ ಎಕ್ಸಿಟ್ ಪೋಲ್‌ಗಳು ಹೇಳಿವೆ. ಪೀಪಲ್ಸ್ ಪಲ್ಸ್ (Peoples Pulse) ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ, ಡಿಎಂಕೆ 125ರಿಂದ 145 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎಐಡಿಎಂಕೆಯು 65ರಿಂದ 80 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ವಿಜಯ್ ಅವರ ಟಿವಿಕೆ ಪಕ್ಷವು ಕೇವಲ 18ರಿಂದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನೂ ಪಕ್ಷೇತರರು 2ರಿಂದ 6 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದೆ.
ಪೀಪಲ್ಸ್ ಪಲ್ಸ್‌ನ ಪ್ರಕಾರ, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮತ ಹಂಚಿಕೆ ಪ್ರಮಾಣವು (Vote Sharing) ಡಿಎಂಕೆ ಮೈತ್ರಿಕೂಟಕ್ಕೆ 38.4% ಎಐಡಿಎಂಕೆ ಮೈತ್ರಿಕೂಟಕ್ಕೆ 31.5% ಹಾಗೂ ಟಿವಿಕೆಗೆ 23.6% ಇದೆ. ಇನ್ನು ಉಳಿದಂತೆ ಪಕ್ಷೇತರರಿಗೆ ಶೇ 6.5% ಮತ ಚಲಾವಣೆ ಆಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆ 2026 - ಎಕ್ಸಿಟ್ ಪೋಲ್ಸ್
ಒಟ್ಟು ಸ್ಥಾನಗಳು: 234 | ಬಹುಮತಕ್ಕೆ ಅಗತ್ಯ: 118
| ಸಮೀಕ್ಷೆ ನಡೆಸಿದ ಸಂಸ್ಥೆಗಳು | ಡಿಎಂಕೆ+ | ಎಐಎಡಿಎಂಕೆ+ | ಟಿವಿಕೆ | ಎನ್‌ಟಿಕೆ | ಇತರೆ |
|---|---|---|---|---|---|
| ಪೀಪಲ್ಸ್ ಪಲ್ಸ್ | 125-145 | 65-80 | 18-24 | 0 | 2-6 |
| ನ್ಯೂಸ್18 | 125-145 | 65-80 | 13-18 | 5-8 | 2-6 |
| ಟುಡೇಸ್ ಚಾಣಕ್ಯ | 145-160 | 50-65 | 13-18 | 5-8 | 0 |
| ಮ್ಯಾಟ್ರೈಸ್ | 122-132 | 87-100 | 12-16 | 1-6 | 0 |
| ಪಿ-ಮಾರ್ಕ್ | 125-145 | 65-85 | 16-26 | 1-6 | 0 |
| ಪೋಲ್ ಆಫ್ ಪೋಲ್ಸ್ | 135-149 | 66-79 | 12-17 | 3-7 | 2-6 |












Click it and Unblock the Notifications