ಅಸ್ಸಾಂ: ಹಿಮಂತ ಬಿಸ್ವಾ ಶರ್ಮಾ ಎದುರು ತೊಡೆತಟ್ಟಿದ ಗೊಗೊಯ್ ಕುಡಿ -ಯಾರಿಗೆ ಒಲಿಯಲಿದೆ ಈಶಾನ್ಯ ಭಾರತ

ಅಸ್ಸಾಂ ರಾಜ್ಯ ವಿಧಾನಸಭಾ ಚುನಾವಣೆ (2026) ಕಳೆದ ಏಪ್ರಿಲ್ 9 ನಡೆದಿದೆ. ಇಂದಿಗೆ (ಏ.29) ಪಂಚರಾಜ್ಯ ಚುನಾವಣೆಗಳ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆ ಅಸ್ಸಾಂ ಚುನಾವಣಾ ಮತಗಟ್ಟೆ ಸಮೀಕ್ಷೆ (Exit Poll 2026) ಪ್ರಕಟವಾಗಿದೆ. 'ಎಕ್ಸಿಸ್ ಮೈ ಇಂಡಿಯಾ' ನೀಡಿರುವ ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಗೆ ಮತ್ತೆ ಮುನ್ನಡೆ ಸಾಧಿಸಲಿದ್ದು, ಕಾಂಗ್ರೆಸ್‌ ವಿಪಕ್ಷ ಸ್ಥಾನದಲ್ಲಿ ಉಳಿಯುವ ಮುನ್ಸೂಚನೆ ನೀಡಿದೆ.

ಎಕ್ಸಿಸ್ ಮೈ ಇಂಡಿಯಾ (Axis My India) ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ, 126 ಕ್ಷೇತ್ರಗಳ ಪೈಕಿ ಮ್ಯಾಜಿಕ್ ನಂಬರ್ 64 ಸೀಟನ್ನು ಯಾವ ಪಕ್ಷವು ಸ್ವತಂತ್ರವಾಗಿ ಪಡೆಯುವುದಿಲ್ಲ ಎಂದಿದೆ. ಇಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ (ಎನ್‌ಡಿಎ) 47 ಸೀಟುಗಳು ಬರಲಿವೆ. ಕಾಂಗ್ರೆಸ್‌ 39 ಸ್ಥಾನಗಳಲ್ಲಿ ಗೆಲ್ಲಬಹುದೆಂದು ಹೇಳಲಾಗಿದೆ. ಇನ್ನುಳಿದಂತೆ ಇತರ ಪಕ್ಷಗಳು 14 ಕ್ಷೇತ್ರಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಿವೆ ಎಂದು ಮುನ್ಸೂಚನೆ ನೀಡಿದೆ.

Assam Exit Poll 2026

ಸದರಿ ಪಲಿತಾಂಶ ನೋಡಿದರೆ ಯಾವೊಂದು ಪಕ್ಷಗಳು ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿಯುವಲ್ಲಿ, ಜನಾಶೀರ್ವಾದ ಪಡೆಯುವಲ್ಲಿ ವಿಫಲವಾಗಿವೆ ಎನ್ನುವುದು ಅರ್ಥವಾಗುತ್ತದೆ. ಅಂತಿಮ ಫಲಿತಾಂಶ ಅತಂತ್ರವಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಇತರ ಸಣ್ಣ ಸಣ್ಣ ಪಕ್ಷಗಳು ನೀರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ. ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಮೈತ್ರಿ ಮೂಲಕ ಅಧಿಕಾರಿ ಹಿಡಿಯುವ ಲಕ್ಷಗಳು ದಟ್ಟವಾಗಿವೆ. ಹೀಗಾದರೆ ಮೂರನೇ ಬಾರಿಗೆ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯಲಿದೆ.

Exit Poll: ವಿಧಾನಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ 2026: ಕಳೆದ ಬಾರಿ 5 ರಾಜ್ಯಗಳಲ್ಲಿ ಮಿಶ್ರ ಫಲಿತಾಂಶ
Exit Poll: ವಿಧಾನಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ 2026: ಕಳೆದ ಬಾರಿ 5 ರಾಜ್ಯಗಳಲ್ಲಿ ಮಿಶ್ರ ಫಲಿತಾಂಶ

ರಾಜ್ಯದಲ್ಲಿ ಎರಡು ಭಾರಿ ಅಧಿಕಾರ ಗದ್ದುಗೆ ಹಿಡಿದ ಎನ್‌ಡಿಗೆ ಮತ್ತೆ ಅಧಿಕಾರಕ್ಕೆ ಮರಳುವ ತವಕದಲ್ಲಿದೆ. ಬಿಜೆಪಿಗೆ ಈ ಫಲಿತಾಂಶ ಪೂರಕವಾಗಿದೆ. ಬಿಜೆಪಿಗೆ ತೀವ್ರ ಪೈಪೋಟಿ ಒಡ್ಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯು ಸೋಲು ಲಕ್ಷಣಗಳಿವೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಮೇ 4 ರಂದು ಅಧಿಕೃತ ಚುನಾವಣಾ ಫಲಿತಾಂಶ

ಅಸ್ಸಾಂ ರಾಜ್ಯದ 35 ಜಿಲ್ಲೆಗಳ ವ್ಯಾಪ್ತಿಯಲ್ಲಿ 126 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಒಟ್ಟು 720ಕ್ಕೂ ಹೆಚ್ಚು ಮಂದಿ ಕಣದಲ್ಲಿದ್ದರು. ಸದ್ಯ ಪ್ರಕಟವಾಗಿದ್ದು, ಚುನಾವಣೋತ್ತರ ಫಲಿತಾಂಶವಾಗಿದ್ದು, ಅಂತಿಮ ಅಧಿಕೃತ ಚುನಾವಣೆ ಫಲಿತಾಂಶವನ್ನು ಕೇಂದ್ರ ಚುನಾವಣೆ ಆಯೋಗವು ಮೇ 4 ರಂದು ಬಿಡುಗಡೆ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+