ವಿದ್ಯಾರ್ಥಿಗಳ ಪ್ರೀತಿಗೆ ಕರಗಿದ ಅಧಿಕಾರಿಗಳು, ಶಿಕ್ಷಕನ ವರ್ಗಾವಣೆ ರದ್ದು
Recommended Video

ಚೆನ್ನೈ, ಜೂನ್ 23: ವರ್ಗಾವಣೆ ಆದ ಮೆಚ್ಚಿನ ಶಿಕ್ಷಕನನ್ನು ತಬ್ಬಿ ಅಳುತ್ತಿರುವ ವಿದ್ಯಾರ್ಥಿಗಳ ಪೊಟೊ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ವಿದ್ಯಾರ್ಥಿಗಳ ಪ್ರೀತಿಗೆ ಅಧಿಕಾರಿಗಳು ಕರಗಿದ್ದು, ಆ ಶಿಕ್ಷಕನ ವರ್ಗಾವಣೆಯನ್ನು ರದ್ದು ಮಾಡಿದ್ದಾರೆ.
ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ವೇಲಿಯಾಗಾರಂ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಭಗವಾನ್ (26) ಗೆ ವರ್ಗಾವಣೆ ಆಗಿತ್ತು. ಆದರೆ ವಿಷಯ ತಿಳಿದ ವಿದ್ಯಾರ್ಥಿಗಳು ಶಿಕ್ಷಕನನ್ನು ಹೋಗಲು ಬಿಡದೆ ತಬ್ಬಿಕೊಂಡು ಅಳುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕನನ್ನು ಶಾಲೆ ಬಿಟ್ಟು ಹೋಗದಂತೆ ತಡೆ ಹಿಡಿದು ಪ್ರತಿಭಟನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸುದ್ದಿಯಾಗಿತ್ತು. ಶಿಕ್ಷಕನ ವರ್ಗಾವಣೆ ರದ್ದು ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಕೇಳಿಬಂದಿತ್ತು.

ಇದೀಗ ವಿದ್ಯಾರ್ಥಿಗಳ ಪ್ರೀತಿಗೆ ಮಣಿದಿರುವ ತಮಿಳುನಾಡು ಶಿಕ್ಷಣ ಇಲಾಖೆ, ಶಿಕ್ಷಕ ಭಗವಾನ್ ವರ್ಗಾವಣೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದು, ಆತನನ್ನು ಅದೇ ಶಾಲೆಯಲ್ಲಿ ಮುಂದುವರೆಯುವಂತೆ ಮಾಡಿದೆ. ವಿದ್ಯಾರ್ಥಿಗಳ ನಿಷ್ಕಲ್ಮಷ ಪ್ರೀತಿಗೆ ಸಿಕ್ಕ ಜಯ ಇದಾಗಿದೆ.












Click it and Unblock the Notifications