ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿಗೂ ಮುನ್ನ ಅಮ್ಮನಿಗೆ ಸಂತಾಪ ಸೂಚಿಸಿದ ಎಐಎಡಿಎಂಕೆ!

ಜಯಲಲಿತಾ ನಿಧನರಾದರು ಎಂಬ ಗಾಳಿ ಸುದ್ದಿ ಹಬ್ಬುತ್ತಿದ್ದಂತೆ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಕಂಗಾಲಾಗಿ ಬಿಟ್ಟರು. ಸತ್ಯಾಸತ್ಯತೆ ಪರೀಕ್ಷಿಸದೆ ಪಕ್ಷದ ಕಚೇರಿಯಲ್ಲಿ ಚರಮಗೀತೆ ಹಾಡಿ, ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಂತಾಪ ಸೂಚಿಸಲಾಯಿತು.

By Mahesh
|
Google Oneindia Kannada News

ಚೆನ್ನೈ, ಡಿಸೆಂಬರ್ 05: ತಮಿಳುನಾಡಿನ ಮುಖ್ಯಮಂತ್ರಿ, ಪುರಚ್ಚಿ ತಲೈವಿ ಜೆ ಜಯಲಲಿತಾ ಅವರು ಸೋಮವಾರ ಸಂಜೆ ನಿಧನರಾದರು ಎಂಬ ಗಾಳಿ ಸುದ್ದಿ ಹಬ್ಬುತ್ತಿದ್ದಂತೆ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಕಂಗಾಲಾಗಿ ಬಿಟ್ಟರು. ಸತ್ಯಾಸತ್ಯತೆ ಪರೀಕ್ಷಿಸದೆ ಪಕ್ಷದ ಕಚೇರಿಯಲ್ಲಿ ಚರಮಗೀತೆ ಹಾಡಿ, ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಂತಾಪ ಸೂಚಿಸಲಾಯಿತು. ಅಪೋಲೋ ಆಸ್ಪತ್ರೆಯಿಂದ ಮತ್ತೊಮ್ಮೆ ಸ್ಪಷ್ಟನೆ ಸಿಗುವ ತನಕ ಗೊಂದಲ ಹೀಗೆ ಮುಂದುವರೆದಿತ್ತು.

ಜಯಾ ಅವರ ಪಕ್ಷದ ಅಧಿಕೃತ ವಾಹಿನಿ ಜಯಾ ಟಿವಿಯಲ್ಲೂ ಸಾವಿನ ಸುದ್ದಿ ಪ್ರಕಟಗೊಂಡಿದ್ದು, ಸಾವಿನ ಸುದ್ದಿಯ ಬಗ್ಗೆ ಆಸ್ಪತ್ರೆ ಮೂಲಗಳಿಂದಲೇ ಸುದ್ದಿ ಸೋರಿಕೆಯಾಗಿದ್ದು ಎಲ್ಲವೂ ಗೊಂದಲ ಮೂಡಿಸಿ ಕಾರ್ಯಕರ್ತರು ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಿತು.[ಜಯಲಲಿತಾ ಸಾವಿನ ಸುದ್ದಿ ಅಲ್ಲಗೆಳೆದ ಅಪೋಲೋ ಆಸ್ಪತ್ರೆ]

AIADMK lowers then raisas flag amidst Jaya death rumours

ಅಪೋಲೋ ಆಸ್ಪತ್ರೆ ಎದುರು ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ಕೂಡಾ ಉಂಟಾಗಿತ್ತು. ಆದರೆ, 5.49ರ ಸುಮಾರಿಗೆ ಅಪೋಲೋ ಆಸ್ಪತ್ರೆ ಸಿಇಒ ಸಂಗೀತಾ ರೆಡ್ಡಿ ಅವರು ಟ್ವೀಟ್, ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿ, ಜಯಲಲಿತಾ ಅವರ ಸಾವಿನ ಸುದ್ದಿಯನ್ನು ಅಲ್ಲಗೆಳೆದ ಮೇಲೆ ಕಾರ್ಯಕರ್ತರಿಗೆ ಸಮಾಧಾನವಾಯಿತು. ತಕ್ಷಣವೆ ಕಚೇರಿಯಲ್ಲಿ ಅರ್ಧಕ್ಕೆ ಇಳಿಸಿದ್ದ ಧ್ವಜವನ್ನು ಮೇಲಕ್ಕೇರಿಸಲಾಯಿತು.[ಅಮ್ಮ ಸ್ಥಿತಿ ಗಂಭೀರ, ಅಪೋಲೋದಿಂದ ರೋಗಿಗಳ ಸ್ಥಳಾಂತರ]

ಅಮ್ಮನಿಗೆ ಮರುಹುಟ್ಟು ಸಿಕ್ಕ ಸಂಭ್ರಮದಲ್ಲಿ ಕಾರ್ಯಕರ್ತರು ಹುಚ್ಚೆದ್ದು ಕುಣಿದಾಡಿದರು. ಆದರೆ, ಆತಂಕದ ಪರಿಸ್ಥಿತಿ ಮುಂದುವರೆದಿದ್ದು, ಎಐಎಡಿಎಂಕೆ ಶಾಸಕರು, ಸಚಿವರು ಹಾಗೂ ಸಂಸದರ ನಡುವೆ ಉನ್ನತ ಮಟ್ಟದ ಸಭೆ ನಿಗದಿಯಾಗಿದೆ.

English summary
There was absolute confusion and chaos at Chennai. While media reports stated that the Tamil Nadu Chief Minister had passed away, the AIADMK was quick to lower the flag at their party office at half mast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X