• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಮಲ್ ಹಾಸನ್ ಮೇಲೆ ಚಪ್ಪಲಿ ಎಸೆತ, ದೂರು ದಾಖಲು

|

ಚೆನ್ನೈ, ಮೇ 16: ನಟ, ಮಕ್ಕಳ ನೀಧಿ ಮಯ್ಯಂ ಪಕ್ಷದ ನಾಯಕ ಕಮಲ್ ಹಾಸನ್ ಅವರ ಮೇಲೆ ಅಪರಿಚಿತರು ಚಪ್ಪಲಿ ಎಸೆದ ಘಟನೆ ಬುಧವಾರ ನಡೆದಿದೆ.

ಬುಧವಾರ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಕಮಲ್ ಹಾಸನ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲ ಚಪ್ಪಲಿ ಎಸೆಯಲಾಗಿದ್ದು, ಅದು ಅವರಿಗೆ ತಾಕದೆ, ಜನರ ಗುಂಪಿನ ನಡುವೆ ಬಂದು ಬಿದ್ದಿದೆ.

ಮೊದಲ ಉಗ್ರ ಹಿಂದು: ಕಮಲ್ ಹಾಸನ್ ಹೇಳಿಕೆಗೆ ಪಕ್ಷದ ಸ್ಪಷ್ಟನೆ

ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಮತ್ತು ಹನುಮಾನ್ ಸೇನೆಯ ಒಟ್ಟು ಹನ್ನೊಂದು ಜನರ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ.

ಸ್ವತಂತ್ರ ಭಾರತದ ಮೊತ್ತಮೊದಲ ಉಗ್ರ ಒಬ್ಬ ಹಿಂದು: ಕಮಲ್ ಹಾಸನ್

ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19 ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಕಮಲ್ ಹಾಸನ್ ಮೇ 13 ರಂದು ಮಾತನಾಡುತ್ತ, "ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು" ಎಂದಿದ್ದರು.

ಪಶ್ಚಿಮ ಬಂಗಾಳ: ಅವಧಿಗೆ ಮುನ್ನಾ ಪ್ರಚಾರ ಅಂತ್ಯಕ್ಕೆ ಆಯೋಗ ಆದೇಶ

"ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆ ಎಂದರೆ ಸಾಕಿತ್ತು, ಆದರೆ ಮೊದಲ ಭಯೋತ್ಪಾದಕ 'ಹಿಂದು' ಎಂಬ ಪದವನ್ನು ಬಳಕೆ ಮಾಡುವ ಅಗತ್ಯ ಏನಿತ್ತು. ಮುಸ್ಲಿಮರು ಭಯೋತ್ಪಾದನೆ ಮಾಡಿದರೆ ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುತ್ತಿರಿ. ಆದರೆ ಈಗ ನೀವು 'ಹಿಂದು' ಎಂಬ ಪದ ಬಳಕೆ ಮಾಡುತ್ತಿರುವುದೇಕೆ" ಎಂದು ಅವರನ್ನು ಹಲವರು ಪ್ರಶ್ನಿಸಿದ್ದರು.

ಚೆನ್ನೈ ಸೆಂಟ್ರಲ್ ರಣಕಣ
ಡೆಮೊಗ್ರಫಿಕ್ಸ್
ಜನಸಂಖ್ಯೆ
16,31,196
ಜನಸಂಖ್ಯೆ
  • ಗ್ರಾಮೀಣ
    0.00%
    ಗ್ರಾಮೀಣ
  • ನಗರ
    100.00%
    ನಗರ
  • ಎಸ್ ಸಿ
    17.84%
    ಎಸ್ ಸಿ
  • ಎಸ್ ಟಿ
    0.29%
    ಎಸ್ ಟಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Some people thrown slippers at actor-turned-politician Kamal Haasan on Wednesday during election campaign. This act came ಲೋಕಸ3 days after, his 'first terrorist is Hindu' comment.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more